ಬಿಸಿ ಬಿಸಿ ಸುದ್ದಿ

ಬುದ್ಧನ ಮೂರ್ತಿ ಧ್ವಂಸಗೊಳಿಸಿದವರ ಬಂಧಿಸಲು ಪೊಲೀಸರಿಗೆ ಒತ್ತಾಯಿಸುವೆ: ಶಾಸಕ ರಾಜುಗೌಡ

ಸುರಪುರ: ಜಗತ್ತಿಗೆ ಶಾಂತಿ ಬೋಧಿಸಿದ ಮಹಾತ್ಮ ಗೌತಮ್ ಬುದ್ಧರ ಮೂರ್ತಿ ಧ್ವಂಸಗೊಳಿಸಿದ್ದು ನೋವಿನ ಸಂಗತಿಯಾಗಿದೆ,ಯಾರೇ ಮಾಡಿರಲಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಒತ್ತಾಯಿಸುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಕಿಡಿಗೇಡಿಗಳಿಂದ ಧ್ವಂಸಗೊಂಡ ಮೂರ್ತಿಯನ್ನು ವೀಕ್ಷಿಸಿ ಮಾತನಾಡಿ,ಬುದ್ಧನ ಸಂದೇಶವನ್ನು ಅರಿತವರು ಇಂತಹ ಕೃತ್ಯ ಮಾಡುವುದಿಲ್ಲ,ಯಾರೋ ತಿಳವಳಿಕೆ ಇಲ್ಲದವರು ಇಂತಹ ಕೆಲಸ ಮಾಡಿದ್ದಾರೆ,ಯಾರೇ ಆಗಲಿ ಅವರ ಮೇಲೆ ಕ್ರಮ ಕೈಗೊಳ್ಳಲು ತಿಳಿಸುವುದಾಗಿ ಹೇಳಿದರು.ಅಲ್ಲದೆ ಇದು ತುಂಬಾ ಪ್ರಶಾಂತವಾದ ಸ್ಥಳವಾಗಿದ್ದು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃಧ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು.ಅಲ್ಲದೆ ಈಗ ಧ್ವಂಸಗೊಂಡಿರುವ ಬುದ್ಧನ ಮೂರ್ತಿಯ ಬದಲಾಗಿ ಹೊಸ ಮೂರ್ತಿಯನ್ನು ಕೊಡಿಸುವುದಾಗಿ ಭರಸವೆ ನೀಡಿದರು.

ಉಪಸ್ಥಿತರಿದ್ದ ವರಜ್ಯೋತಿ ಬಂತೇಜಿ ಮಾತನಾಡಿ,ಬುದ್ಧ ಜಗತ್ತಿಗೆ ಶಾಂತಿ ಬೋಧಿಸಿದ ಮಹಾತ್ಮ,ಆತನ ಮೂರ್ತಿಯನ್ನು ಧ್ವಂಸಗೊಳಿಸಿದವರ ಬಗ್ಗೆ ನಾವು ಆಕ್ರೋಶ ವ್ಯಕ್ತಪಡಿಸುವ ಬದಲಾಗಿ,ಹೊಸದಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧ್ವಂಸಗೊಳಿಸಿದವರ ದುರ್ಬುದ್ಧಿಯನ್ನು ಬುದ್ಧ ದೂರಗೊಳಿಸಲೆಂದು ಪ್ರಾರ್ಥಿಸೋಣ ಎಂದರು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು ಮಾತನಾಡಿ,ಹಿಂದಿನಿಂದಲೂ ಕೂಡ ಇಲ್ಲಿ ಕೆಲವು ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ.ಅದರ ಕುರಿತು ಪೊಲೀಸರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರು ಪ್ರಯೋಜನೆಯಾಗಿಲ್ಲ ಎಂದು ಬೇಸರ ತೋಡಿಕೊಂಡರು.ಈಗ ಮೂರ್ತಿ ಧ್ವಂಸಗೊಳಿಸಿದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಸದಸ್ಯರಾದ ಶಿವಕುಮಾರ ಕಟ್ಟಿಮನಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ವೆಂಕಟೇಶ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂದಗೇರಿ,ದೊಡ್ಡ ದೇಸಾಯಿ ದೇವರಗೋನಾಲ, ಶರಣು ನಾಯಕ,ಮಾಳಪ್ಪ ಕಿರದಹಳ್ಳಿ,ರಾಹುಲ್ ಹುಲಿಮನಿ,ಕೃಷ್ಣಾರಡ್ಡಿ ಮುದನೂರು,ಮಹಾದೇವಪ್ಪ ಬೊಮ್ಮನಹಳ್ಳಿ,ಮಾನಪ್ಪ ಬಿಜಾಸಪುರ, ಧರ್ಮರಾಜ ಬಡಿಗೇರ,ಶರಣು ಹಸನಾಪುರ,ಆಕಾಶ ಕಟ್ಟಿಮನಿ,ರಮೇಶ ಬಾಚಿಮಟ್ಟಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

20 hours ago