ಶಹಾಬಾದ: ತಾಲೂಕಿನಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ಜೀವನದಿಯಾದ ಕಾಗಿಣಾ ನದಿಯೂ ಉಕ್ಕಿ ಹರಿಯುತ್ತಿದ್ದೂ ನದಿ ಪಾತ್ರದ ಹಳ್ಳಿಗಳಾದ ಮುತ್ತಗಿ, ಭಂಕೂರ, ಶಂಕರವಾಡಿ, ಗೋಳಾ, ಹೊನಗುಂಟಾ ವ್ಯಾಪ್ತಿಯ ಹೊಲಗಳಲ್ಲಿ ನೀರು ಜಲಾವೃಗೊಂಡಿವೆ. ಇದರಿಂದ ನೀರು ಸುತ್ತಮುತ್ತಲಿನ ಹೊಲಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದೆ.
ತಾಲೂಕಿನ ಸುತ್ತಮುತ್ತಲಿನ ಹೊಲದಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾದ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ತಿಂಗಳ ಹಿಂದಷ್ಟೆ ಹೆಸರು, ಉದ್ದು ರಾಶಿ ಮಾಡುವ ಹಂತದಲ್ಲಿ ಸತತವಾಗಿ ಮಳೆ ಸುರಿದ ಪರಿಣಾಮ ಬೆಳೆ ನಾಶವಾಗಿ ರೈತ ಕಣ್ಣೀರು ಹಾಕಿದ್ದನು.ಈಗ ಮತ್ತೆ ರಾತ್ರಿಯೆಲ್ಲ ಮಳೆಯಾದ ಪರಿಣಾಮ ತೆಗ್ಗು ಪ್ರದೇಶದ ಮತ್ತು ನದಿ, ಹಳ್ಳ,ಕೆರೆ ಪಾತ್ರದ ಹೊಲಗಳಲ್ಲಿ ನೀರು ಆವರಿಸಿ ಬೆಳೆಯೆಲ್ಲ ಕೊಳೆಯಲು ಪ್ರಾರಂಭಿಸಿದೆ. ಸಾಲ ಮಾಡಿ ಬೀಜ,ಗೊಬ್ಬರ್ ಹಾಗೂ ಕ್ರಿಮಿನಾಶಕ ಖರೀದಿಸಿದ ರೈತ ಬೆಳೆ ನೀರಿನಿಂದ ಕೊಳೆಯುತ್ತಿರುವುದರಿಂದ ಮತ್ತೆ ರೈತ ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಪರಿಹಾರ ಧನ ನೀಡಬೇಕೆಂದು ರೈತರ ಆಗ್ರಹವಾಗಿದೆ.
ಸಂಚಾರ ಅಸ್ತವ್ಯಸ್ತ : ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಅಜನಿ ಹಳ್ಳದ ಸಣ್ಣ ಸೇತುವೆ ಮುಳುಗಿ ಹೋಗಿದೆ. ಅಲ್ಲದೇ ಮುತ್ತಗಾದಿಂದ ಜೀವಣಗಿ, ಕದ್ದರಗಿ ಹೋಗುವ ಮಧ್ಯದ ಬ್ರಿಡ್ಜ್ ಕಮ್ ಬ್ಯಾರೇಜ ಹಾಗೂ ಶಂಕರವಾಡಿ ಬ್ರಿಡ್ಜ್ ಕಮ್ ಬ್ಯಾರೇಜ ಹಾಗೂ ಗೋಳಾ(ಕೆ)ದಿಂದ ವಾಡಿ ಪಟ್ಟಣಕ್ಕೆ ಹೋಗುವ ಗೋಳಾ ಗ್ರಾಮದ ಸಮೀಪ ಕಾಗಿಣಾ ನದಿಗೆ ಕಟ್ಟಲಾದ ಬ್ರಿಡ್ಜ್ ಕಮ್ ಬ್ಯಾರೇಜ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪೂರ್ಣ ಸಂಚಾರ ವ್ಯವಸ್ಥೆ ಕಡಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ದೊಡ್ಡ ಸೇತುವೆಗೆ ಒಂದು ಅಡಿ ಕೆಳಗೆ ನೀರು ಹರಿಯುತ್ತಿದೆ. ಇನ್ನೇನೂ ಮತ್ತೆ ಮಳೆಯಾದರೆ ಸೇತುವೆ ಮೇಲಿಂದ ನೀರು ಹರಿಯುವ ಸಾಧ್ಯತೆಯಿದೆ.ಇದರಿಂದ ವಾಡಿ, ಚಿತ್ತಾಪೂರ, ಯಾದಗಿರಿ ಹೋಗುವ ಎಲ್ಲಾ ವಾಹನಗಳ ಸಂಚಾರ ವ್ಯವಸ್ಥೆ ಕಡಿತಗೊಳ್ಳಲಿದೆ.ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆಯ ಮೇಲಿರುವ ತಗ್ಗುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಅನುಭವಿಸಬೇಕಾಯಿತು.
ಹಳೆಶಹಾಬಾದನ ಅಂಬೇಡ್ಕರ್ ಬಡಾವಣೆ, ಭೀಮಶಪ್ಪ ನಗರದ ಬಡಾವಣೆ, ಪಠಾಣ ಗಲ್ಲಿಯ ಕೆಲವೊಂದು ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಎಲ್ಲಿಲ್ಲದ ಸಂಕಷ್ಟ ಜನರು ಅನುಭವಿಸಿದರು. ವಡ್ಡರ ಸಂಘದ ಬಸವಣ್ಣ ದೇವರ ಗುಡಿಯಲ್ಲಿ ಹಳ್ಳದ ನೀರು ನುಗ್ಗಿದ್ದರಿಂದ ದೇವಾಲಯದಲ್ಲಿ ಸಂಪೂರ್ಣ ನೀರು ಆವರಿಸಿಕೊಂಡಿತ್ತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…