ಬಿಸಿ ಬಿಸಿ ಸುದ್ದಿ

ರಾಷ್ಟ್ರಮಟ್ಟದ ಮುಷ್ಕರಕ್ಕೆ ಕೆಸಾಪ್ಸ್ ಗುತ್ತಿಗೆನೌಕರರ ಕಲಬುರ್ಗಿ ಜಿಲ್ಲಾ ಘಟಕ ಬೆಂಬಲ : ದುದನಿ

ಕಲಬುರಗಿ: ತಿಳಿದಿರುವಂತೆ ಕರ್ನಾಟಕ ರಾಜ್ಯದ ಎಚ್.ಐ.ವಿ. ಏಡ್ಸ್ ನಿಯಂತ್ರಣ ಚಿಕಿತ್ಸೆ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಕಾರ್ಯನಿರ್ವಹಿಸುತ್ತಿದ್ದು ಸದರಿ ಸಂಸ್ಥೆಯಡಿಯಲ್ಲಿ ಸುಮಾರು ೧೭೪೭ ನೌಕರರು ಗುತ್ತಿಗೆ ಆಧಾರದಲ್ಲಿ ಕಳೆದ ೨೦ ವರ್ಷಗಳಿಂದ ಕನಿಷ್ಠ ವೇತನ ೧೩೦೦೦ ರೂಪಾಯಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದುವರೆದು ಸದರಿ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದನುಧಾನದಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕತ ನಿಯಮ ಹಾಗೂ ಪರಿಷ್ಕೃತ ವೇತನದೊಂದಿಗೆ ಜಾರಿಯಾಗುತ್ತಾ ಬಂದಿದ್ದೆ ಎಂದು ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ದುದನಿ ಅವರು ಹೇಳಿದರು.

ಅದರಂತೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ-೪ – ೨೦೧೭ ನೇ ಇಸವಿಗೆ ಮುಗಿದಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ- ೫ ಜಾರಿಯಾಗಬೇಕಿತ್ತು ವೇತನ ಸಹ ೨೦೧೭ ರಿಂದ ಪರಿಷ್ಕೃತಗೊಳ್ಳ ಬೇಕಾಗಿರುತ್ತದೆ. ಅದರೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯು ೨೦೦೭ರಲ್ಲಿ ಸದರಿ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಮಾತ್ರ ವೇತನ ಪರಿಷ್ಕರಣೆ ಮಾಡಿ ಇತರ ವೃಂದದ ವಿವಿಧ ಪದನಾಮಗಳು ಹುದ್ದೆಗಳ ನೌಕರರು ವೇತನ ಪರಿಷ್ಕರಣೆ ಮಾಡಿರುವುದಿಲ್ಲ. ಮುಂದುವರೆದು ಸದರಿ ವಿಷಯವಾಗಿ ಹಲವಾರು ಬಾರಿ ಪತ್ರದ ಮೂಲಕ ಮನವಿ ಸಲ್ಲಿಸಿದರು ವೇತನ ಪರಿಷ್ಕರಣೆ ಮಾಡದೆ ತಾರತಮ್ಯ ಮಾಡಿರುತ್ತಾರೆ.

ಸದರಿ ವಿಷಯವಾಗಿ ರಾಷ್ಟ್ರೀಯಮಟ್ಟದಲ್ಲಿ ಅಖಿಲ ಭಾರತ ಎಚ್‌ಐವಿ-ಏಡ್ಸ್ ನೌಕರರ ಸಂಘ (ರೀ ) ರಾಷ್ಟ್ರೀಯ ಮಟ್ಟದಲ್ಲಿ ದಿನಾಂಕ ೨/೮/೨೦೨೧ರಿಂದ ಅಸಹಕಾರ ಚಳುವಳಿ ಕರೆನೀಡಿದ ರಾಷ್ಟ್ರದಾ ದ್ಯಂತ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಎಂದಿನಂತೆ ಸಾರ್ವಜನಿಕ ಸೇವೆಗೆ ತೊಂದರೆಯಾಗದಂತೆ ಕೆಲಸ ನೆರವೇರಿಸಿ ಮಾಸಿಕ ವರದಿಗಳನ್ನು ತಡೆ ಹಿಡಿದಿರುತ್ತವೆ.

೧ನೇ ಸೆಪ್ಟಂಬರ್ ೨೦೨೧ರಂದು ಗೌರವಾನ್ವಿತ ಪ್ರಧಾನ ಕಚೇರಿ. ಗೌರವಿತ ಆರೋಗ್ಯ ಕಚೇರಿ ಮತ್ತು ನ್ಯಾಕೋ ಪ್ರಧಾನ ಕಚೇರಿ ಮುಂದೆ ಎಲ್ಲಾ ಸ್ಯಾಕ್ಸ್ ಮತ್ತು ನ್ಯಾಕೋ ಗುತ್ತಿಗೆ ನೌಕರರಿಂದ ಧರಣೆ ಪ್ರದರ್ಶನ ಮಾಡಲಾಗುವುದು. ಈ ಧರಣಿ ಹೋರಾಟಕ್ಕೆ ಕೆಸಾಪ್ಸ್ ಗುತ್ತಿಗೆ ನೌಕರರ ಕಲಬುರ್ಗಿ ಜಿಲ್ಲಾ ಘಟಕವು ಬೆಂಬಲಿಸುತ್ತಾ ಹೋರಾಟಗಾರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ದುದನಿ ಅವರು ಪತ್ರಿಕಾ ಹೇಳಿಕೆ ಮುಖಾಂತರ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಕಡಣಿ, ಕಾರ್ಯದರ್ಶಿ ಜಮೀರ ಮತ್ತು ಮಹಿಳಾ ಪ್ರತಿನಿಧಿ ಸುಗಲಾ ರಾಣಿ ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago