ಕಲಬುರಗಿ: ನ್ಯಾಯಮೂರ್ತಿ ಎ.ಎ. ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರಕಾರ ಈ ಮೂರು ಪಕ್ಷಗಳು ಈ ವರದಿಗೆ ಬದ್ಧರಾಗಿರುತ್ತಾರೆ ಅದೇ ರೀತಿ ಸಂವಿಧಾನ ಬದ್ಧವಾಗಿ ಜಾತಿವಾರು ಜನಸಂಖ್ಯೆ ಅನುಗುಣವಾಗಿ ಪರಿಶಿಷ್ಠ ಜಾತಿಯಲ್ಲಿ ಕರ್ನಾಟಕ ರಾಜ್ಯಾಧ್ಯಾಂತ ಬಹುಸಂಖಿತರಾಗಿರುತ್ತಾರೆಂದು ಬಿಜೆಪಿ ಸರಕಾರ ಅನುದಾನ ನಿಗದಿಪಡಿಸಿ ಒಬ್ಬ ನ್ಯಾಯಾಧಿಶರಿಗೆ ನೇಮಕ ಮಾಡಿ, ಆಯೋಗವನ್ನು ರಚನೆ ಮಾಡಿ ಈ ವರದಿಯನ್ನು ವೈಜ್ಞಾನಿಕವಾಗಿ ಸರಕಾರಕ್ಕೆ ನ್ಯಾಯಾಧಿಶರು ನೀಡಿರುತ್ತಾರೆ ಎಂದು ಡಾ.ಬಾಬು ಜನಗಜೀವನರಾಮ ಅಭಿವೃದ್ದಿ ಮತ್ತು ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜು.ಎಸ್.ಕಟ್ಟಿಮನಿ ಅವರು ತಿಳಿಸಿದ್ದಾರೆ.
ಈ ವರದಿ ಬಗ್ಗೆ ಸಚಿವ ಪ್ರಭು ಚವ್ಹಾಣ ವರದಿ ಬಗ್ಗೆ ನಿಜಾಂಶ ತಿಳಿದುಕೊಳ್ಳದೇ ಕೇಂದ್ರದ ಸಮಾಜಿಕ ಸಬಲೀಕರಣ ಮಂತ್ರಿ ಹಾಗೂ ಮಾದಿಗ ಸಮುದಾಯದವರಾದ ಹುಟ್ಟು ಹೋರಾಟಗಾರರಾದ ಎ. ನಾರಾಯಣ ಸ್ವಾಮಿ ಅವರ ಬಗ್ಗೆ ಕೂಡ ಪ್ರಭು ಚವ್ಹಣ ಅವರು ತುಂಬಾ ಹಗುರವಾರಿ ಮಾತನಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ಕಟ್ಟಿಮನಿ ಹೇಳಿದರು.
ಅವಿವೇಕಿ, ಅಜ್ಞಾನಿ, ನಾಲಾಯಕ ಪ್ರಭು ಚವ್ಹಾಣ ಈ ರೀತಿ ಮುಂದು ಬರುವಂತಹ ದಿನಗಳಲ್ಲಿ ಮಾದಿಗ ಸಮುದಾಯದ ನಾಯಕರ ವಿರುದ್ಧವಾಗಲೀ ಸದಾಶಿವ ಆಯೋಗದ ವಿರೋಧ ಮಾಡುವದನ್ನು ನಿಲ್ಲಿಸಬೇಕು ಹಾಗೂ ನ್ಯಾಯಾಲಯಕ್ಕೆ ಹಾಗೂ ನ್ಯಾಯಾಧೀಶರಿಗೆ ಗೌರವಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸಚಿವ ಪ್ರಭು ಚವ್ಹಾಣ ಅವರಿಗೆ ರಾಜು ಕಟ್ಟನಿಮನಿ ಅವರ ಎಚ್ಚರಿಕೆ ನೀಡಿದರು.
ಈ ಸಂದಭದಲ್ಲಿ ಮುಖಂಡರಾದ ದಶರಥ ಎಂ. ಕಲಗುರ್ತಿ, ನಾಗರಾಜ ಡಿ. ಗುಂಡಗುರ್ತಿ, ಯುವ ಮುಖಂಡರಾದ ಚಂದಪ್ಪ ಎಲ್. ಕಟ್ಟನಿಮನಿ, ಸಚೀನ ಆರ್. ಕಟ್ಟಿಮನಿ, ಸಂಜೀವ ಎನ್.ಕಟ್ಟಿಮನಿ, ಕುಶಾಲ ಎಲ್. ಕಟ್ಟಿಮನಿ, ಶಿವಾ.ಸಿ.ಕಟ್ಟಿಮನಿ, ಸೇರಿದಂತೆ ಇನ್ನಿತರರು ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…