ಜೇವರ್ಗಿ: ಜಗತ್ತು ಮಲಗಿದಾಗ ಪತ್ರಕರ್ತರು ಎಚ್ಚರವಿರುತ್ತಾರೆ ಎಂದು ತಹಸಿಲ್ದಾರ್ ವಿನಯಕುಮಾರ್ ಪಾಟೀಲ್ ಅವರು ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲ್ಲೂಕು ಘಟಕವು ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ ಎಂದರು.
ಯಾರೇ ಕೆಲಸ ಮಾಡಿದರೂ ಸಹ 8 ತಾಸು ಎಂಬ ನಿಯಮ ಇರುತ್ತದೆ. ಆದಾಗ್ಯೂ, ಪತ್ರಿಕೆಗಳವರು ದಿನದ 24 ಗಂಟೆಗಳವರೆಗೂ ಕಾರ್ಯನಿರ್ವಹಿಸುತ್ತಾರೆ. ಮಹಾಮಾರಿ ಕೋವಿಡ್ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಮೂರನೇ ಅಲೆಯ ಭೀತಿಯಲ್ಲಿಯೂ ಸಹ ಅವರು ತಮ್ಮ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಕೋವಿಡ್ ಸೋಂಕಿಗೆ ಸಿಲುಕಿ ರಾಜ್ಯದಲ್ಲಿ ಸುಮಾರು 100ಕ್ಕಿಂತ ಹೆಚ್ಚು ಪತ್ರಕರ್ತರು ಮೃತಪಟ್ಟಿದ್ದಾರೆ. ಅವರ ಕಾರ್ಯವನ್ನು ನಾವೆಂದಿಗೂ ಮರೆಯಲಾಗದು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳಂತೆಯೇ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವು ಕಾರ್ಯನಿರ್ವಹಿಸುತ್ತಿದೆ. ಈಗ ಪತ್ರಿಕಾ ರಂಗವು ಪತ್ರಿಕೋದ್ಯಮವಾಗಿ ಬೆಳೆಯುತ್ತಿದೆ. ಉದ್ಯಮ ಎಂಬುದು ಲಾಭದಾಯಕ. ಆ ಶಬ್ದಕ್ಕೆ ಪತ್ರಿಕೋದ್ಯಮ ಅಪ್ಯಾಯಮಾನವಾಗಿದೆ ಎಂದು ಅವರು ಬಣ್ಣಿಸಿದರು.
ಕನ್ನಡ ಪತ್ರಿಕೋದ್ಯಮವು ಮಂಗಳೂರು ಸಮಾಚಾರ್ ಮೂಲಕ ಬೆಳೆದು ಬಂದಿರುವುದನ್ನು ವಿವರಿಸಿದ ಅವರು, ಪತ್ರಿಕೆಗಳನ್ನು ಓದದೇ ಇದ್ದರೆ ದೈನಂದಿನ ಬದುಕು ಸಾಗದು ಎಂಬ ರೀತಿಯಲ್ಲಿ ಪ್ರತಿಯೊಬ್ಬರಿಗೂ ಪತ್ರಿಕೆಗಳು ಬೇಕು ಎಂದರು.
ಪತ್ರಿಕೆಗಳು ಹಾಗೂ ಮಾಧ್ಯಮಗಳು ಸ್ಥಳೀಯವಾಗಿ ಸೇರಿದಂತೆ ಜಿಲ್ಲೆ, ನಾಡು, ಹೊರನಾಡು ಕುರಿತು ಸಮಗ್ರ ಮಾಹಿತಿಗಳನ್ನು ಕೊಡುತ್ತವೆ ಎಂದು ಹೇಳಿದ ಅವರು, ಅಪಘಾತಕ್ಕೆ ಅವಸರವೇ ಕಾರಣ ಎಂಬಂತೆ ಸುದ್ದಿ ಕೊಡುವ ಭರದಲ್ಲಿ ಪ್ರತ್ಯಕ್ಷ ಕಂಡು ಪ್ರಮಾಣಿಸಿ ನೋಡದೇ ತರಾತುರಿಯಲ್ಲಿ ಸುದ್ದಿಗಳನ್ನು ಕೊಟ್ಟರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕಾಂಗ್ರೆಸ್ ಮುಖಂಡ ರಾಜಶೇಖರ್ ಸೀರಿ ಅವರು ಮಾತನಾಡಿ, ತಾಲ್ಲೂಕಿನ ಪತ್ರಕರ್ತರು ಅತ್ಯಂತ ನಿರ್ಭೀಡೆಯಿಂದ ವಸ್ತುಸ್ಥಿತಿ ಆಧಾರದ ಮೇಲೆ ಸುದ್ದಿಗಳನ್ನು ಕೊಡುತ್ತಾರೆ. ಹೀಗಾಗಿ ಅವರ ಕೊಡುಗೆ ಮರೆಯಲಾಗದು ಎಂದರು. ಕಾರ್ಯಕ್ರಮ ಉದ್ಘಾಟಿಸಬೇಕಾಗಿದ್ದ ಶಾಸಕರೂ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಅವರು ಗಣ್ಯರೊಬ್ಬರ ನಿಧನದಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ ಎಂದು ಅವರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಮುಂಬಯಿನ ಉದ್ಯಮಿ, ತಾಲ್ಲೂಕಿನ ಅಂಕಲಗಿ ನಿವಾಸಿ ಸಮಾಧಾನ್ ಪೂಜಾರಿ ಅವರು ಮಾತನಾಡಿ, ಕೋವಿಡ್ ಭೀತಿಯ ನಡುವೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಸರಳವಾಗಿ ಜರುಗಿದೆ. ಈಗ ಮೂರನೇ ಅಲೆಯ ಭೀತಿ ಇದ್ದು, ಮುಂದಿನ ವರ್ಷ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ಸಮಾಧಾನ್ ಪೂಜಾರಿ, ಪತ್ರಕರ್ತ ಬಸವರಾಜ್ ಚಿನಿವಾರ್, ಧನರಾಜ್ ರಾಠೋಡ್ ಮುತ್ತಕೋಡ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಾಲಕ ಶ್ರೇಯಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸಿ, ಪತ್ರಕರ್ತರಿಗೆ ಸರ್ಕಾರವು ಸರ್ವ ರೀತಿಯ ಸೌಲಭ್ಯಗಳನ್ನು ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್ ಹರನಾಳ್, ಬೈಲಪ್ಪ ಪೂಜಾರಿ ನೆಲೋಗಿ, ರೇವಣಸಿದ್ದಪ್ಪಗೌಡ ಕಮಾನಮನಿ, ಭಗವಂತ್ರಾಯ್ ಅಂಕಲಗಿ, ಭೀಮರಾಯ್ ನಗನೂರ್, ತುಳಜಾರಾಮ್ ರಾಠೋಡ್ ಹರವಾಳ್, ನೀಲಕಂಠ್ ಅವಂಟಿ, ವಿಲಾಸರಾಜ್, ವಿ.ಬಿ. ಹಿರೇಗೌಡ, ಶಂಕರ್ ಚವ್ಹಾಣ್ ಆಳಂದ್, ಲಿಂಗಣ್ಣ ರದ್ದೇವಾಡಗಿ, ಸುದೀಂದ್ರ ಇಜೇರಿ, ಭಗವಂತ್ರಾಯ್ ಬೆಣ್ಣೂರ್, ಮಲ್ಲಿಕಾರ್ಜುನ್ ಗಂವ್ಹಾರ್, ಸಂತೋಷ್ ಪಾಟೀಲ್ ಇಟಗಾ, ಸಿದ್ದು ಗಜ, ಶ್ರೀಮಂತ್ ಧನ್ನೇಕರ್, ಶ್ರೀಹರಿ ಕರಕಿಹಳ್ಳಿ, ಬಸವರಾಜ್ ಬಾಗೇವಾಡಿ, ಶಿವಲಿಂಗಪ್ಪ ವಕೀಲರು ಸೊನ್ನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಮರೆಪ್ಪ ಬೇಗಾರ್, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಹೆಗಡೆ ಸೊನ್ನ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭರತ ನಾಟ್ಯ ಮಾಡಿದ ಬಾಲಕಿ ಶ್ರೇಯಾ, ಬಂಜಾರಾ ನೃತ್ಯ ಮಾಡಿದ ಇನ್ನೋರ್ವ ಬಾಲಕಿಗೆ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೂ ಸನ್ಮಾನಿಸಲಾಯಿತು.
ಸಾರೋಟಿನಲ್ಲಿ ಪುರಸ್ಕøತರು: ಸಮಾರಂಭಕ್ಕೂ ಮುನ್ನ ಪಟ್ಟಣದ ವಿಜಯಪುರ ಸರ್ಕಲ್‍ನಿಂದ ಕನ್ನಡಭವನದವರೆಗೆ ಪ್ರಶಸ್ತಿ ಪುರಸ್ಕøತರನ್ನು ಭವ್ಯ ಸಾರೋಟಿನಲ್ಲಿ ಕಲಾಮೇಳಗಳ ಮೆರವಣಿಗೆಯಲ್ಲಿ ಕರೆತರಲಾಯಿತು.
ಮೆರವಣಿಗೆಗೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಹಾಗೂ ಜೆಡಿ(ಎಸ್) ಯುವ ಮುಖಂಡ ವಿಜಯಕುಮಾರ್ ಹಿರೇಮಠ್ ಅವರು ಚಾಲನೆ ನೀಡಿದರು. ಸಾನಿಧ್ಯವನ್ನು ಸೊನ್ನದ ಡಾ. ಶಿವಾನಂದ್ ಸ್ವಾಮೀಜಿ ವಹಿಸಿದ್ದರು.
ಬಂಜಾರಾ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಹಲಿಗೆಯ ಹೆಜ್ಜೆಗೆ ತಕ್ಕಂತೆ ಹೆಜ್ಜೆ ಹಾಕಿದ ಕಲಾವಿದರ ಆಕರ್ಷಕ ಭಂಗಿಗಳ ಕುಣಿತವು ನೋಡುಗರಿಗೆ ಮನರಂಜನೆಯ ಜೊತೆಗೆ ರಸದೌತಣವನ್ನು ನೀಡಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…