ಬಿಸಿ ಬಿಸಿ ಸುದ್ದಿ

ತಡಕಲ್ ಗ್ರಾಪಂ ಆಡಳಿತ ವೈಫಲ್ಯ ಖಂಡಿಸಿ ಧರಣಿ ಸತ್ಯಾಗ್ರಹ

ಆಳಂದ: ತಾಲೂಕಿನ ತಡಕಲ್ ಗ್ರಾಮ ಪಂಚಾಯತ್ ಆಡಳಿತ ಸಂಪೂರ್ಣ ವೈಫಲ್ಯದಿಂದ ಕೂಡಿದೆ ತಕ್ಷಣವೇ ಮೇಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸರಿಪಡಿಸಬೇಕು ಎಂದು ಪ್ರತಿಪಕ್ಷ ಬೆಂಬಲಿತ ಐವರು ಸದಸ್ಯರ ನೇತೃತ್ವದಲ್ಲಿ ಗ್ರಾಮದ ಕೆಲಸವರು ಪಂಚಾಯತ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ತಡಕಲ್ ಗ್ರಾಪಂ ಕಚೇರಿಯ ಮುಂದೆ ಮಂಗಳವಾರ ಗ್ರಾಪಂ ಸದಸ್ಯರಾದ ವಿಶ್ವನಾಥ ಬಿ. ಪವಾಡಶೆಟ್ಟಿ, ನಾಗೀಂದ್ರ ಥಂಭೆ, ಶರಣಪ್ಪ ಜಮಾದಾರ, ಪಾರ್ವತಿಬಾಯಿ ಥಂಭೆ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಬೇಡಿಕೆಗೆ ಒತ್ತಾಯಿಸಿದರು.

ಸದಸ್ಯ ವಿಶ್ವನಾಥ ಬಿ. ಪವಾಡಶೆಟ್ಟಿ ಅವರು ಮಾತನಾಡಿ, ಗ್ರಾಪಂ ಅಧ್ಯಕ್ಷೆಯ ಪತಿ ಹಾಗೂ ಲೆಕ್ಕ ಸಹಾಯಕರ ಪತಿಯತರೆ ಆಡಳಿತ ಕಾರೋಬಾರ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೂ ಸಹಿತ ಚಿತ್ರಕರಿಸಲಾಗಿದ್ದು, ಮೇಲಾಧಿಕಾರಿಗಳು ತಿಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು.

ಪಂಪ್ ಆಪರೇಟ್ ಹುದ್ದೆಯಲ್ಲಿದ್ದ ಸಿಬ್ಬಂದಿವೊಬ್ಬರು ಕಂಪ್ಯೂಟರ್ ಆಪರೇಟರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಗ್ರಾಪಂ ಆಡಳಿತಕ್ಕೆ ಸಂಬಂಧಿತ ದಾಖಲೆಗಳನ್ನು ಪಂಚಾಯತ್ ಕಚೇರಿಯಲ್ಲಿ ಇರದೆ ಮನೆಯಲ್ಲೇ ಇಟ್ಟುಕೊಳ್ಳುತ್ತಿದ್ದಾರೆ. ಕಾಮಗಾರಿಯಾದ ಕ್ರಿಯಾ ಯೋಜನೆಯ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಹಲವು ಬಾರಿ ಕೇಳಿದ ಖರ್ಚು ವೆಚ್ಚದ ಲೆಕ್ಕವೇ ನೀಡುತ್ತಿಲ್ಲ. ತೆರಿಗೆÀ ವಸೂಲಾತಿಯ ಹಣದ ಲೆಕ್ಕ ನೀಡಬೇಕು. 15ನೇ ಹಣಕಾಸಿನ ಲೆಕ್ಕಪತ್ರ ವಿವರಣೆ, ನೀರು ನಿರ್ವಾಹಣೆ ಹಾಗೂ ನೈರ್ಮಲ್ಯದ ಖರ್ಚು ವ್ಯಚ್ಚದ ದಾಖಲಾತಿ ಸಮೇತ ಲೆಕ್ಕವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗ್ರಾಪಂನ ಹಿಂದಿನ ನಡಾವಳಿಯ ಪುಸ್ತಕದಲ್ಲಿ ಇಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇರುವುದಕ್ಕೆ ಕಾರಣ ತಿಳಿಸಬೇಕು ಹಾಗೂ ತಕ್ಷಣವೇ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕ ಎಂದರು.

ತಡಕಲ್ ಗ್ರಾಮದಲ್ಲಿನ ಸರ್ಕಾರಿ ಬಾವಿಯ ನೀರು ತುಂಬಿ ಹೊಲಸಾಗಿದ್ದು ಸ್ವಚ್ಛಗೊಳಿಸಿ ಶುದ್ದ ನೀರು ನಿಲ್ಲಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸದಸ್ಯ ನಾಗೇಂದ್ರ ಥಂಭೆ ಅವರು, ಕಣ್ಮಸ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಬೇಕು. ಕಚ್ಚಾರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯರಾದ ಶರಣಪ್ಪ ಜಮಾದಾರ, ಪಾರ್ವತಿಬಾಯಿ ಥಂಭೆ ಸೇರಿದಂತೆ ತಾಪಂ ಮಾಜಿ ಅಧ್ಯಕ್ಷ ಬಸವರಾಜ ಬವಾಡಶೆಟ್ಟಿ, ಶ್ರೀಮಂತ ಕೊಡ್ಲೆ, ಧರ್ಮಣ್ಣಾ ಪೂಜಾರಿ, ಬಸವರಾಜ ಬಿರಾದಾರ, ನಾಗಣ್ಣಾ ಗೌರೆ, ಸಾಯಬಣ್ಣಾ ಗುಗರೆ, ಚಂದ್ರಕಾಂತ ಮಾಳಗೆ, ಶ್ರೀಶೈಲ ಗುಗರೆ, ಬಸಣ್ಣಾ ಅಳ್ಳೆ, ಸುಭಾಷ ಹಳಖೇಡೆ, ಅನೀಲ ಸ್ವಾಮಿ, ಚನ್ನವೀರ ರುದ್ರವಾಡಿ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ಧರಣಿ ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಧರಣಿ ನಿರತರಿಂದ ಮನವಿ ಸ್ವೀಕರಿಸಿ ಬೇಡಿಕೆಗೆ ಸ್ಪಂದಿಸಲಾಗುವುದು. ಕಾಲಾವಕಾಶ ನೀಡಬೇಕು ಎಂದು ಭರವಸೆ ನೀಡಿದ ಮೇಲೆ ಮುಖಂಡರು ಧರಣಿ ಹಿಂದಕ್ಕೆ ಪಡೆದುಕೊಂಡರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago