ಬಿಸಿ ಬಿಸಿ ಸುದ್ದಿ

ಶಿಕ್ಷಕ ಸಾಹಿತಿ ಸಿರಿ ಪ್ರಶಸ್ತಿ ಪ್ರದಾನ

ಕಲಬುರಗಿ: ಮನುಜ ಎಷ್ಟೆ ಸಾಧನೆ ಮಾಡಿದರೂ ಸಂಸ್ಕಾರ ದೊರೆಯುತ್ತಿಲ್ಲ. ಅದಕ್ಕೆ ಬೇಕಾದ ಮೌಲ್ಯಯುತ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ಸೃಜನಶಿಲ ಸಾಹಿತ್ಯ ಸಮಾಜಕ್ಕೆ ಕೊಟ್ಟರೆ ಅದು ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂದು ಎಂದು ಹಿರಿಯ ಸಾಹಿತಿ ಎ ಕೆ ರಾಮೇಶ್ವರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಉದ್ಘಾಟನೆ, ಪುಸ್ತಕ ಲೋಕಾರ್ಪಣೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಶಿಕ್ಷಕ ಸಾಹಿತಿ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಟಿಸಿ ಅವರು ಮಾತನಾಡಿದರು.

ಸಾಹಿತಿ ಅಳಿದರೂ ಸಾಹಿತ್ಯ ಸಮಾಜದಲ್ಲಿ ಗಟ್ಟಿಯಾಗಿ ಉಳಿಯುತ್ತದೆ. ತಾನು ಮಾಡುವ ಕೆಲಸ ಇತರರಿಗೆ ಮಾದರಿ ಆಗಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಂಥ ಶಿಕ್ಷಣ ಕೊಡಬೇಕಾಗಿದೆ. ಬರಹಗಳು ಸಮಾಜಮುಖಿ ಚಿಂತನೆಗಳ ಗೂಡಾಗಿರಲಿ. ಗುರುವಿನ ಕರುಣೆ ಮತ್ತು ಬೋಧನೆಗಳೆರಡು ವ್ಯಕ್ತಿತ್ವ ರೂಪಿಸುವಲ್ಲಿ ಪರಿಣಾಮ ಬೀರ ಬಲ್ಲದು ಎಂದರು.

ಮುಖ್ಯ ಅತಿಥಿ ಗುವಿಕ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಪಕ ಡಾ ರಮೇಶ ಲಂಡನಕರ್ ಅವರು, ನಮ್ಮ ಸೃಜನಶೀಲ ಬರವಣಿಗೆಯ ಕೊರತೆಯಿದ್ದು, ಓರೆ ಕೊರೆಗಳನ್ನು ತಿದ್ದುವ ಕೆಲಸ ಸಾಹಿತ್ಯದಿಂದಾಗಬೇಕು. ಅದು ಸಮಾಜದ ಪ್ರಗತಿಗೆ ಪೂರಕವಾಗಿರಬೇಕು. ಕನ್ನಡಿಯಾಗಿ ಜನ ಸಾಮಾನ್ಯರ ಮಧ್ಯೆ ನಿಂತು ಉಸಿರಾಗಬೇಕು ಎಂದರು.

ಕನಾಟಕ ರಾಜ್ಯ ಬರಹಗಾರರ ಬಳಗದ ರಾಜ್ಯಾಧ್ಯಕ್ಷ ಮಧು ಎಲ್ ನಾಯಕ ಅವರು ಅಧ್ಯಕ್ಷತೆ ವಹಿಸಿ, ಬರಹಗಾರರನ್ನು ಗುರುತಿಸಿ ಅವರ ಸಾಹಿತ್ಯ ಪ್ರಕಟಿಸುವ ಕೆಲಸ ಬಳಗವು ಮಾಡುತ್ತಿದೆ. ಬರುವ ದಿನಗಳಲ್ಲಿ ರಾಜ್ಯ ಮಟ್ಟದ ಬರಹಗಾರರ ಸಮಾವೇಶ ಮಾಡಲಾಗುತ್ತದೆ. ಅವರ ಸಾಹಿತ್ಯ ಜನ ಮಾನಸಕ್ಕೆ ತಲುಪಿಸಿದಾಗ ನಾವು ಬರೆದ ಬರವಣಿಗೆ ಸಾರ್ಥಕವಾಗುತ್ತದೆ ಎಂದರು.

ಶಿಕ್ಷಕಿ ಚಂದ್ರಕಲಾ ಪಾಟೀಲ ಅವರು ಬರೆದ ನಲಿ ಕಲಿ ಕವನ ಸಂಕಲನ ಕೃತಿಯನ್ನು ಎಕೆ ರಾಮೇಶ್ವರ ಲೋಕಾರ್ಪಣೆ ಮಾಡಿದರು. ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು ನಲಿ ಕಲಿ ಕೃತಿ ಪರಿಚಯ ಮಾಡಿದರು. ಕರ್ನಾಟಕ ರಾಜ್ಯ ವಿಜ್ಷಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ ಅವರು, ಈ ಭಾಗದ ಎಲ್ಲಾ ಲೇಖಕರ ಕೃತಿಗಳನ್ನು ಪುಸ್ತಕ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬಳಗದ ರಾಜ್ಯ ಉಪಾಧ್ಯಕ್ಷ ಬಾರಾವಲಿ ಬಾವಿಹಳ್ಳಿ, ಖಂಡೂ ಬಂಜಾರ, ಸಾಹಿತಿ ಮಂಗಲಾ ಕಪರೆ, ಚಂದ್ರಕಲಾ ಪಾಟೀಲ ಮಾತನಾಡಿದರು. ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಶಾಳ ಮಠದ ಪೂಜ್ಯ ಕೇದಾರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವನ್ಯಾ ಶಿವರಾಜ ಗೊಬ್ಬುರ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಸಿದ್ದಾರೂಡ ನಾಗರಳ್ಳಿ ಪ್ರಾರ್ಥನೆ ಗೀತೆ ಹಾಡಿದರು. ಶಿವಲೀಲಾ ಎಸ್ ಕೆ ನಿರೂಪಿಸಿದರು. ಬಾಬುಮಿಯಾ ಫೂಲಾರಿ ಸ್ವಾಗತಿಸಿದರು. ಗಂಗಮ್ಮ ನಾಲವಾರ ವಂದಿಸಿದರು.

ಪ್ರಶಸ್ತಿ ಪುರಸ್ಕøತರು: ಡಾ ಶೋಭಾದೇವಿ ಚೆಕಕ್ಕಿ, ಸಿದ್ದಣ್ಣ ಗೋಡೆಕರ್, ಪ್ರಕಾಶ ಕೋಟ್ರೆ, ಸಿಂಧುಮತಿ ಭೋಸ್ಲೆ, ಮಹಾನಂದ ಸಿಬಶೆಟ್ಟಿ, ಬಾಹುಬಲಿ ಮಾಲಗತ್ತಿ, ಸುಕೇಶಿನಿ, ಸುನೀತಾ ಮಾಳಗೆ, ಝಾಪರ್ ಅಲಿ ಮಿರಾನ, ಮಹಾದೇವ ಕೊತಲಿ, ನೇತ್ರಾವತಿ ರಾಂಪೂರ ಹಾಗೂ ರಾಜೇಶ ನಾಗೂರೆ ಅವರಿಗೆ ಶಿಕ್ಷಕ ಸಾಹಿತಿ ಸಿರಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

42 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

45 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

48 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago