ಬಿಸಿ ಬಿಸಿ ಸುದ್ದಿ

ಬಸವಣ್ಣನವರ ವ್ಯಕ್ತಿತ್ವ ಎಷ್ಟು ಕೊಂಡಾಡಿದರೂ ಸಾಲದು: ವಚನ ದರ್ಶನ ಪ್ರವಚನ

ಬಸವಣ್ಣನವರ ವ್ಯಕ್ತಿತ್ವ ಎಷ್ಟು ಕೊಂಡಾಡಿದರೂ ಸಾಲದು. ಅವರು ಅಖಂಡ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿದರು. ಅನುಭವಮಂಟಪ ಮಾಡಿ ನಾಡಿನ ಮೂಲೆ ಮೂಲೆಗಳಿಂದ ಶರಣರು ತಮ್ಮ ಸಾಧನೆಯ ಎತ್ತರಕ್ಕೆ ಏರಿಸಿದರು. ಆದರೂ ಅವರಷ್ಟು ವಿನಯ, ತೆರೆದ ಹೃದಯ ಇನ್ನೊಬ್ಬರಲ್ಲಿ ಕಾಣಲು ಸಾಧ್ಯವೇ ಇಲ್ಲ. ಬಸವಣ್ಣನವರು ಷಟ್‌ಸ್ಥಲ ಸಾಧನೆ ಮಾಡಿ ಐಕ್ಯಸ್ಥಲಕ್ಕೆ ಏರಿ ಮತ್ತೆ ಲೋಕಕಲ್ಯಾಣಕ್ಕಾಗಿ ಭಕ್ತಸ್ಥಲದಲ್ಲಿ ನಿಂತು ಸರ್ವರ ಹಿತ ಸರ್ವರ ಕಲ್ಯಾಣ ಬಯಸಿದರು.

ಭಕ್ತಸ್ಥಲದಲ್ಲಿ ಗುರುವಿನಿಂದ ಲಿಂಗದೀಕ್ಷೆ ಪಡೆದುಕೊಂಡು ಗುರು-ಲಿಂಗ-ಜಂಗಮದಲ್ಲಿ ಪೂರ್ಣ ಶ್ರದ್ಧೆಯಿಂದ ಆಚರಿಸುತ್ತ ಮುಖ್ಯವಾಗಿ ಭವಿಸಂಗ ಬಿಡಬೇಕು. ಮಾಹೇಶ್ವರಸ್ಥಲದಲ್ಲಿ ಶ್ರದ್ಧಾನಿಷ್ಠೆಯಾಗಿ ಗಟ್ಟಿಗೊಂಡು ಜ್ಞಾನವುಳ್ಳವನಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾ, ಪರಧನ, ಪರಸ್ತ್ರೀಯಿಂದ ದೂರವಿದ್ದು ನೈತಿಕ ಆಚರಣೆಗೆ ಒತ್ತು ಕೊಡುತ್ತಾರೆ.

ಮಹೇಶ್ವರಸ್ಥಲದಲ್ಲಿ ಎಚ್ಚರವಹಿಸಬೇಕಾದಂಥದ್ದು ಪರಧನ, ಪರಸ್ತ್ರೀ ಇವೆರಡರ ಮೇಲೆ ಸದಾ ಜಾಗ್ರತದಿಂದ ಬದುಕು ಸಾಗಿಸಬೇಕು. ಹರಿವಹಾವಿಗಂಜೆ, ಉರಿವ ನಾಲಗೆಗಂಜೆ, ಒಂದಕ್ಕಂಜುವೆ ಒಂದಕ್ಕಳುಪುವೆ ಪರಧನ, ಪರಸ್ತ್ರೀ ಎಂಬ ಜೂಬಿಂಗಂಜುವೆ ಎಂಬುದು ಬಸವಣ್ಣನವರ ವಾಣಿ ಗೊತ್ತೆ ಇದೆ. ನಾವು ಯಾವುದಕ್ಕೂ ಅಂಜದಿದ್ದರೂ ಇವೆರಡಕ್ಕೆ ಅಂಜಬೇಕು ಎಂದು ನಮಗೆ ಸದಾ ಎಚ್ಚರಿಕೆ ಕೊಡುತ್ತಾರೆ.

ಪ್ರಸಾದಿಸ್ಥಲದಲ್ಲಿ ಸದಾ ಪ್ರಸನ್ನಚಿತ್ತದಿಂದ ಎಲ್ಲವೂ ಶಿವನ ಪ್ರಸಾದ ಎಂದು ಸ್ವೀಕರಿಸಬೇಕು. ದೈಹಿಕ ಮಾನಸಿಕ ವಿಕಾರಗಳೆಲ್ಲವೂ ದೇವನಿಗೆ ಅರ್ಪಿಸಿ ಪ್ರಸಾದವಷ್ಟೇ ಲಿಂಗಕ್ಕೆ ಅರ್ಪಿಸುವುದು ಅಲ್ಲ. ತನ್ನನ್ನೇ ಅರ್ಪಿಸಿಕೊಂಡು ಬಾಳುತ್ತಾನೆ. ಕರ್ಮಫಲಗಳು ಸುಖದುಃಖಗಳು, ನೋವು-ನಲಿವುಗಳು ಏನೇ ಬಂದರೂ ದೇವಪ್ರಸಾದ ಎಂದು ಅನುಭವಿಸುತ್ತಾನೆ. ಪ್ರಸನ್ನತೆಯನ್ನು ಎಂದೂ ಕಳೆದುಕೊಳ್ಳುವುದಿಲ್ಲ.

ಅವಧಾನಭಕ್ತಿಯಿಂದ ಅಂದರೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾನೆ. ಪ್ರಾಣಲಿಂಗಿಸ್ಥಲದಲ್ಲಿ ಅನುಭಾವ ಭಕ್ತಿಯಿಂದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿರುತ್ತದೆ. ಪ್ರಾಣ ನಿಶ್ಚಲವಾಗಬೇಕು. ಲಿಂಗದ ನೆನಹು ಮಾಡುತ್ತ ಸರ್ವಾಂಗವೂ ಲಿಂಗಮಯವಾಗುತ್ತದೆ. ಶರಣಸ್ಥಲದಲ್ಲಿ ಎಲ್ಲಾ ಇಂದ್ರಿಯಗಳು ಲಿಂಗಮಯವಾಗಿ ಶರಣಸತಿ-ಲಿಂಗಪತಿಯಾಗಿ ಬಾಳುತ್ತಾನೆ. ಲಿಂಗಾಂಗ ಸುಖ ಅನುಭವಿಸುತ್ತಾನೆ. ಜೀವಭಾವ ಹೋಗಿ ಶಿವಭಾವ ಬಂದು ತಾನುಂಡ ಲಿಂಗಸುಖವನ್ನು ಲೋಕಕ್ಕೆ ಹಂಚಲು ಸಿದ್ಧನಾಗಿರುತ್ತಾನೆ.

ಐಕ್ಯಸ್ಥಲದಲ್ಲಿ ಜನನ ಮರಣ ವಿರಹಿತನಾಗಿ ಮುಕ್ತಾವಸ್ಥೆಯಲ್ಲಿ ನಿಲ್ಲಬೇಕು. ಪ್ರಪಂಚದಲ್ಲಿ ಇದ್ದು ಪರಮಾತ್ಮನಲ್ಲಿ ಮನ ಒಂದಾಗಿ ಇರುತ್ತಾನೆ. ನಾ-ನೀ ಎಂಬ ಭೇದವಿರುವುದಿಲ್ಲ. ನಡೆದಾಡುವ ದೇವರಾಗಿ ಇರುತ್ತಾನೆ. ನಾನು ನಡೆದಾಡುವ ದೇವರು ಎಂಬ ಭಾವವೂ ಇರುವುದಿಲ್ಲ. ಅಹಂ ಪೂರ್ಣ ಅಳಿದಿರುತ್ತದೆ. ಈ ಷಟ್‌ಸ್ಥಲ ಮಾರ್ಗವನ್ನು ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಮಗೆ ಕರುಣಿಸಿದ್ದಾರೆ. ಆ ಮಾರ್ಗದಲ್ಲಿ ನಾವು ಮುನ್ನಡೆದು ನಮ್ಮ ಸರ್ವಾಂಗೀಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

7 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

18 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

18 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

20 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

20 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

20 hours ago