ಕಲಬುರಗಿ: ಮಕ್ಕಳು ತಮಗೆ ಹೆತ್ತವರನ್ನು ಭಾರವಲ್ಲವೆಂದು ತಿಳಿದು ಗೌರವಿಸುವ, ಹೆತ್ತವರ ಇಳಿವಯಸ್ಸಿನಲ್ಲಿ ಅವರಿಗೆ ರಕ್ಷಣೆ ನೀಡುವ ಭಾರತೀಯ ಶ್ರೇಷ್ಟ ಸಂಸ್ಕೃತಿಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉನ್ನತವಾದ ಸಾಧನೆಯನ್ನು ಮಾಡಬೇಕೆಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಲಕ್ಷ್ಮೀನಾರಾಯಣ ಎಸ್.ಎನ್ ಯುವ ಜನತೆಗೆ ಕಿವಿಮಾತು ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್‌ಬಿ ಗ್ರೀನ ಪಾರ್ಕ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ’ಕೆಎಚ್‌ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ ಮತ್ತು ’ಸ್ನೇಹ ಸಂಗಮ ವಿವಿಧೋದ್ದೇಶ ಸಂಘ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಂಜೆ ಜರುಗಿದ ಹೆತ್ತವರ ಪೂಜಿಸಿ, ಸಂಸ್ಕಾರ ಸಮಾಜ ನಿರ್ಮಿಸಿ ಎಂಬ ಘೋಷವಾಕ್ಯದೊಂದಿಗೆ ’ಹೆತ್ತ ತಾಯಿ-ತಂದೆಯರ ಪಾದಪೂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶೇಷ ಉಪನ್ಯಾಸ ನೀಡಿದ ಪ್ರವಚನಕಾರ ಸಂಗಮೇಶ ಶಾಸ್ತ್ರಿ ಮಾಶಾಳ, ಹಿರಿಯರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ನಾವು ನಮ್ಮ ಹೆತ್ತವರನ್ನು ಚೆನ್ನಾಗಿ ಆರೈಕೆ ಮಾಡಿದರೆ, ಅದನ್ನು ಅನುಕರಣೆ ಮಾಡಿ ನಮ್ಮ ಮಕ್ಕಳು ಮುಂದೆ ನಮ್ಮನ್ನು ಸರಿಯಾಗಿ ರಕ್ಷಣೆ ಮಾಡುತ್ತಾರೆ. ಉತ್ತಮ ಸಂಸ್ಕಾರ ಬೆಳೆಸುವುದು ಅವಶ್ಯಕವಾಗಿದೆಯೆಂದು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು.
ಪಾಲಕರಾದ ಮಾಳಾಬಾಯಿ ಎ.ಪೂಜಾರಿ, ವಿಠಾಬಾಯಿ ಎಸ್.ಅಟ್ಟೂರ, ಭೀಮರಾವ ಖೇಳಗಿ, ನಾಗೇಂದ್ರಯ್ಯ ಮಠ, ಮಮತಾ ಲಗಶೆಟ್ಟಿ, ಪದ್ಮಾವತಿ ಎಂ.ಬುಜ್ಜಿ, ಲಕ್ಷ್ಮೀಬಾಯಿ ಬಿ.ಅಟ್ಟೂರ, ಮಹಾನಂದ ಲಿಂಗೆ, ಅಂಬಾರಾಯ ವಾಡಿ, ಶಾಂತಪ್ಪ ಪಡನೂರ, ಅನ್ನಪೂರ್ಣ ಪಾಟೀಲ ಅವರಿಗೆ ತಮ್ಮ ಮಕ್ಕಳು ಪಾದಪೂಜೆ ನೆರವೇರಿಸಿ ಗೌರವಿಸಿದರು. ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ಜರುಗಿದ ಹಾಸ್ಯ ಮತ್ತು ರಾಜು ಹೆಬ್ಬಾಳ ಅವರಿಮದ ಜರುಗಿದ ಜಾನಪದ ಗೀತೆಗಳು ಮನಸೂರೆಗೊಳಿಸಿತು. ಪಾದಪೂಜೆ ನೆರೆದಿದ್ದವರನ್ನು ಭಾವಪರವಶರನ್ನಾಗಿಸಿತು. ಈ ಕಾರ್ಯಕ್ಕೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜೀವಕುಮಾರ ಶೆಟ್ಟಿ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ, ಎಚ್.ಬಿ.ಪಾಟೀಲ, ಸಂಗಮೇಶ್ವರ ಸರಡಗಿ, ಸೂರ್ಯಕಾಂತ ಸಾವಳಗಿ, ಮಲಕಾರಿ ಪೂಜಾರಿ, ಶಿವಕಾಂತ ಚಿಮ್ಮಾ, ವೀರೇಶ ಬೋಳಶೆಟ್ಟಿ ನರೋಣಾ, ಬಸವರಾಜ ಹೆಳವರ ಯಾಳಗಿ, ದತ್ತಾತ್ರೇಯ ಸಾಬಣಿ, ಶ್ರೀನಿವಾಸ ಬುಜ್ಜಿ, ವೀರಯ್ಯ ಹಿರೇಮಠ, ರವೀಂದ್ರ ಗುತ್ತೇದಾರ ಕಲ್ಯಾಣರಾವ, ಮಲ್ಲಿನಾಥ ಕುಮಸಿ, ಮಹೇಶ ತೆಲೆಕುಣಿ, ಮಲ್ಲಿನಾಥ ಮಾಸ್ತರ್, ದಿಲಿಪ ಬಕರೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…