ಕಲಬುರಗಿ: ಅಗತ್ಯಕ್ಕಿಂತ ಕಡಿಮೆ ಬಿಳಿರಕ್ತ ಕಣಗಳಿಂದ ಬಳಲುತ್ತಿದ್ದ ಗರ್ಭಿಣಿಯೊರ್ವಳನ್ನು ಅತ್ಯಂತ ತ್ವರಿತಗತಿಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಯಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ರಿಂಗ್ ರಸ್ತೆಯ ಬಾರೆ ಹಿಲ್ಸ್ ಗಣೇಶ ನಗರದಲ್ಲಿರುವ ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಅಪರೂಪದ ಕಠಿಣ ಹೆರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ವೈದ್ಯ ಡಾ. ಫಾರುಖ ಅಹ್ಮದ್ ಮನೂರ ತಿಳಿಸಿದರು.
ಸೇಡಂ ಮೂಲದ 26 ವರ್ಷದ ವಯಸ್ಸಿನ ದೀಪಾ ಬಸವರಾಜ್ ಜೆಮಶೆಟ್ಟಿ ಎಂಬಾಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದವರು. ಸದ್ಯ ತಾಯಿ ಮಗು ಆರೋಗ್ಯ ಸುಧಾರಿಸಿದ್ದು, ಒಂದು ಮಗು 2.1 ಕೆಜಿ ಮತ್ತೊಂದು ಮಗು 2.2 ಕೆಜಿ ದೇಹ ತೂಕ ಹೊಂದಿವೆ. ಎರಡೂ ಹೆಣ್ಣು ಶಿಶು ಇವೆ. ಕೇವಲ 35 ವಾರಗಳು ತುಂಬಿದ್ದ ಬಾಣಂತಿಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದವು. ಇದರಿಂದ ಆತಂಕದಲ್ಲಿದ್ದ ಕುಟುಂಬ ನಮ್ಮ ಆಸ್ಪತ್ರೆಗೆ ಸಂಪರ್ಕಿಸಿ ದಾಖಲಾದರು.
ಗರ್ಭಿಣಿಗೆ ರಕ್ತ ಪರೀಕ್ಷೆ ಮತ್ತಿತರರ ಪರೀಕ್ಷೆಗೊಳಪಡಿಸಿದ್ದಾಗ ಹೆಚ್ಚಿನ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡ ಹಾಗೂ ಗರ್ಭಕೋಶದಲ್ಲಿ ತೊಂದರೆ ಇರುವ ಬಗ್ಗೆ ವರದಿಗಳು ಬಂದವು. ಇದನ್ನು ಸ್ತ್ರೀರೋಗ ತಜ್ಞೆ ಹೀಗೆ ಬೇರೆ ಬೇರೆ ಕಾಯಿಲೆಗಳಿಂದ ಸ್ತ್ರೀರೋಗ ತಜ್ಞೆ ಸುಮಿಯಾ ಸನ್ನಾ ನೇತೃತ್ವದ ಪರಿಣಿತ ವೈದ್ಯರ ತಂಡ ಸವಾಲಾಗಿ ಸ್ವೀಕರಿಸಿದ್ದರು. ತುರ್ತು ಚಿಕಿತ್ಸೆ ಘಟಕ (ಐಸಿಯು)ನಲ್ಲಿ ಗರ್ಭಿಣಿಯನ್ನು ದಾಖಲಿಸಿ ಕೇವಲ ಒಂದು ಗಂಟೆದೊಳಗೆ ಯಶಸ್ವಿಯಾಗಿ ಹೆರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು
ಸದ್ಯ 1.50 ಲಕ್ಷ ಬಿಳಿರಕ್ತಕಣಗಳು ಹೊಂದಿರುವ ಬಾಣಂತಿಯ ಮೊಗದಲ್ಲಿ ನಗು ಮುಖ ಅರಳಿದೆ ಎಂದು ಮಾಹಿತಿ ನೀಡಿದರು. ಶಸ್ತ್ರಚಿಕಿತ್ಸೆಗಿಂತ ಮೊದಲು 19 ರಿಂದ 30 ಸಾವಿರ ಬಿಳಿರಕ್ತಕಣಗಳಿಂದ ಬಳಲುತ್ತಿದ್ದ ಗರ್ಭಿಣಿ ಮತ್ತು ಶಿಶುಗಳ ಜೀವಕ್ಕೆ ಹಾನಿ ಆಗುವ ಸಾಧ್ಯತೆಗಳಿದ್ದವು ಎಂದು ಸ್ತ್ರಿರೋಗ ತಜ್ಞೆ ಸುಮಿಯಾ ಸನ್ನಾ ತಿಳಿಸಿದರು.
ಆಸ್ಪತ್ರೆಯ ಸಿಇಓ ಡಾ. ಲಕ್ಷ್ಮೀಕಾಂತ ಮೇತ್ರೆ ಮಾತನಾಡಿ, ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದೆ. ರೋಗಿಗಳಿಗೆ ಬೇಧಭಾವ ಎನ್ನದೆ ಎಲ್ಲರಿಗೂ ಒಂದೇ ದೃಷ್ಟಿಕೋನದಿಂದ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಕಡುಬಡವರು, ಮಧ್ಯಮ ವರ್ಗದವರಿಗಾಗಿ `ಮನೂರ ಹೆಲ್ತ್ ಕಾರ್ಡ್ ಯೋಜನೆ ಜಾರಿಗೊಳಿಸಲಾಗಿದೆ. ಒಂದು ವರ್ಷದ ಮಟ್ಟಿಗೆ ಶೇ. 50 ರಷ್ಟು ರಿಯಾಯತಿ ದರದಲ್ಲಿ ಹೊರರೋಗಿ ಚಿಕಿತ್ಸೆ, ಶೇ. 20 ರಷ್ಟು ಒಳರೋಗಿ ಚಿಕಿತ್ಸಾ ರಿಯಾಯತಿ, ಶೇ. 10 ರಷ್ಟು ಔಷಧಿಗಳ ಮೇಲೆ ರಿಯಾಯತಿ ನೀಡಲಾಗುತ್ತದೆ. ಇಚ್ಚೆವುಳ್ಳವರು ವೈಯಕ್ತಿಕವಾಗಿ ಹೆಲ್ತ್ ಆರೋಗ್ಯ ಕಾರ್ಡ್ ಪಡೆಯಲು 600 ರೂ. ಶುಲ್ಕ ನೀಡಿ ಹೆಸರು ನೋಂದಾಯಿಸಬಹುದು ಎಂದು ಮನವಿ ಮಾಡಿದರು.
ಯಶಸ್ವಿ ಶಸ್ತ್ರಿ ಚಿಕಿತ್ಸೆ ತಂಡದಲ್ಲಿ ಸ್ತ್ರೀರೋಗ ತಜ್ಞೆ ಸುಮಿಯಾ ಸನ್ನಾ, ಅರವಳಿಕೆ ತಜ್ಞರಾದ ಡಾ. ಶಫೀಯಾ ತರನ್ನುಮ್, ಡಾ. ಅನಿಲಕುಮಾರ ಕೊಣ್ಣೂರ್, ಸಿಇಓ ಡಾ. ಲಕ್ಷ್ಮೀಕಾಂತ ಮೇತ್ರಿ, ವೈದ್ಯಾಧಿಕಾರಿಗಳಾದ ಡಾ. ಸನ್ನಾ, ಡಾ. ಜುಬೇದಾ, ಮ್ಯಾನೇಜರ್ ಜೆ.ಸಿ. ಸೂರ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…