ಕಲಬುರಗಿ: 2017 ರಲ್ಲಿ ಸಿಎಂ ಯಡಿಯೂರಪ್ಪ ಕಲಬುರಗಿಗೆ ಬಂದು ಹೈದ್ರಾಬಾದ್ ಹೆಸರು ತೆಗೆದು ಹಾಕಿ ಆ ಜಾಗದಲ್ಲಿ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದರೇ ಹೊರತು ಅಸಲು ಬಜೆಟ್ ಘೋಷಣೆಯಂತೆ ಅನುದಾನವನ್ನೇ ಬೀಡುಗಡೆ ಮಾಡಲಾಗುತ್ತಿಲ್ಲ. ಹೆಸರು ಬದಲಾಯಿಸಿದರೆ ಸಾಕೆ? ಹೆಸರು ಬದಲಾದರೂ ಈ ಭಾಗದ ಪ್ರಗತಿ ನಕಾಶೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಲ್ಯಾಣ ನಾಡಿನ ಪ್ರಗತಿಗೆ ಇರುವಂತಹ ಕೆಕೆಆರ್‍ಡಿಬಿಗೆ ಸರಕಾರ ನಿಗದಿತ ಹಣವನ್ನೇ ನೀಡುತ್ತಿಲ್ಲ. ಹೀಗಾಗಿ ಪ್ರಗತಿ ಆಗೆಂದರೆ ಹೇಗೆ ಆಗಲು ಸಾಧ್ಯ? ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಇಂದು ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1, 500 ಕೋರು ಹಣ ನೀಡೋದಾಗಿ ಹೇಳಿದ್ದ ಸರ್ಕಾರ 1, 136 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಕಳೆದ ವರ್ಷವೂ ಅನುದಾನ ಹೇಳಿz್ದÉೀ ಒಂದು, ಬಿಡುಗಡೆಯಾಗಿz್ದÉೀ ಇನ್ನೊಂದು. ಇದರಿಂದಾಗಿ ಕಲ್ಯಾಣ ನಾಡಿನಲ್ಲಿರುವ ಕಲಬುರಗಿ, ಬೀದರ್ ಸೇಇದತೆ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಲೇ ಸ್ಥಗಿತಗೊಂಡಿವೆ. ಇದರಿಂದ ಪ್ರಗತಿಗೆ ಪೆಟ್ಟಾಗಿದೆ ಎಂದರು.
ಯಡಿಯೂಪಪ್ನವರು ಇಲ್ಲಿಗೆ ಬಂದು ಕಲ್ಯಾಣ ನಾಡೆಂದು ಹೇಳಿದಾಗ ಪಕ್ಷಭೇದ ಮರೆತು ನಾವೆಲ್ಲರೂ ಸ್ವಾಗತಿಸಿz್ದÉೀವು. ಈಗ ನೋಡಿದರೆ ಘೋಷಣೆಯಾಗಿ ವರ್ಷಗಳೇ ಕಳೆದರೂ ಈ ನಾಡಿನ ಪ್ರಗತಿ ರೂಪದಲ್ಲಿ ಕಲ್ಯಾಣವೇ ಆಗುತ್ತಿಲ್ಲವೆಂದು ಡಾ. ಅಜಯ್ ಸಿಂಗ್ ವಿಷಾದಿಸಿದರು. ಕಳೆದ ಒಂದೂವರೆ 2 ವರ್ಷದಂದ ಕೆಕೆಆರ್‍ಡಿಬಿಗೆ ಹಣವೇ ಸರಿಯಾಗಿ ಬಿಡುಗಡೆಯಾಗಿಲ್ಲ. ಇದರಿಂದಾಗಿ ಹಿಂದುಳಿದ ನೆಲದ ಪ್ರಗತಿಗೆ ಗ್ರಹಣ ಹಿಡಿದಿದೆ ಎಂದು ಡಾ. ಅಜಯ್ ಸಿಂಗ್ ಆತಂಕ ಹೊರಹಾಕಿದರು.
ಅನೇಕ ಪ್ರಗತಿ ಯೋಜನೆಗಳನ್ನು ಶಾಸಕರಾಗಿ ನಾವೂ ಪಟ್ಟಿ ನೀಡಿz್ದÉೀವೆ. ಇಂದೀಗ 2 ವರ್ಷಗಳ ಇಹಂದಿನ ಯೋಜನೆಗಳ ಟೆಂಡರ್ ಸಾಗಿದೆ. ಹೀಗಾದರೆ ಪ್ರಗತಿಗೆ ವೇಗ ಬರೋದು ಯಾವಾಗ? ಬರೀ ಹೆಸರು ಬದಲಿಸಿ ಬಿಟ್ಟರೆ ಆಯ್ತೆ? ನುಡಿದಂತೆ ನಡೆಯಬೇಕು, ಹೇಳಿದಷ್ಟು ಹಣ ಬಿಡುಗಡೆ ಮಾಡಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು. 2019- 20 ರಲ್ಲಂತೂ 1, 492 ಕೋರು ಹಣ ಬರಬೇಕಿತ್ತು, ಬಂದಿದ್ದು ಕೇವಲ 373 ಕೋಟಿ ರು ಮಾತ್ರ. ಹೀಗಾದಲ್ಲಿ ಸುಆರಣೆ ಯಾವಾಗ? ಎಂದು ಡಾ. ಸಿಂಗ್ ಖಾರವಾಗಿ ಪ್ರಶ್ನಿಸಿದರು.
ರಸಗೊಬ್ಬರ ಹೆಚ್ಚಿನ ದರದಲ್ಲಿ ಖರೀದಿಸುವ ಮೂಲಕ ನಾಡಿನ ಬಡ ರೈತರು ಸಂಕಷ್ಟಕ್ಕೀಡಾಗಿದ್ದಾರೆಂದು ಕೃಷಿ ಇಲಾಖೆಯ ಕುರಿತಾದ ಪ್ರಶ್ನೆಗೂ ರೈತರ ಬವಣೆಯನ್ನು ಸದನದಲ್ಲಿ ಮಂಡಿಸಿ ಗಮನ ಸೆಳೆದ ಡಾ. ಅಜಯ್ ಸಿಂಗ್ ರಸಗೊಬ್ಬರ ಬೆಲೆ ಹೇಚ್ಚಿಸಿದ್ದನ್ನು ಇಳಿಸಲಾಗಿದೆ, ಬೆಲೆ ಕಮ್ಮಿ ಮಾಡಿ ರೈತರಿಗೆ ಗೊಬ್ಬರ ತಲುಪಿಸುವಂತೆ ಕೇಂದ್ರ ಹೇಳಿದ್ದರೂ ಈ ಆದೇಶ ರಾಜ್ಯದಲ್ಲಿ ಜಾರಿಗೊಂಡಿಲ್ಲವೆಂದು ಮಾತಿನಲ್ಲೇ ಸರ್ಕಾರವನ್ನು ತಿವಿದರು.
ಜೇವರ್ಗಿಯಲ್ಲಿ ರೈತರು ಯೂರಿಯಾ ಖರೀದಿಗೆ ಹೋದರೆ ಅವರಿಗೆ ಅಗತ್ಯವಿಲ್ಲದ ಗೊಬ್ಬರಗಳನ್ನೂ ಖರೀದಿಸಿದರೆ ಮಾತ್ರ ಯೂರಿಯಾ ಕೊಡೋದಾಗಿ ರಸಗೊಬ್ಬರ ಮಳಿಗೆಯವರು ಹೇಳುತ್ತಿದ್ದಾರೆ. ಇದು ರೈತರ ಶೋಷಣೆಯಲ್ಲದೆ ಮತ್ತೇನು? 1 ಕ್ವಿಂಟಾಲ್ ಭತ್ತ ಮಾರಿದರೂ 1 ಕ್ವಿಂಟಾಲ್ ಯೂರಿಯಾ ಅವರಿಗೆ ಖರೀದಿಸದಂತಾಗಿದೆ. ಇದದರಿಂದ ರೈತರು ಬೇಸತ್ತಿದ್ದಾರೆಂದು ಡಾ. ಅಜಯ್ ಸಿಂಗ್ ರೈತರ ಬವಣೆ ಸದನದಲ್ಲಿ ಎಲೆಎಳೆಯಾಗಿ ಬಿಚ್ಚಿಟ್ಟು ಪರಿಹಾರಕ್ಕೆ ಆಗ್ರಹಿಸಿದರು.
ಡಾ. ಅಜಯ್ ಸಿಂಗ್ ಅವರ ಗಮನ ಸೆಳಂಯುವ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಬಿಸಿ ಪಾಟೀಲ್ ಈಗಾಗಲೇ ಕೇಂದ್ರದ ಹೊಸ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ರಸಗಬ್ಬರ ಮಳಿಗೆಯವರ ವಿರುದ್ಧ ಅತೀ ಹೆಚ್ಚಿನ ಅಂದರೆ 700 ರಷ್ಟು ಪ್ರಕರಣ ದಾಖಲಿಸಲಾಗಿದೆ. ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರ ದೊರಕುವಂತೆ ಇನ್ನೂ ಕಟ್ಟುನಿಟ್ಟು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…