ಕಲಬುರಗಿ: ಪ್ರತಿ ಸರಕಾರಿ ನೌಕರಿಯು ಇದೀಗ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯಗೊಳಿಸಿದ್ದು, ಪ್ರತೀ ಪರಿಕ್ಷೆಗೂ ಅತ್ಯುತ್ತಮ ಪುಸ್ತಕಗಳ ಆಯ್ಕೆ ಬಹಳ ಮುಖ್ಯವಾಗುತ್ತದೆ. ಇವತ್ತು ಬಿಡುಗಡೆ ಮಾಡುತ್ತಿರುವ ಈ ನಾಲ್ಕು ಪುಸ್ತಕಗಳು ಅನುಭವದ ನೆಲೆಯಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿರುವುದರಿಂದ ಈ ಪುಸ್ತಕಗಳು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪುಸ್ತಕಳು ಎಂದು ಲೇಖಕಕೆ.ಎಂ.ವಿಶ್ವನಾಥ ಮರತೂರ ಅಭಿಮತ. ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಸಂಸ್ಥೆಯು ಆಯೋಜಿಸಿದ್ದ ಸರಳ ಸುಂದರ ಕಾರ್ಯಕ್ರಮವೊಂದರಲ್ಲಿ ತಾವು ರಚಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಇದೀಗ ಸರಕಾರಿ ನೌಕರಿಗಾಗಿ ಸರಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಪರೀಕ್ಷೆಗಳಲ್ಲಿ ಅಂಕಗಳ ಆಧಾರದ ಮೇಲೆ ನೌಕರಿಯನ್ನು ಖಾತರಿಗೊಳಿಸಿದೆ. ನಮ್ಮಂತಹ ಅನೇಕ ಯುವಕರು ಪ್ರತಿ ಪರೀಕ್ಷೆಗೂ ಹೊಸ ಪುಸ್ತಕಗಳು ಹುಡುಕುವುದು ಸಹಜವಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು ಅಲ್ಲಿನ ಪರೀಕ್ಷೆಗಳು ಹಾಗೂ ಇತರೇ ಯಾವುದೇ ರೀತಿಯ ಪರೀಕ್ಷೆಗಳಿಗೆ ಈ ಪುಸ್ತಕಗಳು ಹೆಚ್ಚು ಲಾಭದಾಯಕವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ ಮರತೂರ ಮಾತನಾಡಿ, ವಿಶ್ವನಾಥ ಅವರ ಪುಸ್ತಕಗಳು ಸ್ಪರ್ಧಾತ್ಮಕ ಜಗತ್ತಿಗೆ ಅತ್ಯಂತ ಸೂಕ್ತವಾದ ಪುಸ್ತಕಗಳು. ಬ್ಯಾಂಕಿಂಗ್ ಮತ್ತು ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷವಾಗಿ ತಯಾರಿಸಿದ ಪುಸ್ತಕಗಳು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಶ್ರದ್ಧೆಯನ್ನು ಬಯಸುತ್ತವೆ. ಸತತ ಪ್ರಯತ್ನಗಳ ಮೂಲಕ ಯಶಸ್ಸನ್ನು ಕಾಣಬಹುದಾಗಿದೆ. ಈ ನಾಲ್ಕು ಪುಸ್ತಕಗಳು ಇತ್ತೀಚಿನ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತವಾಗಿವೆ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹೇಳಿ ಮಾಡಿಸಿದ ಪುಸ್ತಕಗಳಾಗಿದ್ದು ಸ್ಪರ್ಧಾರ್ಥಿಗಳು ಇವುಗಳನ್ನು ಓದಿ ಲಾಭ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಸಮಾಜ ಸೇವಕ ಶೇಖರ ಸೇಡಂ ಅವರು ವಿಶ್ವನಾಥ ಮರತೂರ ಅವರು ಅನೇಕ ಬರವಣಿಗೆಯ ಮೂಲಕ ನಾಡಿನ ಗಮನ ಸೆಳೆದ ಲೇಖಕರು, ಅವರ ಲೇಖನಗಳನ್ನು ಓದಿ ಅನೇಕರು ಸ್ಪೂರ್ತಿಗೊಂಡಿದ್ದಾರೆ. ಇದೀಗ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಬರೆಯುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ಪಾದಾರ್ಪಣೆ ಮಾಡಿರುವುದು ಸಂತೋಷದ ವಿಷಯ. ನಮ್ಮ ಭಾಗದಲ್ಲಿ ಸ್ಪರ್ಧಾ ಪ್ರಪಂಚಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುವ ಮರತೂರ ಅವರ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಇನ್ನೋರ್ವ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿ ಕನ್ನಡಪರ ಸಂಘಟನಕಾರ ರವಿ ದೇಗಾಂವ ಮಾತನಾಡಿ ನಮ್ಮ ಭಾಗದ ಯುವ ಪ್ರತಿಭೆ ವಿಶ್ವನಾಥ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗುವ ಪುಸ್ತಕಗಳನ್ನು ಬರೆದಿರುವುದು ಸಂತೋಷದ ವಿಷಯವಾಗಿದೆ. ಈ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಯುವಕರಿಗೆ ಸಹಕಾರಿಯಾಗುತ್ತವೆ. ಈ ಪುಸ್ತಕಗಳನ್ನು ಅನೇಕ ಸಂಶೋಧನಾ ನೆಲೆಯಲ್ಲಿ ರಚಿಸಲಾಗಿದೆ ಇದರ ಲಾಭವನ್ನು ಸ್ಪಧಾರ್ಥಿಗಳು ಪಡೆಯಬೇಕು ಎಂದರು.
ಇನ್ನೋರ್ವ ಅಥಿತಿಯಾದ ಶ್ರೀಮತಿ ನಿರ್ಮಲಾ ಬರಗಾಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕಮಲಾಪೂರ ಇವರು ಮಾತನಾಡಿ ಸರಕಾರಿ ನೌಕರಿಗೆ ಆಯ್ಕೆ ಬಯಸಿರುವ ಸ್ಪರ್ಧಾರ್ಥಿಗಳು ಇಂತಹ ಪುಸ್ತಕಗಳನ್ನು ಓದಬೇಕು. ವಿಶ್ವನಾಥ ಮರತೂರ ಅವರ ಬ್ಯಾಂಕಿಂಗ್ ಮತ್ತು ಇತರೇ ಪರೀಕ್ಷೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಅತ್ಯಂತ ಸರಳವಾದ ರೀತಿಯಲ್ಲಿ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಅನುಭವಿಕ ನೆಲೆಯಲ್ಲಿ ಈ ಹೊಸ ಪುಸ್ತಕಗಳನ್ನು ಬರೆದಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕದ ಯುವಕರೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಬರೆದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಈ ಪುಸ್ತಕಗಳ ಲಾಭ ಸ್ಪರ್ಧಾ ಆಕಾಂಕ್ಷಿಗಳು ಪಡೆಯಬೇಕು ಎಂದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…