ಬೀದರ್: ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸಿತಾರಾಮನ್ ಜಿಯವರು ಮಂಡಿಸಿರುವ ಬಜೇಟ್ ಆರೋಗ್ಯ, ಗೃಹ, ಮಹಿಳಾ ಸಬಲಿಕರಣ ಮುಂತಾದ ಮೂಲಭೂತ ಕ್ಷೇತ್ರಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ, ವಿಕಾಸದ ದೂರದೃಷ್ಟಿಯನ್ನು ಹೊಂದಿರುವಂತಹ ಬಜೇಟ್ ಆಗಿದೆ ಎಂದು ಸಂಸದ ಭಗವಂತ್ ಖೂಬಾ ಅವರು ತಿಳಿಸಿದ್ದಾರೆ.
ಮಹಿಳೆಯರ ಸ್ವಸಹಾಯ ಸಂಘಗಳಿಗೆ ವಿಶೇಷ ಧನಸಹಾಯ, ಜನಧನ ಖಾತೆದಾರರಿಗೆ ಧನಸಹಾಯ ಸೌಲಭ್ಯ ಕಲ್ಪಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ಕೊಟ್ಟಿರುವುದು ಪ್ರಶಂಶನಿಯವಾಗಿದೆ. ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯ ವಿವರಗಳನ್ನು ನಿಡುತ್ತಾ ಮಹಾತ್ಮಾ ಬಸವೇಶ್ವರರ ಮಹಾಮಂತ್ರ “ಕಾಯಕವೇ ಕೈಲಾಸ” ಸ್ಮರಿಸಿದ ವಿತ್ತ ಸಚಿವರಿಗೆ ಅನಂತ ವಂದನೆಗಳು ಎಂದು ಅವರು ಹೇಳಿಕೆಯಲ್ಲಿ ಅಭಿನಂದಿಸಿದ್ದಾರೆ.
ರೈತರ ಆದಾಯವನ್ನ ದುಪ್ಪಟ್ಟುಗೊಳಿಸುವ ನಿಟ್ಟಿನ ಮೊದಲ ಹೆಜ್ಜೆಯಾಗಿ ಮುಂಗಾರು ಹಂಗಾಮಿನ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ೬೦ ವಯಸ್ಸು ದಾಟಿದ ಪ್ರತಿಯೊಬ್ಬ ಕಾರ್ಮಿಕರಿಗೂ ಹಾಗೂ ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೆ ಕರ್ಮಯೋಗಿ ಮಾನ್‌ಸಮ್ಮಾನ್ ಯೋಜನೆಯಡಿ ಮಾಸಿಕ ೩೦೦೦ ರೂ.ಗಳ ಪಿಂಚಣಿ ಘೋಷಣೆ ಬಡತನ ನಿರ್ಮೂಲನೆಯ ಮಹತ್ವದ ಹೆಜ್ಜೆಯೆಂದು ಅವರು ಬಣ್ಣಿಸಿದ್ದಾರೆ.
ಗ್ರಾಮ ಮತ್ತು ನಗರಗಳಿಗೆ ಸಮಾನ ಅಭಿವೃದ್ದಿಯ ಅವಕಾಶ ಕಲ್ಪಿಸುವ ಇದೊಂದು ವಿಶೇಷ ಆಯವ್ಯಯ ಪತ್ರವೆಂದರೆ ಅತಿಶಯೊಕ್ತಿಯಾಗದು. ೨೦೨೪ರ ವೇಳೆಗೆ ಪ್ರತಿಯೊಂದು ಗ್ರಾಮಕ್ಕೂ ರಸ್ತೆ, ಶುಧ್ದ ಕುಡಿಯುವ ನೀರು, ಮನೆಗೊಂದು ಶೌಚಾಲಯ ಕಡ್ಡಾಯವಾಗಿ ಒದಗಿಸುವ ಗುರಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಗೃಹ ನಿರ್ಮಾಣ ಕ್ಷೇತ್ರಕ್ಕೆ ವಿಶೇಷ ಒತ್ತುಕೊಡುವುದರೊಂದಿಗೆ ಹೊಸ ಉದ್ಯೋಗ ಸೃಷ್ಠಿ ಹೆಚ್ಚಿಸುವುದಕ್ಕಾಗಿ ವಿಶೇಷ ಸಹಾಯಧನವನ್ನ ಹಿಂದಿಗಿಂತ ಒಂದುವರೆ ಲಕ್ಷ ಹೆಚ್ಚಿಸಲಾಗಿದೆ ಎಂದು ಅವರು ಸ್ವಾಗತಿಸಿದ್ದಾರೆ.
ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ವಿದ್ಯುತ ಚಾಲಿತ ವಾಹನಗಳ (ಸಬ್ಸಿಡಿ) ವಿನಾಯಿತಿ ದರವನ್ನು ಹೆಚ್ಚಿಸಿ ಪರಿಸರ ರಕ್ಷಣೆಗೆ ಮುಂದಾಗಿದೆ. ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ನೀಡಿಕೆಯನ್ನ ವಿಶೇಷವಾಗಿ ಬಜೇಟನಲ್ಲಿ ನಮೋದಿಸಲಾಗಿದೆ. ಒಟ್ಟಿನಲ್ಲಿ ಇಂದಿನ ಬಜೇಟ್ ಕೃಷಿ ಕಾರ್ಮಿಕರ, ನಿರುದ್ಯೋಗಿಗಳ, ಮಹಿಳಾ ಸಬಲಿಕರಣದ ಜೀವಾಳವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…