ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ ರಾಯಚೂರು, ಕೃಷಿ ಇಲಾಖೆ, ಎಟಿಜಿಸಿ ಹೈದ್ರಾಬಾದ ಸಂಸ್ಥೆ ಸಂಯುಕ್ತ ಆಶ್ರಯದೊಂದಿಗೆ ಹತ್ತಿ ಗುಲಾಬಿ ಕಾಯಿ ಕೊರಕ ನಿರ್ವಹಣಾ ತರಬೇತಿಯನ್ನು ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯಲ್ಲಿ ನಡೆಯಿತು.
ಕೃಷಿ ಮಹಾವಿದ್ಯಾಲಯದಡೀನ್‌ರಾದಡಾ.ಸುರೇಶಎಸ್ ಪಾಟೀಲ್‌ರವರು ಮಾತನಾಡಿ ರೈತರು ರಾಸಾಯನಿಕ ಮುಕ್ತ ಕೃಷಿ ತಂತ್ರಜ್ಞಾನ ಅಳವಡಿಸಿ ಸ್ವಾಲಂಬಿ ಬದುಕು ರೂಪಸಿಲು ಸಲಹೆ ನೀಡಿದರು. ವಲಯ ಕೃಷಿ ಸಂಶೋಧನಾ ಕೇಂದ್ರದಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ.ಎಂ. ಧನೋಜಿರವರು ಮಾತನಾಡಿ ರೈತರಿಗೆ ಹತ್ತಿಯಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಹಾಗೂ ವಿಜ್ಞಾನಿಗೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಳಿಸಿದರು.
ಕಲಬುರಗಿ ಕೃಷಿ ಇಲಾಖೆ ಉಪನಿರ್ದೇಶಕರಾದ ಅನುಸೂಯ ಹೂಗಾರ್‌ರವರು ಪರಿಸರ ಸ್ನೇಹಿ ಕೀಡೆ ನಿರ್ವಹಣೆಗೆ ರೈತರು ಹೆಚ್ಚು ಒತ್ತು ನೀಡಬೇಕು ಜೊತೆಗೆ ಮಳೆಯಿಂದಾಗಿ ಆಧ ಬೆಳೆ ಹಾನಿ ಸಮೀಕ್ಷ ಮೊಬೈಲ್ ಆಪ್ ಬಳಸಿ ತಮ್ಮ ಹೊಲದ ಚಿತ್ರವನ್ನು ಅಪ್‌ಲೋಡ್ ಮಾಡಲು ಸಲಹೆ ನೀಡಿದರು.
ಎಟಿಜಿಸಿ ಜೈವಿಕ ತಂತ್ರಜ್ಞಾನ ಕಂಪನಿಯ ಪ್ರತಿನಿಧಿಗಳಾದ ಡಾ. ಚಿತ್ತರಂಜನ್, ಡಾ. ಶಶಿಧರನ್, ಡಾ. ಮಹಾಂತೇಶ್ ಹತ್ತಿ ಗುಲಾಬಿ ಕಾಯಿಕೊರಕದಕ ನಿರ್ವಹಣಾ ಮಾಹತಿ ನೀಡಿದರು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕೀಟ ವಿಜ್ಞಾನಿಗಳಾದ ಡಾ.ಎ.ಜಿ. ಶ್ರೀನಿವಾಸ್‌ರವರು ರೈತರಿಗೆ ಹತ್ತಿ ಕೀಡೆಗಳ ನಿರ್ವಹಣಾ ಮಾಹಿತಿ ನೀಡಿದರು. ಸ್ಲಾಟ್‌ತಾಂತ್ರಿಕತೆ, ಫೆರೋಮೋನ್ ಬಳಸಿ ಕೀಡೆ ನಿಯಂತ್ರಣಾ ಮಾಹಿತಿಯನ್ನು ರೈತರಿಗೆ ವಿವರಿಸಿದರು. ಕೆವಿಕೆಯ ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಸ್ಯರೋಗ ತಜ್ಞರಾದ ಡಾ.ಜಹೀರ್ ಅಹೆಮದ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಹಾಯಕ ನಿರಂಜನ್ ಧನ್ನಿ ವಂದಿಸಿದರು. ಹಿರಿಯ ಕೃಷಿ ಅನುಭವಿ ರೈತರಾದ ಸೋಮಣ್ಣ ನಡುಗೆಟ್ಟಿ ಪ್ರಸ್ತುತ ಹತ್ತಿ ಬೆಳೆಯ ಸ್ಥಿತಿಗತಿ ವಿವರಿಸಿದರು. ಗೌಡಗಾಂವ್, ಸುಂಟನೂರ್, ಹಸರ್‌ಗುಂಡಗಿ ಗ್ರಾಮದ ರೈತರು ಭಾಗವಹಿಸಿದರು. ಹತ್ತಿಯಲ್ಲಿ ನೂತನ ಸಂಯೋಗ ಅಡಚಣ ತಂತ್ರಜ್ಞಾನದಿಂದ ಗುಲಾಬಿ ಕಾಯಿಕೊರಕ ನಿರ್ವಹಣೆ ಮಾಡಬಹುದಾಗಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…