ವಾಡಿ: ಹೆಗಲಿಗೆ ಪಾಟಿಚೀಲ ಹಾಕಿಕೊಂಡು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ರಸ್ತೆ ಕ್ರಮಿಸಿ ಶಾಲೆ ಸೇರಬೇಕಾದ ಪುಟಾಣಿ ಮಕ್ಕಳು, ಹದಗೆಟ್ಟ ದಾರಿ ದಾಟಲಾಗದೆ ಎಡವಿ ಬಿದ್ದು ಗಾಯಗೊಳ್ಳಿತ್ತಿದ್ದಾರೆ. ಗೊಜ್ಜು ನೀರಿನ ತ್ಯಾಜ್ಯ ದಾಟಿ ಸಾಗುವಾಗ ವಾಹನಗಳ ವೇಗಕ್ಕೆ ರಾಡಿ ಸಿಡಿದು ಕೊಳೆಯಾಗುವ ಸಮವಸ್ತ್ರ ಮಕ್ಕಳ ಕಣ್ಣೀರಿಗೆ ಕಾರಣವಾಗುತ್ತಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ 8ರ ಬಡಾವಣೆಯಲ್ಲಿ ಪ್ರತಿಷ್ಠಿತ ಕಾನ್ವೆಂಟ್ ಶಾಲೆಯಿದ್ದು, ಸಾವಿರಾರು ಮಕ್ಕಳು ಈ ಬಡಾವಣೆಯ ರಸ್ತೆಯನ್ನು ಅವಲಂಬಿಸಿದ್ದಾರೆ. ಯಾದಗಿರಿ ಮುಖ್ಯ ರಸ್ತೆಯಿಂದ ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆ ವರೆಗಿನ ರಸ್ತೆ ವಿಪರೀತ ಹದಗೆಟ್ಟಿದ್ದು, ಮಕ್ಕಳು ಏಳುತ್ತಾ ಬೀಳುತ್ತಾ ಶಾಲೆ ಸೇರಬೇಕಾದ ದುಸ್ಥಿತಿ ಎದುರಾಗಿದೆ. ಸಾರ್ವಜನಿಕರ ಗೃಹ ಕಟ್ಟಡ ನಿರ್ಮಾಣದ ಕಲ್ಲು ಮಣ್ಣು ಮರಳಿನ ತ್ಯಾಜ್ಯ ರಸ್ತೆಯನ್ನು ಆವರಿಸಿ ಅವಾಂತರ ಸೃಷ್ಠಿಸಿದೆ.
–ಸುಗಂಧಾ ನಾಗೇಂದ್ರ ಜೈಗಂಗಾ. ವಾರ್ಡ್ ಸದಸ್ಯೆ.
ಹರಿಯುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಗೊಜ್ಜು ನೀರು ರಸ್ತೆಗೆ ಸಾಗಲು ಸಹಕಾರ ನೀಡಿದ್ದರಿಂದ ಗೊಬ್ಬು ವಾಸನೆಯಲ್ಲೇ ಮಕ್ಕಳ ಸಂಚಾರ ಮುಂದು ವರೆದಿದೆ. ಶಾಲಾ ವಾಹನಗಳ ಓಡಾಟ ಮತ್ತು ಪೋಷಕರ ಬೈಕ್‌ಗಳ ಟ್ರಾಫಿಕ್ ಜಾಮ್ ಮಾರ್ಗದಲ್ಲಿ ಪಾದಚಾರಿ ಮಕ್ಕಳ ಗೋಳಾಟ ಹೇಳತೀರದಂತಾಗಿದೆ. ತೆಗ್ಗುದಿನ್ನೆಗಳಿಂದ ಕೂಡಿದ ರಸ್ತೆಯ ವಾಹನಗಳಿಗೆ ಬಿಟ್ಟುಕೊಡುವ ಮೂಲಕ ಬಹುತೇಕ ಮಕ್ಕಳು ಚರಂಡಿಯ ಮೇಲೆ ಸರ್ಕಸ್ ನಡಿಗೆ ನಡೆದು ಶಾಲೆ ತಲುಪುತ್ತಿದ್ದಾರೆ.
ಆಯತಪ್ಪಿ ಕೆಲ ವಿದ್ಯಾರ್ಥಿಗಳು ಚರಂಡಿಗೆ ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ರಸ್ತೆ ಅಭಿವೃದ್ಧಿಪಡಿಸಬೇಕಾದ ಪುರಸಭೆ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯೆ ಕಾಂಗ್ರೆಸ್‌ನ ಸುಗಂಧಾ ಜೈಗಂಗಾ ಅವರು ಮಕ್ಕಳ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಕೂಡಲೇ ಸಿಸಿ ರಸ್ತೆ ನಿರ್ಮಿಸುವ ಮೂಲಕ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…