ಹೈದರಾಬಾದ್ ಕರ್ನಾಟಕ

ಕೋವಿಡ್ ನಾಕಾಬಂದಿಗೆ ಗಡಿನಾಡಿನ ಜನ ಹೈರಾಣವೂ ಹೈರಾಣ

ಆಳಂದ: ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಿದ್ದ ಪ್ರಯುಕ್ತ ಹಲವು ದಿನಗಳಿಂದ ಇದರ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ತಾಲೂಕಿನ ಗಡಿಯಲ್ಲಿ ವಿಧಿಸಿದ ನಾಕಾಬಂದಿಗೆ ಜನ ಸಾಮಾನ್ಯರು ಹೈರಾಣವೂ ಹೈರಾಣವಾಗಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆರಂಭದಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ನೆಗೆಟಿವು ವರದಿ ಇಲ್ಲದವರ ಪ್ರವೇಶ ನಿರ್ಭಂದಕ್ಕೆ ವಿಧಿಸ ಭೀಗಿ ಕ್ರಮವಹಿಸಲಾಗಿತ್ತಾದರು. ನಂತರ ಕಾಟಾಚಾರ ಆರಂಭಗೊಂಡಿದ್ದರಿಂದ ಗಡಿನಾಡಿನ ಜನರ ಸಂಕಷ್ಟ ಎದುರಿಸುತ್ತಿದ್ದಾರೆ.

ತಾಲೂಕಿನ ಖಜೂರಿ ಮತ್ತು ಹಿರೋಳಿ ಗಡಿಯಲ್ಲಿ ಮಾತ್ರ ನಾಕಾಬಂದಿ ವಿಧಿಸಿ ಕೋವಿಡ್ ತಪಾಸಣೆ ನೆಗೆಟಿವು ವರದಿಯಿದ್ದರೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಮಹಾರಾಷ್ಟ್ರದಿಂದ ರಾಜ್ಯದೊಳಗೆ ಪ್ರವೇಶಕ್ಕಾಗಿ ಸುಮಾರು ೨೦ ರಸ್ತೆಗಳು ಇವೆ. ಈ ಮೂಲಕ ಜನರು ಬರುತ್ತಿದ್ದಾರೆ. ಆದರೆ ಇವರ‍್ಯಾರಿಗೂ ನಿರ್ಭಂದ ಅನ್ವಯಿಸುತ್ತಿಲ್ಲ. ಬರೀ ಖಜೂರಿ ಮತ್ತು ಹಿರೋಳಿ ಬಾರ್ಡ್‌ರ ಮೂಲಕವೇ ಬರುವ ವಾಹನ ಹಾಗೂ ಜನರಿಗೆ ಮಾತ್ರ ನಿರ್ಭಂದ ಎದುರಾಗಿರುವುದು ಹೈರಾಣಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಗಡಿವರೆಗೆ ಬಂದು ನಾಕಾಬಂದಿ ಸುತ್ತಮುತ್ತಿನ ರಸ್ತೆಯಿಂದಲೇ ಕರ್ನಾಟಕದ ಗಡಿಯೊಳಗೆ ಬಂದ ವಾಹನ ಹತ್ತಿ ಬರುತ್ತಿದ್ದವರಿಗೆ ಯಾವುದೇ ನಿರ್ಭಂದವಿಲ್ಲ. ಮೇಲಾಗಿ ದ್ವಿಚಕ್ರವಾನಗಳಿಗೆ ನಿರ್ಭಂದವಿಲ್ಲ. ಆದರೆ ಖಾಸಗಿ ವಾಹನದಲ್ಲಿ ಪ್ರಯಾಣಿಕರನ್ನು ಹೊತ್ತು ತರುತ್ತಿರುವ ಖಾಸಗಿ ವಾಹನಗಳಿಗೆ ದ್ವಿಚಕ್ರವಾಹನ ಸವಾರರಿಗೆ ಮಾತ್ರ ತಪಾಸಣೆ ಹೆಸರಿನಲ್ಲಿ ಹಣ ವಸೂಲಿ ದಂಧೆಗೆ ಅವಕಾಶ ನೀಡಿದಂತಾಗಿದೆ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

ಗಡಿಯಲ್ಲಿ ಜನ ಸಾಮಾನ್ಯರು, ರೈತರಿಗೆ ಬಡವರಿಗೆ ಮಾತ್ರ ಜೀಪ್, ೧೦೦-೨೦೦ ರೂ.ಗಳು ಪಡೆದು ಕೆಲವರಿಗೆ ರಸೀದಿ ನೀಡುತ್ತಾರೆ, ಇನ್ನೂ ಕೆಲವರಿಗೆ ರಸೀದಿ ನೀಡದೆ ಬಿಡಲಾಗುತ್ತಿದೆ. ಆದರೆ ಕಾರು, ದೊಡ್ಡ ವಾಹನಗಳ ಪ್ರವೇಶಕ್ಕೆ ನೋಡಿ ನೋಡದಂತೆ ಜಾಣಕುರುಡತನ ತೋರಲಾಗಿದೆ ಎನ್ನಲಾಗಿದೆ. ಆದರೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಇಲ್ಲದೆ ಸಂಸ್ಥೆಗಳಿಗೂ ನಷ್ಟವಾಗುತ್ತಿದ್ದು. ಆದರೆ ಈ ನಡುವೆ ಖಾಸಗಿ ವಾಹನಗಳಿಗೆ ಸುಗಿಯಾಗಿ ಜನ ಸಾಮಾನ್ಯರು ಹೆಚ್ಚಿನ ಟಿಕೆಟ್ ನೀಡಿ ಹೋಗಿ ಬರುವಂತಾಗಿದೆ. ಇದರಿಂದ ಜನ ಸಾಮಾನ್ಯರ ಜೇಬಿಗೂ ಕತ್ತರಿ ಬೀಳತೊಡಗಿದ್ದು ಹೀಗೆ ಪರಿಸ್ಥಿತಿ ಮುಂದುವರೆದರೆ ಜನರ ಸಹನೆ ಕಳೆದುಕೊಳ್ಳುವ ಸಾಧ್ಯತೆ ತಳಿಹಾಕಲಾಗದು.

ರೋಟಿ ಬೇಟಿ ಸಂಬಂಧ: ಹಿರೋಳಿ ಮಾರ್ಗದಿಂದ ಕಲಬುರಗಿ ಆಳಂದ ಹಾಗೂ ಅಕ್ಕಲಕೋಟ, ಸೋಲಾಪೂರ ಮತ್ತು ಖಜೂರಿ ಬಾರ್ಡ್‌ನಿಂದ ಕಲಬುರಗಿ ಆಳಂದ, ಉಮರಗಾ ಲಾತೂರ್‌ವರೆಗೆ ಇಲ್ಲಿನ ಜನರ ರೋಟಿ ಬೇಟಿ ಸಂಬಂಧ ಹಾಗೂ ಶಿಕ್ಷಣ, ಆಸ್ಪತ್ರೆ, ವ್ಯಾಪಾರ ವೈಹಿವಾಟಕ್ಕೆ ನಿತ್ಯ ಪ್ರಯಾಣಿಸುವ ಸಾವಿರಾರು ಮಂದಿ ಹೋಗಿ ಬರುವ ಪ್ರಯಾಣಿಕರಿಗೆ ಕಾಟಾಚಾರದ ಗಡಿ ನಾಕಾಬಂದಿ ಆರ್‌ಟಿಪಿಎಸ್ ತಪಾಸಣೆ ಹೆಸರಿನಲ್ಲಿ ಹೆಚ್ಚಾಗಿ ಬಡವರಿಗೆ, ರೈತರಿಗೆ ವ್ಯಾಪಾರಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಬಸ್ ಸಂಚಾರಗಳಲ್ಲಿ: ಗಡಿ ಹೆದ್ದಾರಿಯ ಮೂಲಕ ಬರುವ ಜನರಿಂದಲೇ ಸೋಂಕು ಬರುವುದಾದರೆ ಅನ್ಯ ಮಾರ್ಗಗಳಿಂದ ನಿತ್ಯ ನೂರಾರು ಮಂದಿ ಬರುತ್ತಿದ್ದು, ಇವರಿಂದ ಸೋಂಕು ಬರುವುದಿಲ್ಲವೆ? ಕಾಟಾಚಾರದ ನಾಕಾಬಂದಿ, ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ಎರಡು ರಾಜ್ಯಗಳಿಂದ ನಿರ್ಭಂದಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಯಾಣಿಕರ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಾಗಿದೆ.

ಕೋವಿಡ್ ನಿಯಂತ್ರಣದ ಸರ್ಕಾರದ ಸದುದ್ದೇಶದ ನಡುವೆ. ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಇಲ್ಲಿ ಎಲ್ಲವೂ ನಿರಾತಂಕವಾಗಿ ಆವೂ ಜಾವೋ ಆಗುತ್ತಿದೆ. ಇದರಿಂದಾಗಿ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತ ಮುಂದಿನ ಹೆಜ್ಜೆಗೆ ಎದುರು ನೋಡುತ್ತಿದ್ದಾರೆ.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

2 hours ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

2 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

3 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

3 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

4 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

4 hours ago