ಬೆಂಗಳೂರು: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಮಾರಾಟ ಮೂಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದನ್ನು ಮುಂದುವರಿಸಿದೆ ಮತ್ತು 2021 ರ ಡಿಸೆಂಬರ್ ಅಂತ್ಯದ ವೇಳೆಗೆ ಇನ್ನೂ 1.2 ಲಕ್ಷ ಹೊಸ ಮಾರಾಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ.
ಫ್ಲಿಪ್ ಕಾರ್ಟ್ ಕಳೆದ ಕೆಲವೇ ತಿಂಗಳಿಂದ ತನ್ನ ಪ್ಲಾಟ್ ಫಾರ್ಮ್ ನಲ್ಲಿ 75,000 ಕ್ಕೂ ಹೆಚ್ಚು ಮಾರಾಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಇದರೊಟ್ಟಿಗೆ ಅನೇಕ ಎಂಎಸ್ಎಂಇಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಸೇರಿಸಿಕೊಳ್ಳುವ ಮೂಲಕ ಹಬ್ಬದ ಸೀಸನ್ ನಲ್ಲಿ ಇ-ಕಾಮರ್ಸ್ ವ್ಯವಹಾರಕ್ಕೆ ಉತ್ತೇಜನ ನೀಡುವುದನ್ನು ಮುಂದುವರಿಸಲಿದೆ.
ಪ್ರಸ್ತುತ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ 3.75 ಲಕ್ಷಕ್ಕೂ ಅಧಿಕ ಮಾರಾಟಗಾರರಿಗೆ ಡಿಜಿಟಲ್ ವ್ಯಾಪಾರಕ್ಕೆ ಬೆಂಬಲವಾಗಿ ನಿಂತಿದೆ ಮತ್ತು ಈ ವರ್ಷಾಂತ್ಯದ ವೇಳೆಗೆ ಈ ಸಂಖ್ಯೆಯನ್ನು 4.2 ಲಕ್ಷಕ್ಕೆ ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಸಾಂಕ್ರಾಮಿಕ ಆರಂಭವಾದಾಗಿನಿಂದ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಗೆ ಎಂಎಸ್ಎಂಇಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಉದ್ಯಮಗಳು ಇ-ಕಾಮರ್ಸ್ ನೊಂದಿಗೆ ಆನ್ ಲೈನ್ ಬ್ಯುಸಿನೆಸ್ ಅನ್ನು ಮಾಡಲು ಹೆಚ್ಚು ಆಸಕ್ತಿ ತೋರುತ್ತಿವೆ. 2 ಮತ್ತು 3 ನೇ ಶ್ರೇಣಿಯ ನಗರಗಳಾದ ಆಗ್ರಾ, ಇಂದೋರ್, ಜೈಪುರ, ಪಾಣಿಪತ್, ರಾಜಕೋಟ್ ಮತ್ತು ಸೂರತ್ ನಂತಹ ಇನ್ನೂ ಅನೇಕ ನಗರಗಳ ಹೊಸ ಮಾರಾಟಗಾರರು ಮತ್ತು ಎಂಎಸ್ಎಂಇ ಇ-ಕಾಮರ್ಸ್ ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಜನರಲ್ ಮರ್ಚೈಂಡೈಸ್, ಹೋಂ ಅಂಡ್ ಕಿಚನ್ ಹಾಗೂ ಪರ್ಸನಲ್ ಕೇರ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಸಾಕ್ಷಿಯಾಗಿದೆ.
*ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು ಮಾತನಾಡಿ*, “ಡಿಜಿಟಲ್ ಕಾಮರ್ಸ್ ನ ಮೌಲ್ಯ ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಕ್ಷಿಪ್ರಗತಿಯಲ್ಲಿ ಬೆಳೆಸಿಕೊಳ್ಳಲು ಸಾಧ್ಯವಾಗಿಸುವ ಸಾಮರ್ಥ್ಯವು ಚೆನ್ನಾಗಿ ತಿಳಿದಿದೆ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಸ್ವೀಕಾರಗೊಳ್ಳುತ್ತಿದೆ.
ಎಂಎಸ್ಎಂಇಗಳು ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಮಾರ್ಕೇಟ್ ಪ್ಲೇಸ್ ನಲ್ಲಿ ತಮ್ಮ ನಂಬಿಕೆಯನ್ನು ಮುಂದುವರಿಸುತ್ತಿರುವುದನ್ನು ನೋಡಲು ಮತ್ತು ಪ್ರೋತ್ಸಾಹದಾಯಕವಾಗಿರುವುದನ್ನು ನೋಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಈ ಹಬ್ಬದ ಸೀಸನ್ ನಲ್ಲಿ ಎಂಎಸ್ಎಂಇಗಳು ಮತ್ತು ದೇಶಾದ್ಯಂತ ಇರುವ ಮಾರಾಟಗಾರರ ಪರಿಸರ ವ್ಯವಸ್ಥೆಗಳು ಇನ್ನಷ್ಟು ಸ್ಥಿತಿಸ್ಥಾಪಕ ಮತ್ತು ಪುನಶ್ಚೇತನಗೊಂಡಿವೆ. ಅವರ ಕಲಿಕೆ, ಹಣಕಾಸು ವ್ಯವಹಾರ, ಕಾರ್ಯಾಚರಣೆ ಮತ್ತು ವ್ಯಾಪಾರದ ಅಗತ್ಯತೆಗಳನ್ನು ಬೆಂಬಲಿಸಲು ನಾವು ಉತ್ಸುಕರಾಗಿದ್ದೇವೆ. ಏಕೆಂದರೆ, ಅವರು ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಉತ್ಪನ್ನಗಳ ವ್ಯಾಪಕ ಆಯ್ಕೆಗಳನ್ನು ನೀಡುತ್ತಿದ್ದಾರೆ.
ಪ್ರತಿ ಎಂಎಸ್ಎಂಇಗಳು, ಸಣ್ಣ ವ್ಯಾಪಾರಿಗಳು, ಮಹಿಳಾ ಉದ್ಯಮಿಗಳು, ಕುಶಲಕರ್ಮಿಗಳು, ನೇಕಾರ ಅಥವಾ ಕರಕುಶಲಕರ್ಮಿಗಳು ಮುಂಬರುವ ಹಬ್ಬದ ಸೀಸನ್ ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ನಾವು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದೇವೆ. ಇದಲ್ಲದೇ, ಕಟ್ಟಕಡೆಯ ವಿತರಣೆ ಕಾರ್ಯಕ್ರಮದಡು ಕಿರಾಣಗಳೊಂದಿಗಿನ ಪಾಲುದಾರಿಕೆ ಪ್ರಕ್ರಿಯೆಯೂ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವುದಕ್ಕೆ ನಮಗೆ ಅತ್ಯಂತ ಸಂತಸವೆನಿಸುತ್ತಿದೆ’’ ಎಂದು ತಿಳಿಸಿದರು.
ಈ 1.2 ಲಕ್ಷ ಮಾರಾಟಗಾರರು ಪರಿಸರ ವ್ಯವಸ್ಥೆಯಲ್ಲಿ 4 ಲಕ್ಷದಷ್ಟು ಹೆಚ್ಚುವರಿ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ. ಇದರ ಜೊತೆಗೆ ಇ-ಕಾಮರ್ಸ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಆರ್ಥಿಕ ಪ್ರಗತಿಗೂ ಕೊಡುಗೆ ನೀಡಬಲ್ಲವರಾಗಿದ್ದಾರೆ.
ದೇಶದ ಬ್ಯುಸಿನೆಸ್ ಅನ್ನು ಮುಂದುವರಿಯುವಂತೆ ಮಾಡುವುದು ಮತ್ತು ಹಬ್ಬದ ಸೀಸನ್ ನಲ್ಲಿ ಈ ಮಾರಾಟಗಾರರ ಬೆಳವಣಿಗೆಗೆ ಪೂರಕವಾಗಿ ಫ್ಲಿಪ್ ಕಾರ್ಟ್ ಮರುದಿನದ ಪಾವತಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇವರು ತಮ್ಮ ಆರ್ಡರ್ ಅನ್ನು ಸ್ವೀಕರಿಸಿದ ಮರುದಿನವೇ ಹಣವನ್ನು ಪಡೆಯಲಿದ್ದಾರೆ. ಈ ಕಾರ್ಯಕ್ರಮದಡಿ ಮಾರಾಟಗಾರರು 30 ದಿನಗಳ ಉಚಿತ ಟ್ರಯಲ್ ಅನ್ನೂ ಪಡೆಯಬಹುದಾಗಿದೆ.
ಈ ಕಾರ್ಯಕ್ರಮವನ್ನು ನಿಗದಿತ ಈ ಅವಧಿಗಿಂತ ಹೆಚ್ಚು ಕಾಲ ಮುಂದುವರಿಸಲು ಬಯಸಿದರೆ ವಿಸ್ತರಿತ ಅವಧಿಗೆ ಕಡಿಮೆ ಪ್ರಮಾಣದ ವ್ಯವಹಾರ ಶುಲ್ಕವನ್ನು ಭರಿಸಬೇಕಾಗುತ್ತದೆ. ಈ ವ್ಯವಸ್ಥೆಯು ಮಾರಾಟಗಾರರಿಗೆ ಕಾರ್ಯನಿರತ ಬಂಡವಾಳದ ನಿರಂತರ ಹರಿವನ್ನು ಖಾತರಿಪಡಿಸುತ್ತದೆ. ಅವರಲ್ಲಿ ಅನೇಕರು ತಮ್ಮ ವ್ಯವಹಾರದ ಬೆಳವಣಿಗೆಗೆ ಅಡ್ಡಿಯಾಗುವ ಹಣಕಾಸಿನ ಸವಾಲುಗಳನ್ನು ಇದರ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.
ಇದಲ್ಲದೇ, ಫ್ಲಿಪ್ ಕಾರ್ಟ್ ತನ್ನ ಗ್ರೋಥ್ ಕ್ಯಾಪಿಟಲ್ ಮಾರಾಟಗಾರ ಹಣಕಾಸು ಕಾರ್ಯಕ್ರಮದ ಭಾಗವಾಗಿ ತಮ್ಮ ಸಾಲದಾತರಿಂದ ಯೋಜಿತವಾದ ಬೆಳವಣಿಗೆಯ ಆಧಾರದ ಮೇಲೆ ಮಾರಾಟಗಾರರಿಗೆ ಕಸ್ಟಮೈಸ್ ಮಾಡಿದ ಕೊಡುಗೆಗಳನ್ನೂ ನೀಡುತ್ತಿದೆ.
ಇದು ಕೇವಲ ಮಾರಾಟಗಾರರಿಗೆ ಹಬ್ಬದ ಸೀಸನ್ ನಲ್ಲಿ ತಮ್ಮ ಪೂರೈಕೆಯನ್ನು ಹೆಚ್ಚಿಸಲು ಅಗತ್ಯವಾಗಿರುವ ಹಣಕಾಸಿನ ನೆರವನ್ನು ಮಾತ್ರ ಖಾತರಿಪಡಿಸುವುದಿಲ್ಲ. ಇದರ ಜೊತೆಗೆ ಮುಂಬರುವ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಂದರ್ಭದಲ್ಲಿಯೂ ತಮ್ಮ ಅಪೇಕ್ಷಿತವಾದ ಸಾಮರ್ಥ್ಯವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಈ ಸಾಲಗಳು ಪ್ಲಾಟ್ ಫಾರ್ಮ್ ನಲ್ಲಿ ಮಾರಾಟವಾಗುವ ಎಂಎಸ್ಎಂಇಗಳಿಗೆ ಹೆಚ್ಚು ಲಭ್ಯವಾಗುವಂತೆ ಮಾಡಲು ಕಡಿಮೆ ಬಡ್ಡಿ ದರಗಳನ್ನು ಹೊಂದಿರುತ್ತವೆ.
ಫ್ಲಿಪ್ ಕಾರ್ಟ್ ತನ್ನ ಪಾನ್ –ಇಂಡಿಯಾ ಮಾರಾಟಗಾರರ ಮೂಲಕ್ಕಾಗಿ 45 ದಿನಗಳ ಕಾಲದ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂಬರುವ ಹಬ್ಬದ ಸಂದರ್ಭದಲ್ಲಿ ತಮ್ಮ ವ್ಯಾಪಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಮಾರಾಟಗಾರರು, ಎಂಎಸ್ಎಂಇಗಳು, ಸೂಕ್ಷ್ಮ ಉದ್ಯಮಗಳು, ಮಹಿಳಾ ಉದ್ಯಮಿಗಳು, ಕುಶಲಕರ್ಮಿಗಳನ್ನು ನೀಡುವ ಉತ್ತಮವಾದ ಅಭ್ಯಾಸಗಳು ಮತ್ತು ಒಳನೋಟಗಳನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ನೇಕಾರರು ಮತ್ತು ಕರಕುಶಲ ತಯಾರಕರು ತಮ್ಮ ವ್ಯಾಪಾರವನ್ನು ಮತ್ತಷ್ಟು ಬೆಳವಣಿಗೆ ಹೊಂದುವಂತೆ ಮಾಡಲು ಮತ್ತು ಇ-ಕಾಮರ್ಸ್ ನ ಲಾಭವನ್ನು ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ಈ ವಾರ್ಷಿಕ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮವು ಫ್ಲಿಪ್ ಕಾರ್ಟ್ ನ ದೇಶವ್ಯಾಪಿ ಮಾರಾಟಗಾರರ ಪರಿಸರ ವ್ಯವಸ್ಥೆಯನ್ನು ತನ್ನ ಮಾರುಕಟ್ಟೆ ಸ್ಥಳದ ಮುಂದಾಳತ್ವ ತಂಡದೊಂದಿಗೆ ಅನನ್ಯ ಪ್ರಯತ್ನಗಳ ಮೂಲಕ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
ಮಾರಾಟಗಾರರು ತಮ್ಮ ವ್ಯಾಪಾರವನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಸೂಪರ್ ವ್ಯಾಪಾರಿಯಂತಹ ಆಕರ್ಷಕ ಮತ್ತು ಗ್ಯಾಮಿಫೈಡ್ ಕಂಟೆಂಟ್ ಹಾಗೂ ಕಲಿಕಾ ಮಾದರಿಗಳನ್ನು ಬಳಸಲು ಅವಕಾಶವನ್ನು ನೀಡಲಾಗಿದೆ. ಈ ವರ್ಷ ಇವುಗಳನ್ನು ಮಾರಾಟಗಾರರ ನೇತೃತ್ವದ ವೆಬ್ ನಾರ್ ಗಳು ಮತ್ತು ಎಲ್ಲಾ ಹೊಸ ವರ್ಚುವಲ್ ಫ್ಲಿಪ್ ಕಾರ್ಟ್ ಬ್ಯುಸಿನೆಸ್ ಅವರ್ಸ್ ಸೆಶನ್ ಗಳೊಂದಿಗೆ ಸೇರಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಹೆಚ್ಚು ಮಾರಾಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಆಗ್ರಾ, ಫರೀದಾಬಾದ್, ಇಂದೋರ್ ನಂತಹ ಸಣ್ಣ ನಗರಗಳ ಹೆಚ್ಚು ಮಾರಾಟಗಾರರು ಈ ಬಾರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಫ್ಲಿಪ್ ಕಾರ್ಟ್ ಮಾರ್ಕೇಟ್ ಪ್ಲೇಸ್ ನ ಮಾರಾಟಗಾರ, ಶಾಪಿಂಗ್ ಅಂಡ್ ವ್ಹೂಪಿಂಗ್ ಮಾಲೀಕರಾದ ಚಿತ್ರಾ ವ್ಯಾಸ್ ಅವರು ಮಾತನಾಡಿ, “ಮಾರಾಟಗಾರರ ವೆಬ್ ನಾರ್ ಗಳು ನಿಜವಾಗಿಯೂ ಉಪಯುಕ್ತವಾಗಿವೆ, ಮಾರಾಟಗಾರರ ಡ್ಯಾಶ್ ಬೋರ್ಡ್ ಅನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಅವರು ಬಹಳಷ್ಟು ಕಲಿಸುತ್ತಾರೆ.
ನಮ್ಮಲ್ಲಿ ಅನೇಕರು ಫ್ಲಿಪ್ ಕಾರ್ಟ್ ಗೆ ಹೊಸಬರು ಮತ್ತು ಡ್ಯಾಶ್ ಬೋರ್ಡ್ ಅನ್ನು ಹೆಚ್ಚು ಬಳಸದೇ ಇರುವವರು ಇದ್ದೆವು. ಆದರೆ, ವೆಬ್ ನಾರ್ ಗಳ ಮೂಲಕ ನಾವು ಅವರ ಬಹಳಷ್ಟು ಕಾರ್ಯಗಳನ್ನು ಕಲಿಯಬಹುದು ಮತ್ತು ಇವುಗಳೊಂದಿಗೆ ಹೇಗೆ ಬೆಳೆಯಬಹುದು ಎಂಬುದನ್ನು ಕಲಿತುಕೊಳ್ಳುತ್ತೇವೆ’’ ಎಂದರು.
ಫ್ಲಿಪ್ ಕಾರ್ಟ್ ಮಾರ್ಕೇಟ್ ಪ್ಲೇಸ್ ಮಾರಾಟಗಾರರಾದ ಕಟೇಲ ಕ್ರಿಯೇಶನ್ಸ್ ನ ಮನೀಶ್ ಅವರು ಮಾತನಾಡಿ, “ಫ್ಲಿಪ್ ಕಾರ್ಟ್ ತಂಡದೊಂದಿಗೆ ಸಂಪರ್ಕ ಬೆಳೆಸಿದ ನಂತರ ಮತ್ತು ಅವರ ಕೆಲವು ವಿಡಿಯೋಗಳನ್ನು ನೋಡಿದ ನಂತರ ನನ್ನ ಉತ್ಪನ್ನಗಳ ಲಭ್ಯತೆಯ ಮಹತ್ವವನ್ನು ಅರಿತುಕೊಂಡೆ. ನಾನು ಫ್ಲಿಪ್ ಕಾರ್ಟ್ ಸಹಾಯದಿಂದ ಜಾಹೀರಾತುಗಳನ್ನು ರಚಿಸುತ್ತಿದ್ದೇನೆ ಮತ್ತು ಇದು ಹಬ್ಬದ ಸಂದರ್ಭದಲ್ಲಿ ನನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ’’ ಎಂದು ಹೇಳಿದರು.
ಫ್ಲಿಪ್ ಕಾರ್ಟ್ ಇತ್ತೀಚೆಗೆ ತನ್ನ #KarloJashnKiTayyari ಅಭಿಯಾನವನ್ನು ಆರಂಭಿಸಿದೆ. ಮಾರಾಟಗಾರರು ಮತ್ತು ಎಂಎಸ್ಎಂಇಗಳ ಸಮುದಾಯದ ಮುಂಬರುವ ಹಬ್ಬದ ಸೀಸನ್ ನಲ್ಲಿ ಎದುರು ನೋಡುತ್ತಿರುವ ಸಂತೋಷ ಉತ್ಸಾಹ ಮತ್ತು ಪೂರ್ವಸಿದ್ಧತೆಯ ಮನಸ್ಥಿತಿಯನ್ನು ತೋರಿಸಲು ಆರಂಭಿಸಿದೆ.
ಈ ಅಭಿಯಾನವು ವಿವಿಧ ಭೌಗೋಳಿಕ ಸ್ಥಳಗಳಿಂದ ಮಾರಾಟಗಾರರ ಮನಸ್ಥಿತಿಯನ್ನು ಸೆಳೆದುಕೊಳ್ಳುತ್ತದೆ ಮತ್ತು ವಿವಿಧ ಸ್ಥಳಗಳ ಹೊರತಾಗಿಯೂ ಮಾರಾಟಗಾರರ ಸಮುದಾಯವು ಹಬ್ಬದ ಸಂದರ್ಭದಲ್ಲಿ ಹೇಗೆ ಒಟ್ಟಾಗಿ ನಿಲ್ಲುತ್ತದೆ ಎಂಬುದನ್ನು ಇದು ತೋರಿಸಿಕೊಡುತ್ತದೆ. ಏಕೆಂದರೆ, ಅವರು ಇ-ಕಾಮರ್ಸ್ ಮೂಲಕ ಪ್ಯಾನ್ ಇಂಡಿಯಾ ಗ್ರಾಹಕರ ಬಹುತೇಕ ಬೇಡಿಕೆಗಳನ್ನು ಈಡೇರಿಸುತ್ತಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…