ಶರಣರ ವಚನಗಳು ನಮ್ಮ ತನು-ಮನ-ಭಾವ ಶುದ್ಧವನ್ನಾಗಿ ಮಾಡುತ್ತವೆ. ಶರಣರು ಸಾಧನೆಗಾಗಿ ಬಂದ ಕಾಯಗೆ ಪ್ರಸಾದಕಾಯವೆಂದು ತಿಳಿದರು. ಅನೇಕರು ಶರೀರದ ನಶ್ವರತೆಯನ್ನು ಹೇಳಿದ್ದಾರೆ.
ಆದರೆ ಶರಣರು ಯಾವುದೇ ಸಾಧನೆಗಾಗಿ ಶರೀರವೇ ಮುಖ್ಯವೆಂದು ಸಾರಿದ್ದಾರೆ. ಸಕಲೇಶ ಮಾದರಸರು ತಮ್ಮ ಒಂದು ವಚನದಲ್ಲಿ “ಕಾಯದಿಂದ ಗುರುವ ಕಂಡೆ, ಕಾಯದಿಂದ ಲಿಂಗವ ಕಂಡೆ, ಕಾಯದಿಂದ ಜಂಗಮವ ಕಂಡೆ, ಕಾಯದಿಂದ ಪ್ರಸಾದ ಕಂಡೆ, ಕಾಯದಿಂದ ಸಕಲೇಶ್ವರ ದೇವರ ಪೂಜಿಸುವಲ್ಲಿ ಉತ್ತರಸಾಧಕನಾದೆಯಲ್ಲಾ ಎಲೇ ಕಾಯವೆ” ಎಂದು ಹೇಳುತ್ತಾರೆ.
ಅಂದರೆ ಅರಿವು ಸಂಪಾದನೆ ಮಾಡಬೇಕಾದರೆ ನಮ್ಮ ಕಾಯ ಸರಿಯಾಗಿರುವುದು ಮುಖ್ಯ. ಲಿಂಗದರ್ಶನ ಮಾಡಿಕೊಳ್ಳಬೇಕಾದರೆ ಕಾಯವೇ ಮುಖ್ಯ. ಜಂಗಮ ಸೇವೆ ಅಂದರೆ ಸಮಾಜ ಸೇವೆ ಮಾಡಬೇಕಾದರೆ ಕಾಯ ಬೇಕೆ ಬೇಕು. ಕಾಯದಿಂದಲೇ ಪ್ರಸಾದ ಪಡೆಯಬಹುದು. ಕಾಯದಿಂದಲೇ ಸಕಳೇಶ್ವರ ದೇವರ ಒಲುಮೆಗೆ ಪಾತ್ರರಾಗಬಹುದು. ಒಟ್ಟಾರೆ ಕಾಯದಿಂದಲೇ ಗುರು-ಲಿಂಗ-ಜಂಗಮ-ಪ್ರಸಾದ ಪಡೆಯಲು ಸಾಧ್ಯವಿದೆ. ಹಾಗಾಗಿ ನಾವು ನಮ್ಮ ಶರೀರವನ್ನು ಅತಿಯಾದ ಉಪವಾಸ, ವೃತಾಚರಣೆಗಳು ದೇಹದಂಡನೆ ಮಾಡುವ ಮೂಲಕ ಬಳಲಿಸಬಾರದು.
ಹಾಗೆಯೇ ಅತಿಯಾದ ಆಹಾರವನ್ನು ತಿನ್ನುವ ಮೂಲಕ ಉಬ್ಬಿಸಬಾರದು. ಅದಕ್ಕಾಗಿ ಅಕ್ಕಮಹಾದೇವಿ ಆಹಾರ ಕಿರಿದು ಮಾಡಿರಣ್ಣಾ ಎಂದು ಹೇಳುತ್ತಾರೆ. ಬಸವಣ್ಣನವರು ಕಾಯಗೆ ಪ್ರಸಾದಕಾಯ ಎಂದು ಕರೆದಿದ್ದಾರೆ. ಅಂದರೇ ಈ ಕಾಯ ದೇವರು ಕರುಣಿಸಿದ ಪ್ರಸಾದ. ಹಾಗಾಗಿ ಪ್ರಸಾದ ಕಾಯವನ್ನು ಕೆಡಸಬಾರದು.
ಶರಣ ಬಹುರೂಪಿ ಚೌಡಯ್ಯನವರು ನಮ್ಮ ಶರೀರ ಸುಖಿಯಾಗಿ ಇಟ್ಟುಕೊಳ್ಳಬೇಕಾದರೆ ಮೂರು ಸೂತ್ರಗಳನ್ನು ಹೇಳಿದ್ದಾರೆ. “ಮಿತ ಭೋಜನ, ಮಿತ ವಾಕು, ಮಿತ ನಿದ್ರೆಯ ಮಾಡಿರಣ್ಣಾ ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ ರೇಕಣ್ಣಪ್ರಿಯ ನಾಗಿನಾಥನಲ್ಲಿ ಅಳಿಯದಂತೆ ಉಳಿಹಿಕೊಳ್ಳಿರಣ್ಣ ಯೋಗ ಸಾಧ್ಯವಪ್ಪನಕ್ಕ” ನಾವು ಮಿತಭೋಜನ ಅಂದರೆ ನಮ್ಮ ಶರೀರಕ್ಕೆ ಎಷ್ಟು ಬೇಕು ಅಷ್ಟೇ ಊಟ ಮಾಡಬೇಕು. ಮಿತ ವಾಕು ಎಂದರೆ ಆದಷ್ಟು ನಾವು ಕಡಿಮೆ ಮಾತನಾಡಬೇಕು. ನಮ್ಮ ಮಾತು ತೂಕಬದ್ಧವಾಗಿರಬೇಕು.
ಮಿತ ನಿದ್ರೆ ಎಂದರೆ ಸುಮಾರು 6-8 ತಾಸು ನಿದ್ರೆ ಮಾಡಬೇಕು. ಅತಿಯಾದ ನಿದ್ರೆಯನ್ನು ನಮ್ಮಲ್ಲಿ ಆಲಸ್ಯವನ್ನು ಹುಟ್ಟಿಸುತ್ತದೆ. ಆದರಿಂದ ನಮಗೆ ಸಾಧನೆ ಮಾಡಲು ಆಗುವುದಿಲ್ಲ. ನಾವು ಲಿಂಗಾಂಗ ಸಾಮರಸ್ಯವೆಂಬ ಸಾಧ್ಯವನ್ನು ಸಾಧಿಸಬೇಕಾದರೆ ಚೌಡಯ್ಯನವರು ಹೇಳಿರುವ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ನಮ್ಮ ಶರೀರ ಸರಿಯಾಗಿ ಇರಬೇಕಾದರೆ ನಾವು ದಿನನಿತ್ಯ ಸ್ವಲ್ಪ ಶಾರೀರಿಕ ಶ್ರಮವನ್ನು ಮಾಡಲೇಬೇಕು. ವ್ಯಾಯಾಮ, ಯೋಗ, ವಾಕಿಂಗ್ ಹೀಗೆ ಏನಾದರೂ ಶಾರೀರಕ ಶ್ರಮವನ್ನು ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಶಾರೀರಿಕ ಶ್ರಮ ಕಡಿಮೆ ಆಗುತ್ತಿರುವುದರಿಂದ ನಮ್ಮ ಆರೋಗ್ಯದ ತೊಂದರೆಗಳು ಹೆಚ್ಚಾಗುತ್ತಿವೆ. ಬೌದ್ಧಿಕ ಶ್ರಮ ಬೆಳೆಯುತ್ತಿವೆ.
ಆದರೆ ಶಾರೀರಿಕ ಶ್ರಮ ಕಡಿಮೆ ಆಗುತ್ತಿವೆ. ಶಾರೀರಿಕ ಶ್ರಮದಿಂದ ನಮಗೆ ಹಸಿವಾಗುತ್ತದೆ. ನಮ್ಮ ಪಚನ ಕ್ರಿಯೆ ಸರಿಯಾಗಿ ನಡೆಯುತ್ತದೆ. ನಿದ್ರೆ ಸರಿಯಾಗುತ್ತದೆ. ನಮ್ಮ ಆರೋಗ್ಯವನ್ನು ಚನ್ನಾಗಿ ಇರಬೇಕಾದರೆ ಶಾರೀರಿಕ ಶ್ರಮ ಬಹುಮುಖ್ಯವೆಂಬುದು ನಾವು ಮರೆಯಬಾರದು. ಅದಕ್ಕಾಗಿಯೇ ಅಕ್ಕಮಹಾದೇವಿ “ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು” ಎಂದು ಹೇಳುತ್ತಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…