ನಿನ್ನೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಹಾತ್ಮ ಬಸವೇಶ್ವರರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದನ್ನು ಕರ್ನಾಟಕದ ಜನತೆ ಅಭಿನಂದಿಸುತ್ತದೆ.
ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಅಳವಡಿಸಿಕೊಂಡು ಸರಕಾರ ನಡೆದಿದೆ ಎಂಬ ಪದಗಳನ್ನು ಕೇಳಿ ಬಹಳಷ್ಟು ಜನ ಲಿಂಗಾಯತ ಧರ್ಮದ ಹೋರಾಟಗಾರರು ಪುಳಕಗೊಂಡಿದ್ದಾರೆ. ನಿರ್ಮಲ ಸೀತಾರಾಮನ್ ಸಂಸತ್ತಿನಲ್ಲಿ ಮಾತಾಡಿದ್ದು ಕೇಳಿ ನಮ್ಮ ಶ್ರಮ ಸಾರ್ಥಕವಾಯ್ತು ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಎತ್ತುಗಡೆಯಲ್ಲಿದ್ದಾರೆ. ಹಿಂದೆಯೂ ನಮ್ಮ ದೇಶದ ಪ್ರಧಾನಿ ಸಹ ಬಸವಣ್ಣನವರ ಹೆಸರನ್ನು ಪ್ರಸ್ತಾಪಿಸಿದ್ದು ಸುಳ್ಳಲ್ಲ. ವಿದೇಶದಲ್ಲಿ ಹೋದಾಗಲಂತೂ ಜಗತ್ತಿಗೆ ಮ್ಯಾಗ್ನಕಾರ್ಟ ಒಪ್ಪಂದಕ್ಕಿಂತಲೂ ಪೂರ್ವದಲ್ಲಿ ಬಸವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಎಂಬ ಹೆಮ್ಮೆಯ ಮಾತು ಹೇಳಿದ್ದರು.
ಆದರೂ ಅದೇಕೋ ಕೇಂದ್ರ ಸರಕಾರಕ್ಕೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವಲ್ಲಿ ಹಿಂದೆಟು ಹಾಕಿತ್ತಿದೆ. ಇದಕ್ಕೆ ಕಾರಣ ನಮಗಿಂತಲೂ ಅವರಿಗೆ ಹೆಚ್ಚು ಗೊತ್ತು. ಮನವರಿಯದ ಕಳ್ಳತನವಿಲ್ಲ ಎಂಬ ಶರಣರ ಮಾತಿನಂತೆ ,ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂಬಂತೆ ಅದು ವರ್ತಿಸುತ್ತಿದೆ. ಏನಯ್ಯ ಇವರ ನಡೆ ಒಂದು ಪರಿಯಾದರೆ, ನುಡಿ ಇನ್ನೊಂದು ಪರಿ ಎಂಬಂತೆ ಕಾಣುತ್ತಿದೆ.
ಇವರ ನಡೆಯನ್ನು ಸರಿಯಾಗಿ ಗ್ರಹಿಸದ ಲಿಂಗಾಯತ ಧರ್ಮದ ಹೋರಾಟಗಾರರಾದ ಯುವಕರು, ಮುತ್ಸದ್ಧಿಗಳು, ಮಠಾಧೀಶರು ತಮ್ಮ ಹೋರಾಟದ ನೊಗವನ್ನು ಕೊಡವಿ ಖುಷಿ ಪಡುತ್ತಿರುವುದು ಸರಿಯಲ್ಲ. ಬಸವಣ್ಣನವರ ಕಾಯಕ ಮತ್ತು ದಾಸೋಹ ಸಿದ್ಧಾಂತ ಬರೀ ನಮ್ಮ ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗುವಂಥವು. ಮುಂದಿನ ವಿಶ್ವ ಬಸವಾದಿ ಶರಣರ ವಿಚಾರಗಳ ಕಡೆಗೆ ಎಂಬ ಸತ್ಯವನ್ನು ಅರಿತುಕೊಂಡ ಕೇಂದ್ರ ಸರಕಾರ , ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಮೂಲಕ ಸಾರಬೇಕಲ್ಲವೆ ? ಸಕಾರಾತ್ಮಕ ಚಿಂತನೆಗಳ ಕಡೆಗೆ ಗಮನ ಹರಿಸದ ಕೇಂದ್ರ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂದು ಕಾಂಗ್ರೆಸ್ ಪಕ್ಷದ ಪ್ರಚೋದನೆಗೆ ಲಿಂಗಾಯತ ಧರ್ಮದ ಹೋರಾಟಗಾರರು ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಲಿಂಗಾಯತ ಧರ್ಮದ ಸಿದ್ಧಾಂತ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಪತ್ರಕರ್ತೆ ಗೌರಿ, ಕಲಬುರ್ಗಿಯವರ ಹತ್ಯೆಗಳ ಬಗೆಗೆ ತುಟಿ ಸಿಂಪತಿಯೂ ಇವರು ತೋರಲಿಲ್ಲ. ಜಾಣ ಮೌನ ವಹಿಸುವ ಮೂಲಕ ತಾವು ಯಾರ ಪರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಲಿಂಗಾಯತರು ತಮ್ಮ ಧರ್ಮದ ಅಸ್ಮಿತೆಗೆ ಹೋರಾಡುತ್ತಿದ್ದರೆ ಅವರನ್ನು ಧರ್ಮ ಭುಂಜಕರು ಎಂಬಂತೆ ಚಿತ್ರಿಸಿದ್ದು ಸುಳ್ಳೆ ? ಸತ್ಯ ಎಲ್ಲರ ಕಣ್ಣೆದುರೆ ಇದೆ.
ಎಂಬ ವಚನದಂತೆ ಅವರೇ ತಮ್ಮ ಒಳಗಣ್ಣು, ಒಳಗಿವಿಯ ಮೂಲಕ ಬಸವ ಪ್ರಣೀತವಾದ ಲಿಂಗಾಯತ ಧರ್ಮವನ್ನು ಹೊಕ್ಕು ನೋಡಬೇಕು. ಜಿಹ್ವೆಯೊಳಗೆ ಜಿಹ್ವೆಯಿದ್ದು ರುಚಿಸದಿದ್ದರೆ ? ಪ್ರಾಣದೊಳಗೆ ಪ್ರಾಣವಿದ್ದು ನೆನೆಯಲೇಕರಿಯರು ? ಎಂಬುದು ಅವರೇ ಸ್ಪಷ್ಟ ಪಡಿಸಬೇಕು.
ಹೀಗಾಗಿ ಕೇಂದ್ರ ಸರಕಾರದ ಈ ನಡೆಯನ್ನು ಹೋರಾಟಗಾರರು ಬಹು ಎಚ್ಚರಿಕೆಯಿಂದ ಗಮನಿಸಬೇಕು. ಬಸವ ಕನಸಿನ ಲಿಂಗಾಯತ ಧರ್ಮದ ಅಸ್ಮಿತೆಗಾಗಿ ಮತ್ತೆ ಚುರುಕಾದ ಹೋರಾಟ ನಡೆಸಬೇಕು.
0 ವಿಶ್ವಾರಾಧ್ಯ ಸತ್ಯಂಪೇಟೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…