ಬಿಸಿ ಬಿಸಿ ಸುದ್ದಿ

ಇಂದು ಮತದಾನ: ಕಲಬುರಗಿ ಪಾಲಿಕೆಯ ಸಂಪೂರ್ಣ ಚಿತ್ರಣ

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಇದೇ ಇಂದು ಬೆಳಿಗ್ಗೆ 7 ಗಂಟೆಯಿಂದ 6 ಗಂಟೆಯವರೆಗೆ ಮತದಾನ ಜರುಗಲಿದ್ದು, ಬೆಳಿಗ್ಗೆಯಿಂದ ಮತದಾನ ಆರಂಭಗೊಂಡಿದೆ.

ಚುನಾವಣೆಯು ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಬೇಕಾಗಿರುವ ಎಲ್ಲಾ ಪೂರ್ವ ಸಿದ್ದತೆಗಳು ಈಗಾಗಲೇ ಜಿಲ್ಲಾಡಳಿತ ಕೈಗೊಂಡಿದೆ. ನಗರದ 55 ವಾರ್ಡ್‍ಗಳ 533 ಮತಗಟ್ಟೆಯಲ್ಲಿ ಚುನಾವಣೆ ನಡೆಯಲಿದ್ದು, ಪುರುಷರು 2,58,775, ಮಹಿಳೆಯರು 2,60,543, ಇತರೆ 146 ಸೇರಿದಂತೆ ಒಟ್ಟು 5,19,464 ಮತದಾರರಿದ್ದಾರೆ. ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟು 360 ಜನ ನಾಮಪತ್ರÀ ಸಲ್ಲಿಕೆಯಾಗಿದ್ದವು. ಅದರಲ್ಲಿ 19 ತಿರಸ್ಕøತವಾಗಿದ್ದು, 20 ಮಂದಿ ಹಿಂಪಡೆದಿರುತ್ತಾರೆ. ಒಟ್ಟಾರೆ 300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದ್ದಾರೆ.

533 ವಾರ್ಡ್‍ಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಅಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 54 ಅತೀ ಸೂಕ್ಷ್ಮ, 150 ಸೂಕ್ಷ್ಮ ಹಾಗೂ 329 ಸಾಮಾನ್ಯ ಮತಗಟ್ಟೆಗಳೆಂದು ಎಂದು ಗುರುತಿಸಲಾಗಿದೆ. ಸಮಸ್ಯೆಗಳಿರುವ ವಾರ್ಡ್‍ಗಳಲ್ಲಿ ಹೆಚ್ಚಿನ ಗಮನ ವಹಿಸಲಾಗಿದೆ. 533 ವಾರ್ಡ್‍ಗಳ ಮತದಾನ ಕೇಂದ್ರಗಲ್ಲಿ ಒಟ್ಟು 1066 ಮತಯಂತ್ರ (ಇವಿಎಂ) ಗಳನ್ನು ಬಳಕೆ ಮಾಡುತ್ತಿದ್ದು, ಶೇಕಡ 20ರಷ್ಟು ಇವಿಎಂಗಳನ್ನು ಮೀಸಲಿರಿಸಲಾಗಿದೆ.

645 ಪಿಆರ್‍ಓಗಳು, 645 ಎಪಿಆರ್‍ಓ ಗಳು ಸೇರಿ ಒಟ್ಟು 2570 ಸಿಬ್ಬಂದಿಗಳನ್ನು ಚುನಾವಣೆಗಾಗಿ ನಿಯೋಜಿಸಲಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ ಶೇಕಡ 20 ರಷ್ಟು ಸಿಬ್ಬಂದಿಯನ್ನು ಮೀಸಲಿರಿಸಲಾಗಿದೆ.

ಒಟ್ಟು 36 ಪೊಲೀಸ್ ಸೆಕ್ಟರ್‍ಗಳಿದ್ದು, ಇಬ್ಬರು ಡಿಸಿಪಿ, 6 ಎಸಿಪಿ, 17 ಪಿಐ, 15 ಪಿಎಸ್‍ಐ, 62 ಎಎಸ್‍ಐ, 75 ಹೆಡ್ ಕಾನ್ಸ್‍ಸ್ಟೇಬಲ್, 494 ಪೊಲೀಸ್ ಕಾನ್ಸ್ಟೇಬಲ್, 482 ಹೋಂ ಗಾರ್ಡ್‍ಗಳನ್ನು ನಿಯೋಜಿಸಲಾಗಿದ್ದು, 500 ಜನ ಪೊಲೀಸ್ ಕಾನ್ಸ್‍ಸ್ಟೇಬಲ್ಸ್ ಹಾಗೂ 200 ಜನ ಹೋಮ್‍ಗಾಡ್ಸ್‍ಗಳನ್ನು ಹೊರ ಜಿಲ್ಲೆಗಳಿಂದ ಕರೆಸಲಾಗಿದೆ. ಒಟ್ಟಾರೆ 1118 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪರಿಸ್ಥಿತಿಗನುಗುಣವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

4 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

17 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago