ಶಹಾಬಾದ: ಐತಿಹಾಸಿಕ ಜಲಿಯನ್‌ವಾಲಾ ಬಾಗ್ ಅನ್ನು ’ಥೀಮ್ ಪಾರ್ಕ್’ ಅನ್ನಾಗಿ ಪರಿವರ್ತಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ’ಕ್ರೂರ ವಿನ್ಯಾಸ’ವನ್ನು ಎಐಡಿಎಸ್‌ಒ ಶಹಾಬಾದ ಆಧ್ಯಕ್ಷರಾದ ತುಳಜರಾಮ.ಎನ್.ಕೆ ತೀವ್ರವಾಗಿ ಖಂಡಿಸಿದ್ದಾರೆ.
ಬ್ರಿಟೀಷ್ ಅಧಿಪತ್ಯದ ವಿರುದ್ಧ ನಡೆದ ಜನಾಂದೋಲನದ ಸಂಕೇತವಾಗಿ ಉಳಿದಿರುವ ಕಡೆಯ ಕುರುಹನ್ನು ಸಹ ಜನಮಾನಸದಿಂದ ಶಾಶ್ವತವಾಗಿ ಅಳಿಸಿ ಹಾಕುವ ಕ್ರೂರ ಪ್ರಯತ್ನ ಇದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಲಿಯನ್‌ವಾಲಾ ಬಾಗ್ ಒಂದು ಉದ್ಯಾನವನವಲ್ಲ. ಬದಲಾಗಿ, ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಬ್ರಿಟೀಷ್ ಸರ್ಕಾರ ರೂಪಿಸಿದ್ದ ಜನವಿರೋಧಿ ಕಾನೂನುಗಳು ಹಾಗು ಹಿಂಸಾಚಾರದ ವಿರುದ್ಧ ದಂಗೆ ಎದ್ದ ಜನಸಮೂಹದ ಹೋರಾಟದ ಪ್ರತೀಕ ಜಲಿಯನ್‌ವಾಲಾ ಬಾಗ್! ತನ್ನ ದೇಶವನ್ನು ಸಂಪೂರ್ಣ ವಿಮುಕ್ತಿಗೊಳಿಸಬೇಕು ಎಂಬ ಸಂಕಲ್ಪ ಹೊಂದಿದ್ದ ಶಹೀದ್ ಭಗತ್ ಸಿಂಗ್, ಶಹೀದ್ ಉಧಮ್ ಸಿಂಗ್ ಹಾಗೂ ಇನ್ನಿತರ ಕ್ರಾಂತಿಕಾರಿಗಳ ಮೇಲೆ ೧೯೧೯ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಅತ್ಯಂತ ಗಾಢ ಪ್ರಭಾವ ಬೀರಿತ್ತು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕಥೆಗಳು ಇನ್ನೂ ನಮ್ಮ ಸುತ್ತ ಪ್ರತಿಧ್ವನಿಸುತ್ತಿದೆ.
ಆದರೆ ಈಗ ನವೀಕರಣದ ಹೆಸರಿನಲ್ಲಿ ಈ ಐತಿಹಾಸಿಕ ಸ್ಮಾರಕದ ವಿನಾಶ ನಡೆಯುತ್ತಿದೆ. ’ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ’ ದ ಬಗ್ಗೆ ಹೇಳುತ್ತಿದ್ದಂತೆಯೇ ವಿದ್ಯಾರ್ಥಿಗಳ ಮನಸ್ಸಿಗೆ ಬರುವುದು ಅದಕ್ಕೆ ಇದ್ದ ಒಂದೇ ಒಂದು ಕಿರಿದಾದ ದ್ವಾರ ಮತ್ತು ಅದೇ ದ್ವಾರದ ನಿರ್ಗಮನವನ್ನು ನಿರ್ಬಂಧಿಸಿ ಒಳಗೆ ಬಂದ ಜನರಲ್ ಡಯರ್ ಹಾಗು ಆತನ ಪಡೆ ಅಲ್ಲಿ ನೆರೆದಿದ್ದ ಶಾಂತಿಯುತ ಸಭೆಯ ಮೇಲೆ ಸುರಿಸಿದ ಗುಂಡುಗಳ ಮಳೆ! ಈಗ ಇದೇ ದ್ವಾರವನ್ನು ಒಂದು ಸುರಂಗವಾಗಿ ಪರಿವರ್ತಿಸಿ, ಅದರ ಎರಡೂ ಕಡೆಯ ಗೋಡೆಗಳ ಮೇಲೆ ಮನುಷ್ಯರ ಭಿತ್ತಿಚಿತ್ರಗಳನ್ನು ತುಂಬಿಸಿ ಆಕಾಶಕ್ಕೆ ಅರ್ಧ ತೆರೆದುಕೊಂಡಂತೆ ಒಂದು ಮಹಡಿಯನ್ನು ರಚನೆ ಮಾಡಲಾಗಿದೆ.
ಗುಂಡಿನ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಷ್ಟೋ ಜನ ಅಲ್ಲಿದ್ದ ಬಾವಿಗೆ ಧುಮುಕಿದ್ದರು. ಈಗ ಆ ’ಶಹೀದಿ ಕುವಾ’ ಅಂದರೆ, ’ಹುತಾತ್ಮರ ಬಾವಿ’ ಯನ್ನು ಗಾಜಿನ ಗುರಾಣಿಯ ಮೂಲಕ ಸಂಪೂರ್ಣ ಮುಚ್ಚಿದ್ದಾರೆ. ಸ್ಮಾರಕದ ಆಗಮನ ಮತ್ತು ನಿರ್ಗಮನ ದ್ವಾರಗಳನ್ನೂ ಬದಲಾಯಿಸಲಾಗಿದೆ ಮತ್ತು ಸ್ಮಾರಕದ ಮುಖ್ಯ ರಚನೆಯ ಸುತ್ತಲೂ ಕಮಲದ ಕೊಳವನ್ನು ನಿರ್ಮಿಸಲಾಗಿದೆ. ಇದಲ್ಲದೆ, ಗುಂಡಿನ ಗುರುತುಗಳು ಕಾಣಬಾರದು ಎಂದು ಅವನ್ನು ಮೆರುಗುಗೊಳಿಸಿರುವ ಸೆರಾಮಿಕ್ ಅಂಚುಗಳಿಂದ ಮುಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಆರ್‌ಎಸ್‌ಎಸ್ ಹಾಗೂ ಅದರ ಪೂರ್ವಜರು ಮತ್ತು ಬಿಜೆಪಿ ನಾಯಕರು ಸ್ವಾತಂತ್ರ್ಯ ಸಂಗ್ರಾಮವನ್ನು ವಿರೋಧಿಸಿದ್ದರು ಮಾತ್ರವಲ್ಲದೇ ಬ್ರಿಟೀಷ್ ಸಾಮ್ರಾಜ್ಯಶಾಹಿಯು ಭಾರತವನ್ನು ಹತ್ತಿಕ್ಕಲು ನೆರವಾದರು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಕೃಷಿ ನೀತಿಗಳು, ನೂತನ ಕಾರ್ಮಿಕ ಸಂಹಿತೆಗಳು, ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦, ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಹೀಗೆ ಮುಂತಾದ ಜನವಿರೋಧಿ ನೀತಿಗಳನ್ನು ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಜನ ಹೋರಾಟಗಳನ್ನು ಹತ್ತಿಕ್ಕುತ್ತಿದೆ.
ಇದೆ ಸಂದರ್ಭದಲ್ಲಿ ಈಗ ಒಂದೆಡೆ ಸ್ಮಾರಕವನ್ನು ಕಾರ್ಪೋರೇಟೀಕರಣಗೊಳಿಸಿ ಇನ್ನೊಂದೆಡೆ ಇತಿಹಾಸವನ್ನು ಅಳಿಸಿಹಾಕುತ್ತಿದ್ದಾರೆ. ನವೀಕರಣದ ಹೆಸರಿನಲ್ಲಿ ಇತಿಹಾಸವನ್ನು ಅಪವಿತ್ರಗೊಳಿಸುವ ಹಾಗೂ ಐತಿಹಾಸಿಕ ಸ್ಮಾರಕವನ್ನು ನಾಶಗೊಳಿಸುವ ಬಿಜೆಪಿಯ ಕುತಂತ್ರ ನಡೆಯನ್ನು ರಾಜ್ಯದ ಜನತೆ ಹಾಗು ಬಹುಮುಖ್ಯವಾಗಿ ವಿದ್ಯಾರ್ಥಿಗಳು ಅತ್ಯಂತ ಉಗ್ರವಾಗಿ ಖಂಡಿಸಬೇಕು ಮತ್ತು ಇಂತಹ ನಾಚಿಕೆಗೇಡಿನ ನಡೆಯ ವಿರುದ್ಧ ಹೋರಾಟವನ್ನು ಬೆಳೆಸಬೇಕು ಎಂದು ಎಐಡಿಎಸ್‌ಒ ಶಹಾಬಾದ ಸ್ಥಳಿಯ ಸಮಿತಿ ಕರೆ ನೀಡುತ್ತದೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…