ಬಿಸಿ ಬಿಸಿ ಸುದ್ದಿ

ಮಳೆಯಿಂದಾಗಿ ಬಹುತೇಕ ಹಳ್ಳ ಕೊಳ್ಳಗಳು ಸೇರಿದಂತೆ ಮನೆಯೊಳಗೆ ನುಗ್ಗಿದ ನೀರು

ಶಹಾಬಾದ: ತಾಲೂಕಿನಲ್ಲಿ ರವಿವಾರ ಸಂಜೆಯಿಂದ ಬೆಳಿಗ್ಗೆಯವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಹಳ್ಳ ಕೊಳ್ಳಗಳು ಮತ್ತು ನದಿಗಳು ತುಂಬಿ ಹರಿದಿವೆ.

ರಾತ್ರಿಯೆಲ್ಲ ಧಾರಾಕಾರ ಮಳೆಗೆ ನಗರದ ಕೆಲವೆಡೆ ಗಿಡಮರಗಳು ನೆಲಕ್ಕುರುಳಿವೆ. ಕೆಲವೊಂದು ಪ್ರದೇಶದಲ್ಲಿ ಮನೆ ಗೋಡೆಗಳು ಬಿದ್ದಿವೆ. ತಾಲೂಕಿನ ಎಲ್ಲಾ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊನಗುಂಟಾ ಗ್ರಾಮಕ್ಕೆ ಹೋಗುವ ಮಧ್ಯದ ವಡ್ಡರವಾಡಿ ಸಮೀಪದ ಹಳ್ಳ ತುಂಬಿ ಹರಿದಿದ್ದರಿಂದ ಕೆಲ ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ತೊಡಕಾಗಿತ್ತು. ನಂತರ ನೀರು ಇಳಿಮುಖವಾದ ನಂತರ ಜನರು ಓಡಾಡಲು ಪ್ರಾರಂಭಿಸಿದರು ಎನ್ನಲಾಗಿದೆ.ಹಳೆ ಶಹಾಬಾದನಲ್ಲಿ ರಾತ್ರಿ ಮಲಗಿಕೊಂಡ ಜನರು ಬೆಲಿಗ್ಗೆ ಎದ್ದು ಹೊರಬರುತ್ತಿದ್ದಂತೆ ಬಡಾವಣೆಗಳಲ್ಲಿ ನೀರು ಆವರಿಸಿಕೊಂಡಿದ್ದರಿಂದ ಕೊಂಚ ಆತಂಕಕ್ಕೆ ಒಳಗಾದರು.

ಮನೆಯೊಳಗೆ ನೀರು ನುಗ್ಗುತ್ತಿರುವುದನ್ನು ನೋಡಿ ನೀರನ್ನು ಮನೆಯಿಂದ ಹೊರಹಾಕುವುದಕ್ಕೆ ಮುಂದಾದರು.ಆದರೂ ನೀರು ನುಗ್ಗುತ್ತಿರುವುದನ್ನು ನೋಡಿ ಬೇಸತ್ತು ಹೋದರು.ಪ್ರತಿ ವರ್ಷ ಇದೇ ಸಮಸ್ಯೆಯಾಗುತ್ತಿದೆ. ಸ್ಥಳೀಯ ಶಾಸಕರು ಹಳ್ಳವನ್ನು ಅಗಲೀಕರಣಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ವಾರ್ಡ ನಂ.3ರ ಸಾರ್ವಜನಿಕರು ಮನವಿ ಮಾಡಿಕೊಂಡರು.

ಬೆಳೆಗಳು ಹಾನಿ : ನಿರಂತರವಾಗಿ ಸುಮಾರು 8ಗಂಟೆಗಳ ಕಾಲ ಸುರಿದ ಮಳೆಯಿಂದ ನೂರಾರು ತಗ್ಗು ಪ್ರದೇಶದ ಹೊಲಗಳಿಗೆ ನೀರು ನಿಂತಿವೆ. ಸಾವಿರಾರು ಹೆಕ್ಟೇರ್ ಬೆಳೆ ಅತಿಯಾದ ನೀರು ಸಂಗ್ರಹದಿಂದ ಬೆಳೆ ಕೊಳೆಯುವ ಆತಂಕ ರೈತರದ್ದಾಗಿದೆ. ಬೆಳೆಯಲ್ಲಿ ನೀರು ಆವರಿಸಿಕೊಂಡಿದ್ದರಿಂದ ತೇವಾಂಶ ಹೆಚ್ಚಾಗಿ ಕಳೆ ಬಾರಿಯಂತೆ ಈ ಬಾರಿ ಹಾನಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮಳೆ ನಿಂತರೆ ಮಾತ್ರ ಬದುಕು ಸಾಗಿಸಬಹುದು.ಇಲ್ಲದಿದ್ದರೇ ಮತ್ತೆ ಸಾಲದ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ರೈತರ ಅಳಲಾಗಿದೆ.

ಮನೆಗಳಿಗೆ ನುಗಿದ ನೀರು: ನಗರದ ಭೀಮಶಪ್ಪ ನಗರ, ಹಳೆಶಹಾಬಾದ ಮುಂತಾದ ಪ್ರದೇಶಗಳಲ್ಲಿ ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದು ಹಳ್ಳದ ಸುಮತ್ತಮುತ್ತಲಿನ ಪ್ರದೇಶಗಳ ಮನೆಗೆ ನುಗ್ಗಿ ಅಪಾರ ಹಾನಿಯುಂಟು ಮಾಡಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಿಂದ ನೀರು ಸಾರ್ವಜನಿಕರು ನೀರು ತೆಗೆಯುವುದರಲ್ಲಿ ಹರಸಾಹಸಪಟ್ಟರು.ಅಲ್ಲದೇ ನಗರದ ಕೊಳಸಾ ಪೈಲ್‍ನ ಮನೋಹರ ಮೇತ್ರೆ ಎಂಬುವವರ ಮನೆ ಗೋಡೆ ರವಿವಾರ ಸುರಿದ ಮಳೆಯಿಂದ ಉರುಳಿ ಬಿದ್ದಿದೆ.

ಪರಿಹಾರಕ್ಕೆ ಒತ್ತಾಯ: ತಾಲೂಕಿನಲ್ಲಿ ರವಿವಾರ ಸಂಜೆಯಿಂದ ಬೆಳಿಗ್ಗೆಯವರೆಗೆ ಸುರಿದ ಮಳೆಯಿಂದ ಹಳೆ ಶಹಾಬದ ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿ ಮನೆಯ ಸಾಮಾನುಗಳು ಹಾಗೂ ದವಸ ಧಾನ್ಯಗಳು ಹಾಳಾಗಿವೆ. ಕಳೆದ ಬಾರಿ ಬಾರಿ ಪ್ರಮಾಣದ ನೀರು ಬಂದಿದ್ದರಿಂದ ಎಲ್ಲಿಲ್ಲದ ತೊಂದರೆಯಾಗಿತ್ತು. ಪ್ರತಿ ಬಾರಿ ಮಳೆ ಬಂದಾಗ ತೊಂದರೆಯಾಗುತ್ತಿದೆ.

ಆದ್ದರಿಂದ ಹಳ್ಳದಲ್ಲಿ ಬೆಳೆದಿರುವ ಮುಳ್ಳು ಕಂಟಿಗಳನ್ನು ತೆಗೆದು ನೀರನ್ನು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕಾಗಿದೆ. ಕಳೆದ ಬಾರಿ ಮಳೆ ನೀರು ನುಗ್ಗಿ ಆರ್ಥಿಕ ಸಂಷಕಟಕ್ಕೆ ಒಳಗಾದ ಹಲವಾರು ಜನರಿಗೆ ಪರಿಹಾರ ನೀಡಿಲ್ಲ. ಈಗಲಾದರೂ ಮಳೆಯಿಂದ ತೊಂದರೆಗೊಳಗಾದ ಜನರಿಗೆ ಪರಿಹಾರವನ್ನು ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ್,ಸ್ನೇಹಲ್ ಜಾಯಿ, ಬಿಜೆಪಿ ಮುಖಂಡ ಗಿರಿರಾಜ ಪವಾರ ಒತ್ತಾಯಿಸಿದ್ದಾರೆ.

advertisement
emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

50 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago