ಕಲಬುರಗಿ ಜಿಲ್ಲೆಯ ಶಹಾಬಾದ ಸುತ್ತಮುತ್ತಲಿನ ಹೊನಗುಂಟಿ, ಯನಗುಂಟಿ, ಇಂಗಳಗಿ, ಹಲಕಟ್ಟಿ ಗ್ರಾಮಗಳಲ್ಲಿ ಬೌದ್ಧ, ಜೈನ, ಶೈವ ಧರ್ಮಕ್ಕೆ ಸಂಬಂಧಿಸಿದ ಪಳಿಯುಳಿಕೆಗಳು, ಶಾಸನಗಳು ಸಿಗುವಂತೆ ಶರಣರಿಗೆ ಸಂಬಂಧಿಸಿದ ಸ್ಮಾರಕ ಹಾಗೂ ಶಾಸನಗಳು ಕೂಡ ದೊರೆಯುತ್ತವೆ.
ಹೊನಗುಂಟಿ: ಶಹಾಬಾದನಿಂದ ೧೦ ಕಿ.ಮೀ. ದೂರದಲ್ಲಿ ಕಾಗಿಣಾ ನದಿಯ ದಂಡೆಯ ಮೇಲಿರುವ ಈ ಗ್ರಾಮದಲ್ಲಿ ಸುಮಾರು ೨೫ರಿಂದ೩೦ ನೆಲಮಾಳಿಗೆಯ ಈಶ್ವರ ದೇವಾಲಯಗಳಿರುವುದನ್ನು ಕಾಣಬಹುದು. ಆದರೆ ಇದೀಗ ದೇವಾಲಯಗಳ ಮೇಲೆಯೇ ಮನೆ ಕಟ್ಟಲಾಗಿದೆ. ದನದ ಕೊಟ್ಟಿಗೆಗಳನ್ನಾಗಿ ಅಲ್ಲಿನ ಜನ ಬಳಸುತ್ತಿದ್ದಾರೆ. ಹೊನಗುಂಟಿಯಿಂದ ೨ ಕಿ.ಮೀ. ಅಂತರದಲ್ಲಿ ಭೀಮಾನದಿ ಹರಿಯುತ್ತದೆ. ಎರಡು ನದಿ ಕೂಡುವ ಜಾಗದಲ್ಲಿ ಸಂಗಮೇಶ್ವರ ದೇವಾಲಯವಿರುವುದನ್ನು ಕಾಣಬಹುದು.
ಉಂಡು ಉಪವಸಿ ಬಳಸಿ ಬ್ರಹ್ಮಚಾರಿ: ಭೀಮಾ ಹಾಗೂ ಕಾಗಿಣಾ ನದಿ ಕೂಡುವ ಈ ಸ್ಥಳದ ಬಳಿ ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಎಂಬ ಹೆಸರಿನ ಶರಣ ಇರುತ್ತಿದ್ದ. ಚಂದ್ರಲಾಂಬ ದೇವಾಸ್ಥಾನದ ಎದುರಿನ ದಿಬ್ಬದ ಮೇಲೆ ಇರುವುದು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಗೆ ಸಂಬಂಧಿಸಿದ ಸ್ಮಾರಕವಾಗಿದೆ ಎಂದು ಹೇಳಲಾಗುತ್ತಿದ್ದು, ಯನಗುಂಟಿಯ ಕಡೆಯೂ ಉಂಡು ಉಪವಾಸಿ ಬಳಸಿ ಬ್ರಹ್ಮಚರಿಯ ಸ್ಮಾರಕವಿದೆ ಎಂದು ಡಾ. ವಿ. ಶಿವಾನಂದ ಸಗರನಾಡಿನ ಶಿವಶರಣರು ಕೃತಿಯಲ್ಲಿ ದಾಖಲಿಸಿದ್ದಾರೆ. ಆದರೆ ಫ.ಗು. ಹಳಕಟ್ಟಿಯವರು ಇವರಿಬ್ಬರೂ ಬೇರೆ ಬೇರೆ ಎಂದು ಬರೆದು ಇವರಿಗೆ ಸಂಬಂಧಿಸಿದ ನದಿ ಈಜಿ ಬರುವ ಕಥೆಯನ್ನು ಕೂಡ ಅವರು ಉಲ್ಲೇಖಿಸುತ್ತಾರೆ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಎಂಬ ಶರಣರು ಇಬ್ಬರಾಗಿರಲಿಲ್ಲ. ಇದು ಅವರ ಹೆಸರು ಆಗಿರದೆ. ಒಬ್ಬ ಶರಣನಿಗೆ ಬಳಸಿದ ವಿಶೇಷಣ ಎನ್ನಬಹುದು. ಏಕೆಂದರೆ ಭರತೇಶ ವೈಭವ ಕೃತಿಯಲ್ಲಿ ಭರತೇಶನನ್ನು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಎಂಬ ವಿಶೇಷಣ ಹಚ್ಚಿ ವರ್ಣಿಸಿರುವುದನ್ನು ಕಾಣಬಹುದು. ದಾಸೋಹದ ಸಂಗಣ್ಣ ಹಾಗೂ ಆದಯ್ಯ ಶರಣರು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯ ಹೆಸರನ್ನು ತಮ್ಮ ವಚನಗಳಲ್ಲಿ ಬಳಕೆ ಮಾಡಿರುವುದನ್ನು ಕಾಣಬಹುದು.
ಇಂಗಳಗಿ: ವಾಡಿಯಿಂದ ೪-೫ ಕಿ.ಮೀ. ದೂರದಲ್ಲಿರುವ ಇಂಗಳಗಿ ಪ್ರಾಚೀನ ಗ್ರಾಮವಾಗಿತ್ತು. ಇಲ್ಲಿನ ಚಂದ್ರಮೌಳೇಶ್ವರ ದೇವಾಲಯದಲ್ಲಿ ಈ ಹಿಂದೆ ೭ ಶಿವ ಕೋಷ್ಠಗಳಿದ್ದವು. ಅವುಗಳಲ್ಲಿ ಮೂಲೇಶ್ವರ ದೇವಸ್ಥಾನ ಕೂಡ ಒಂದು. ಈ ದೇವಾಲಯದ ಸಂಕೀರ್ಣದಲ್ಲಿ ೧೬ ಲಿಂಗಳಿರುವುದರಿಂದ “ಸೋಳಾ ಲಿಂಗೇಶ್ವರ” ದೇವಸ್ಥಾನ ಎಂಥಲೂ ಕರೆಯಲಾಗುತ್ತಿದೆ. ಇಲ್ಲಿನ ೧೨೦೯ನೇ ಶಾಸನವು ಶರಣರು ಹಾಗೂ ಬಸವಧರ್ಮದ ಬಗ್ಗೆ ಅನೇಕ ಮಾಹಿತಿಯನ್ನು ಒದಗಿಸುತ್ತದೆ.
ಹಲಕಟ್ಟಿ: ವಾಡಿಯಿಂದ ೯ ಕಿ. ದೂರದದಲ್ಲಿ ಹಲಕರ್ಟಿ ಗ್ರಾಮವಿದ್ದು, ಇಲ್ಲಿನ ವೀರಭದ್ರೇಶ್ವರ ಪ್ರಸಿದ್ಧ ದೇವಸ್ಥಾನವಾಗಿದೆ. ದೇವಾಲಯ ಪ್ರವೇಶ ಮಾಡುವಾಗ ಬಲಗಡೆ ಕಾಣಿಸುವುದು ಮಲ್ಲಿಕಾರ್ಜುನ ದೇವಾಲಯ. ಗರ್ಭಗುಡಿಯ ಎಡ ಮಗ್ಗುಲಲ್ಲಿ ಕಾಣಿಸುವ ದೇವಸ್ಥಾನಗಳು ಶರಣ ರೇವಣಸಿದ್ದೇಶ್ವರ ಹಾಗೂ ಆತನ ಹೆಂಡತಿ ಮಾಯಿ (ಕಾಳಮ್ಮ) ದೇವಸ್ಥಾನಗಳಿರುವುದನ್ನು ಕಾಣಬಹುದು. ದೇವಸ್ಥಾನದ ಪೌಳಿಯ ನೆಲಮಾಳಿಗೆಯಲ್ಲಿರುವ ಬಿಬ್ಬೇಶ್ವರ ದೇವಸ್ಥಾನ ಶರಣ ಬಿಬ್ಬಿ ಬಾಚಯ್ಯನವರಿಗೆ ಸಂಬಂಧಿಸಿದ್ದಾಗಿರಬಹುದು. ವೀರಭದ್ರೇಶ್ವರ ದೇವರ ದರ್ಶನ ಮಾಡಿ ಮರಳುವಾಗ ಅನತಿ ದೂರದಲ್ಲಿ ನೆಳಮಾಳಿಗೆಯ ದೇವಸ್ಥಾನವು ತ್ರಿಂಭಕೇಶ್ವರನದ್ದಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…