ಬಿಸಿ ಬಿಸಿ ಸುದ್ದಿ

ಶರಣ ಚರಿತೆ: ಗಾಣದ ಕಾಯಕ ಶರಣರು

ಗಾಣದ ಕಾಯಕಕ್ಕೆ ಸಂಬಂಧಿಸಿದಂತೆ ಕಣ್ಣಪ್ಪಯ್ಯ, ರೇವಣಸಿದ್ಧ ಹಾಗೂ ಮುಗ್ಧ ಸಂಗಯ್ಯ ಈ ಮೂರು ಜನ ಶರಣರ ವಿಚಾರಗಳೇನಿದ್ದವು? ಅವರ ಸ್ಮಾರಕಗಳನ್ನು ನೋಡುವುದಕ್ಕಿಂತ ಮುಂಚೆ ಎಣ್ಣೆ ಇಲ್ಲದಿದ್ದರೆ ನಮ್ಮ ಬದುಕು ಸಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆಹಾರ ಪದಾರ್ಥವಾಗಿ, ಔಷಧವಾಗಿ, ಬೆಳಕಿಗಾಗಿ ಮುಖ್ಯವಾಗಿ ಬಳಕೆಯಾಗುತ್ತಿದೆ. ಈ ಕಾಯಕ ಮಾಡುವವರಿಗೆ ಗಾಣಿಗರು, ತೆಲ್ಲಿಗರು ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಗಾಣದ ಕಣ್ಣಪ್ಪಯ್ಯ: ಕಣ್ಣಪ್ಪಯ್ಯ ಬಸವಕಲ್ಯಾಣದಲ್ಲಿದ್ದರು. ಶರಣರು ನಡೆಸುತ್ತಿದ್ದ ಅನುಭವ ಮಂಟಪ ಚರ್ಚೆಯಲ್ಲಿ ಭಾಗವಿಸುತ್ತಿದ್ದರು. ಇವರ ಪತ್ನಿಯ ಹೆಸರು ರೇಚವ್ವೆ, “ಕಣ್ಣಯ್ಯ ಪ್ರಿಯ ಗುಹೇಶ್ವರ ಶರಣ ಅಲ್ಲಮ” ಅಂಕಿತನಾಮದ ೧೦ ವಚನಗಳು ದೊರೆತಿರುವುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಬಸವಕಲ್ಯಾಣದಲ್ಲಿ ಇದ್ದರ ಎಂಬುದಕ್ಕೆ ಯವುದೇ ಕುರುಹು, ಸ್ಮಾರಕಗಳು ದೊರೆಯುವುದಿಲ್ಲ.

ರೇವಣಸಿದ್ಧ: ರೇವಣಸಿದ್ಧರು ಗಾಣ ಹೊಡೆದ ಕೆಲ ಸ್ಮಾರಕಗಳು ಸಿಗುತ್ತವೆ. ಕವಿ ಹರಿಹರ ಬರೆಯುವಂತೆ ರೇವಣಸಿದ್ಧರು ಭಕ್ತನ ಮನೆಯಲ್ಲಿ ಗಾಣ ಹೊಡೆದಿರುವುದು ಬಸವಕಲ್ಯಾಣದಲ್ಲಿ ಎಂಬ ಕಥೆಯೊಂದನ್ನು ಹೇಳುತ್ತಾರೆ. ಆದರೆ ಅಲ್ಲಿ ಯಾವುದೇ ಪಳಿಯುಳಿಕೆಗಳು ಸಿಗುವುದಿಲ್ಲ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರಟಕಲ್‌ನ ರೇವಣಸಿದ್ಧರ ಮಠದ ಆವರಣದಲ್ಲಿ ಇಂದಿಗೂ ಕಲ್ಲಿನ ಗಾಣವಿರುವುದನ್ನು ಕಾಣಬಹುದು. ರೇವಣಸಿದ್ಧರು ಗಾಣ ಹೊಡೆದಿದ್ದು ನಮ್ಮೂರಿನಲ್ಲಿ ಎಂದು ಇಲ್ಲಿಯ ಜನ ಹೇಳುತ್ತಾರೆ. ಹರಿಹರನಿಗೆ ಸರಿಯಾದ ಊರು ಯಾವುದು ಎಂದು ಗೊತ್ತಿರಲಿಕ್ಕಿಲ್ಲ. ಹೀಗಾಗಿ ಅನೇಕ ಕಡೆ ಊರುಗಳು ಹೆಸರುಗಳಿರುವುದನ್ನು ಕಾಣುತ್ತೇವೆ.

ಮುಗ್ದ ಸಂಗಯ್ಯ: ಮುಗ್ಧಸಂಗಯ್ಯನ ಸ್ಮಾರಕಗಳು ಬಸವಕಲ್ಯಾಣ, ಶಿವಪುರ, ನಾರಾಯಣಪುರ, ದೇವರ ಉಪ್ಪಲದಿನ್ನಿ ಹಾಗೂ ಗಡವಂತಿಯಲ್ಲಿ ಸಿಗುತ್ತವೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಕೂಡ ನಮಗೆ ದೊರೆಯುತ್ತದೆ. ಶಿವಪುರ ಇವರ ಹುಟ್ಟೂರು. ಊರಲ್ಲಿ ಯಾವುದೋ ಒಂದು ಘಟನೆ ನಡೆದ ಕಾರನಕ್ಕೆ ಆ ಊರನ್ನು ಬಿಟ್ಟು ಇಂಗಳೇಶ್ವರ, ಉಪ್ಪಲದಿನ್ನಿ ಮುಂತದೆಡೆ ಲೋಕ ಸಂಚಾರ ಮಾಡುತ್ತ ಕೊನೆಗೆ ನಾರಾಯಣಪುರದಲ್ಲಿ ಬಂದು ನೆಲೆಸಿ ಇಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಈ ಮುಂಚೆ ಶ್ರೀಶೈಲಕ್ಕೆ ತೆರಳಿದ್ದ ಇವರಿಗೆ ಮರುಳಶಂಕರ ದೇವರು ಭೇಟಿಯಾಗಿ ಬಸವಕಲ್ಯಾಣಕ್ಕೆ ಕರೆ ತರುತ್ತಾರೆ. ಕೊರ್ತಿ ಕೊಲ್ಹಾರ ಗ್ರಾಮದ ಗಾಣದ ಕಾಯಕ ಮಾಡುತ್ತಿದ್ದ ದೇಸಾಯಿ ಮನೆತನಕ್ಕೆ ಮುಗ್ಧಸಂಗಯ್ಯನೆ ಮನೆದೇವರು ಎಂದು ಪ್ರೌಢದೇವರಾಯನ ಕಾವ್ಯ ಬರೆದ ಅದೃಶ್ಯ ಕವಿಯು ಈ ಉಪ್ಪಲದಿನ್ನಿ ಸಂಗಮೇಶನ ಪ್ರಸ್ತಾಪ ಮಾಡುತ್ತಾರೆ ಮಾತ್ರವಲ್ಲ ಮುಗ್ಧಸಂಗಾರ್ಯರ ಪುರಾಣ ಕೂಡ ರಚಿಸುತ್ತಾನೆ.

ಶಿವಪುರ: ಮುಗ್ದ ಸಂಗಯ್ಯನ ಹೆಸರಿನ ಮಠವಿದೆ. ಅವರು ಇಲ್ಲಿಯೇ ಇರುತ್ತಿದ್ದರು. ಆತ ಪೂಜಿಸಿದ ಶಿವಲಿಂಗ, ಮಠದ ಮುಂದೆ ದೊಡ್ಡ ಗವಿ. ಮಲ್ಲಿಕಾರ್ಜುನನ ದೇವಾಲಯವಿರುವುದನ್ನು ಕಾಣಬಹುದು. ಅಂತೆಯೇ ತಾವಿರುವಲ್ಲಿ ಮಲ್ಲಿಕಾರ್ಜುನ ಲಿಂಗ ಸ್ಥಾಪನೆ ಮಾಡಿದ್ದಾರೆ. ಅಲ್ಲಿರುವ ಹಳೆಯ ಕಾಲದ ಶಿವ ದೇವಾಲಯ. ಸಿದ್ಧರಾಮೇಶ್ವರರು ಭೇಟಿ ನೀಡಿದ್ದರಿಂದ ಈಗ ಅದು ಸಿದ್ಧರಾಮೇಶ್ವರ ದೇವಾಲಯ ಆಗಿದೆ. ಕೊಂಡಿಗುಳಿ ಕೇಶಿರಾಜ ಈ ದೇವಾಲಯದ ಬಾವಿ ದಂಡೆಯಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿದ್ದ. ಅವರು ಈ ಊರಲ್ಲಿ ಇರುವಾಗ ಶಿಷ್ಯ ಚೌಡಯ್ಯ ಇದ್ದ ಎಂಬುದಕ್ಕೆ ಉತ್ತರ ದಿಕ್ಕಿನಲ್ಲಿ ಚೌಡಯ್ಯನ ಸ್ಮಾರಕವಿದೆ.

ನಾರಾಯಣಪುರ: ಗ್ರಾಮದ ಚಿಕ್ಕ ಮಠ ಅಂಗಳದಲ್ಲಿ ಮುಗ್ಧ ಸಂಗಯ್ಯನ ತೋರು ಗದ್ದುಗೆಯಿದೆ. ಮಠದ ಪೂಜೆ ಮಾಡಿಕೊಂಡಿರುವವರ ಮನೆಯಲ್ಲಿ ಈಗಲೂ ಮುಗ್ಧ ಸಂಗಯ್ಯ ಬಳಸಿದ ಬೆತ್ತ ಹಾಗೂ ನೀಲಿ ಗಂಟಿನ ಜೋಳಿಗೆ ಇರುವುದನ್ನು ಕಾಣಬಹುದು. ನಾರಾಯಣಪುರದ ಕರೆಯಲ್ಲಿನ ಮಂಟಪ ಸಕಲೇಶ ಮಾದರಸರದು. ಆದರೆ ಅದು ಈಗ ಸಕಾಷ್‌ಪೀರ್ ದರ್ಗಾ ಆಗಿದೆ. ಶರಣ ಮೃತ್ಯಂಜಯ, ಒಕ್ಕಲಿಗರ ಮುದ್ದಣ್ಣ, ಘಟ್ಟಿವಾಳಯ್ಯ, ಅಕ್ಕಮಹಾದೇವಿ, ದಾನಮ್ಮರ ತೋರು ಗದ್ದುಗೆಗಳಿವೆ. ಹಾಲು ಬಸವನ ಸ್ಮಾರಕ ಕೂಡ ಇದೆ.

ಗಡವಂತಿ-ಇಂಗಳೇಶ್ವರ: ಹುಮನಾಬಾದನಿಂದ ೨-೩ ಕಿ.ಮೀ. ದೂರ ಇರುವ ಗಡವಂತಿಯಲ್ಲಿ ಮುಗ್ದ ಸಂಗಯ್ಯನ ಗವಿಯಿದ್ದು, ಅದ್ಭುತ ಸ್ಮಾರಕಗಳಿವೆ. ಇಂಗಳೇಶ್ವರದಲ್ಲಿ ರೇವಣಸಿದ್ಧೇಶ್ವರ ಮುಗ್ಧ ಸಂಗಯ್ಯ ತಪಸ್ಸು ಮಾಡಿದ ಸ್ಥಳವಾಗಿದೆ.

ದೇವರ ಉಪ್ಪಲದಿನ್ನಿ: ಮುಗ್ಧ ಸಂಗಯ್ಯನ ದೇವಾಲಯ ದ್ವಾರ ಬಾಗಿಲು ದಾಟಿದರೆ ಬಸವಣ್ಣ ದೇವರ ಗುಡಿ ಇದೆ. ಮುಗ್ಧಸಂಗಯ್ಯ ಇಲ್ಲಿರುವಾಗ ಗ್ರಮದ ಮಲ್ಲಮ್ಮ ಎಂಬ ಶರಣೆ ಬಖ್ತಿಯಿಂದ ನಡೆದುಕೊಂಡಿರುವುದಕ್ಕೆ ಕೆಲವು ವರ್ಷ ಇಲ್ಲಿಯೇ ಗಾಣದ ಕಾಯಕ ಮಾಡಿರಬೆಕು. ಹೀಗಾಗಿ ಮಲ್ಲಮ್ಮನಿಗೆ ಸಂಬಂಧಿಸಿದ ಮನೆಯಲ್ಲಿ ಮುಗ್ಧಸಂಗಯ್ಯನ ಮೂರ್ತಿ ಇಟ್ಟು ಪೂಜಿಸಲಾಗುತ್ತಿದೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago