ಜೇವರ್ಗಿ: ಜನರನ್ನು ಜನಪ್ರತಿನಿಧಿಗಳು ಗುಲಾಮರಂತೆ ಕಾಣುತ್ತಿದ್ದಾರೆ. ಈ ನಾಡಿನಲ್ಲಿ ಬದುಕುತ್ತಿರುವ ರೈತರಿಗೆ ಸರಕಾರಗಳು ಉತ್ತಮವಾದ ನೀತಿಗಳನ್ನು ರೂಪಿಸುತ್ತಿಲ್ಲ. ರೈತರ ಹೆಸರಿನಲ್ಲಿ ಕಾನೂನುಗಳನ್ನು ರೂಪಿಸಿ ಮೋಸ ಮಾಡುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಸರಕಾರ ಕೆಲಸ ಮಾಡುತ್ತಿದೆ.
ಖಾಸಗಿ ಕಂಪನಿಗಳ ದಲ್ಲಾಳಿಗಳಂತೆ ಸರ್ಕಾರಗಳು ವರ್ತನೆ ಮಾಡುತ್ತವೆ. ಭಾರತ್ ಕಮುನಿಷ್ಠ ಪಕ್ಷ (ಸಿಪಿಐ) ಅಖಿಲ ಭಾರತ ಕಿಸಾನ್ ಸಭಾ (ಎ.ಅಯ್.ಕೆ.ಎಸ್.) ಜಂಟಿಯಾಗಿ ಯಡ್ರಾಮಿ ತಾಲೂಕು ಮಟ್ಟದ ಜಾಥಾ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಅರಳಗುಂಡಗಿ ಹೋಬಳಿಯ ವ್ಯಾಪ್ತಿಯಲ್ಲಿನ 15 ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ 15 ರಂದು ತಾಲೂಕು ಕೇಂದ್ರವಾದ ಯಡ್ರಾಮಿಯಲ್ಲಿ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ.
ಯಡ್ರಾಮಿ ತಾಲೂಕಿನ ಅದರಲ್ಲೂ ಅರಳಗುಂಡಗಿ ಮುರ್ಗನೂರ್, ತೆಲಗಬಾಳ, ಹಾಲ ಘತ್ತರಗಿ ,ಕೋಣಸಿರಿಸಗೆ, ಕುಕುನೂರು ಅಕಂಡಹಳ್ಳಿ, ಶಕಪುರ ,ಮಾನಶಿವನಗಿ, ಕಡಕೋಳ ,ಯತ್ನಾಳ ಹಂಚಿನಾಳ, ಗ್ರಾಮದ ನಾಗರಿಕರು ರೈತರು ಕಾರ್ಮಿಕರು ಮುಖಂಡರು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದೆ.
ಹಕ್ಕೊತ್ತಾಯ ಜಾಥಾದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ. ಕಿಸಾನ್ ಸಭಾದ ಜಿಲ್ಲಾ ಮುಖಂಡರಾದ ಮೌಲಾ ಮುಲ್ಲಾ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ, ಹಾಗೂ ಮಹೇಶ್ ಕುಮಾರ್ ರಾಠೊಡ್ ಸೇರಿದಂತೆ, ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ, ಯಡ್ರಾಮಿ ತಾಲ್ಲೂಕು ಪಕ್ಷದ ಕಾರ್ಯದರ್ಶಿ ಭೀಮರಾಯ ಮುದಬಸ್ಸಪ್ಪ ಗೋಳ. ಹಾಗೂ ಅರಳಗುಂಡಿಗೆಯ ಶಂಕ್ರಪ್ಪ ಆನೂರ್, ಸುಭಾಷ್ ದೊತಪ್ಪಗೋಳ, ಸಾಹೇಬಗೌಡ ಮುರುಡಿ, ಮುರ್ಗನೂರ್ ಗ್ರಾಮದ ಸಿದ್ದಣ್ಣ ಹೊಸಮನಿ, ಭೀಮರಾಯ ನೆಲೋಗಿ, ಹಂಚಿನಾಳ ಗ್ರಾಮದ ರೈತ ಮುಖಂಡರಾದ, ಗೋಪಾಲ ಅಂಚಿನಾಳ್, ಮಲ್ಲಿಕಾರ್ಜುನ್ ಹಾಗೂ ಕೋನ ಸಿರಸಗಿಯ, ಭಗವಂತರಾಯ ಬಿರಾದಾರ್, ಬಸವರಾಜ ಕೆರೂರ್, ರಾಮನಾಥ್ ಬಂಡಾರಿ, ರಮೇಶ್ ಜಾಧವ್, ಸುನಿಲ್ ಕಾಂಬ್ಳೆ ಇತರ ಮುಖಂಡರು ಜಾಥಾದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…