ಶಹಾಬಾದ: ಅಂಗನವಾಡಿಗಳಲ್ಲಿ ನೀಡುವ ಎಲ್ಲಾ ಬಗೆಯ ಪೌಷ್ಠಿಕಾಂಶ ಯುಕ್ತ ಆಹಾರವನ್ನು ಗರ್ಭಿಣಿಯರು ಸೇವಿಸಬೇಕು. ಇದರಿಂದ ಜನಿಸುವ ಮಕ್ಕಳು ಸಧೃಡವಾಗಿರುವುದರಿಂದ ಉತ್ತಮ ಬೆಳವಣಿಗೆ ಹೊಂದುತ್ತಾರೆ ಎಂದು ಭಂಕೂ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ರಜನಿಕಾಂತ ಕಂಬಾನೂರ ಹೇಳಿದರು.
ಅವರು ಬುಧವಾರ ಭಂಕೂರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾದ ಪೋ?ಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ವ್ಯಕ್ತಿಗಳು ಈ ನಮ್ಮ ದೇಶದ ಆಸ್ತಿ. ಚಿಕ್ಕ ಮಕ್ಕಳು ಸಧೃಡವಾಗಿರಲು ಉತ್ತಮ ಆಹಾರ ಸೇವನೆ ಮಾಡಬೇಕು. ಮನು? ಆರೋಗ್ಯವಂತನಾಗಿ ಬದುಕುವುದೇ ನಿಜವಾದ ಜೀವನ. ಅಂಗನವಾಡಿಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ದೊರೆಯುತ್ತದೆ. ಚಿಕ್ಕಂದಿನಲ್ಲಿ ಗ್ರಾಮೀಣ ಮಟ್ಟದ ಜನರು ಅಂಗನವಾಡಿಗಳಿಂದ ಬಂದ ಆಹಾರವನ್ನೇ ಸ್ವಿಕರಿಸಿ ಸಧೃಡರಾಗಿ ಬೆಳೆದಿದ್ದಾರೆ. ಅಂಗನವಾಡಿಗಳಲ್ಲಿ ಎಲ್ಲಾ ಬಗೆಯ ಪೋ?ಕಾಂಶ ಹಾಗೂ ಜೀವಸತ್ವಗಳು ಗರ್ಭಿಣಿಯರಿಗೆ ದೊರಕುವ ಹಾಗೆ ಆಹಾರಗಳನ್ನು ನೀಡಲಾಗುತ್ತದೆ. ಈ ಆಹಾರಗಳನ್ನು ಸೇವಿಸುವುದರಿಂದ ಗರ್ಭಿಣಿಯರು ಯಾವುದೇ ಅನಾರೋಗ್ಯದಿಂದ ಬಳಲುವುದಿಲ್ಲ. ಮಕ್ಕಳು ಸಹ ಆರೋಗ್ಯವಂತರಾಗಿರುತ್ತಾರೆ. ಸರ್ಕಾರದ ಈ ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಲು ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳೆ ಕಾರಣ. ಇವರ ಕಾರ್ಯವನ್ನು ಸಂಬಳದಿಂದ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನ ತಾಯಂದಿರು ನೀಡಿದ ಭಿಕ್ಷೆ. ಇದನ್ನು ಅರಿತು ಪ್ರತಿಯೊಬ್ಬರು ಸ್ತ್ರೀಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಬಿ.ಎಸ್.ಹೊಸಮನಿ ಮಾತನಾಡಿ, ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಂಡಿದ್ದು. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಅಪೌಷ್ಠಿಕತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿರುವುದನ್ನು ತಪ್ಪಿಸಲು ಈ ಯೋಜನೆ ತುಂಬ ಸಹಕಾರಿಯಾಗಲಿದೆ. ಇದರ ಉದ್ದೇಶವನ್ನು ಪ್ರತಿಯೊಬ್ಬ ಸಾರ್ವಜನಿಕರು ತಿಳಿದುಕೊಂಡು ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.
ಭಂಕೂರ ಗ್ರಾಪಂ ಸದಸ್ಯರಾದ ಈರಣ್ಣ ಕಾರ್ಗಿಲ್, ಲಕ್ಷ್ಮಿಕಾಂತ ಕಂದಗೂಳ, ಶಿವಯೋಗಿ ಬಣ್ಣಾಕರ್, ಪಿಡಿಓ ರೇವಣಸಿದ್ದಪ್ಪ ಕಲಶೆಟ್ಟಿ , ಕೆಂಚಪ್ಪ ಮುತ್ತಗಿ, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಮತ್ತು ನೇತ್ರಾವತಿ, ಸಂಗಮಾ, ಶಂಕುತಲಾ, ಲಕ್ಷ್ಮೀ, ಸರನಾ, ರೇಖಾ, ಇಂದ್ರಾ, ನಾಗಮ್ಮ, ಸುಮಿತಾ ಮತ್ತು ಪೋ?ಣಾ ಅಭಿಯಾನದ ತಾಲೂಕಾ ಸಂಯೋಜಕರಾದ ರೇಖಾ ಮತ್ತು ಸಹಾಯಕ ಸಂಯೋಜಕರಾದ ಅಶೋಕ ತುಂಗಳ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…