ಬಿಸಿ ಬಿಸಿ ಸುದ್ದಿ

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಇಂದು ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿಕಲ್ಯಾಣಕರ್ನಾಟಕಉತ್ಸವ ೨೦೨೧ ಅನ್ನುಆಚರಿಸಲಾಯಿತು. ಗೌರವಾನ್ವಿತ ಕುಲಪತಿ ಪ್ರೊ. ಬಿ ಸತ್ಯನಾರಾಯಣಅವರುಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಆಡಳಿತ ಭವನದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿಕಾರ್ಯಕ್ರಮ ನಡೆಯಿತು.

ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ನೇತಾಜಿ ಸುಭಾ?ಚಂದ್ರ ಬೋಸ್‌ಅವರು ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿಅವರು ವಹಿಸಿದ ಪಾತ್ರಕ್ಕಾಗಿ ಹೆಚ್ಚಿನ ಗಮನಕ್ಕೆ ಅರ್ಹರು. ದುರದೃ?ವಶಾತ್‌ಗಾಂಧೀಜಿ ಮತ್ತು ನೆಹರುಜಿಗೆ ನೀಡಲಾದ ಮಹತ್ವವನ್ನುಅವರಿಗೆ ನೀಡದಿರುವುದುದುರದೃ?ಕರ ಎಂದು ಸಿಯುಕೆಯ ಸಾಮಾಜಿಕಕಾರ್ಯ ವಿಭಾಗದ ಪ್ರೊ. ಚನ್ನವೀರ್‌ಆರ್ ಎಂ ಅವರುತಮ್ಮಅತಿಥಿ ಭಾ?ಣ ಹೇಳಿದರು. ಮುಂದುವರೆದು ಮಾತನಾಡಿ “ಇದುಅಖಂಡ ಭಾರತದಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆಏಕೆಂದರೆ ನಿಜಾಮರಾಜ್ಯವು ಪೋಲೊ ಕಾರ್ಯಾಚರಣೆಯ ಮೂಲಕ ಅಧಿಕೃತವಾಗಿ ಭಾರತೀಯಒಕ್ಕೂಟದಲ್ಲಿ ವಿಲೀನಗೊಂಡಿತು.

ಇದರ ಶ್ರೇಯಸ್ಸು ’ಭಾರತದ ಉಕ್ಕಿನ ಮನು?’ ಸರ್ದಾರ ಪಟೇಲ್‌ಅವರಿಗೆ ಸಲ್ಲುತ್ತದೆ. ೧೯೪೭ ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ, ಮೂರು ಸಂಸ್ಥಾನಗಳಾದ ಜಮ್ಮು ಮತ್ತು ಕಾಶ್ಮೀರ, ಜುನಾಘಡ್ ಮತ್ತು ಹೈದರಾಬಾದ ಭಾರತೀಯಒಕ್ಕೂಟವನ್ನು ಸೇರಲು ನಿರಾಕರಿಸಿದವು ಮತ್ತು ಸ್ವತಂತ್ರ ರಾಷ್ಟ್ರಗಳಾಗಲು ಬಯಸಿದ್ದವು. ಆದರೆ ಹೈದರಾಬಾದ ನಿಜಾಮ ಮೀರ್‌ಒಸ್ಮಾನ್ ಅಲಿ ಖಾನ್, ಒಂದುಕಡೆತನ್ನ ಸ್ವಾತಂತ್ರ್ಯವನ್ನುರಕ್ಷಿಸಲು ವಿಶ್ವ ಸಂಸ್ಥೆಗೆ  ಹೋದರು ಮತ್ತುಇನ್ನೊಂದುಕಡೆ ಪಾಕಿಸ್ತಾನದೊಂದಿಗೆ ಮಾತನಾಡಲು ಮಾತುಕತೆ ನಡೆಸಿದರು.

ಇತ್ತ ಸ್ವಾಮಿರಮಾನಂದತೀರ್ಥರ ನೇತೃತ್ವದಲ್ಲಿ ನಿಜಾಮ ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು ಮತ್ತು ಭಾರತೀಯಒಕ್ಕೂಟವನ್ನು ಸೇರಲು ಬಯಸಿದ್ದರು. ಖಾಸಿಂ ರಜ್ವಿ ಸಂಘಟಿಸಿದ ಖಾಸಗಿ ಸೇನೆ ರಜಾಕಾರರು ನಿಜಾಮರಾಜ್ಯದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಪ್ರಾರಂಭಿಸಿತು ಮತ್ತು ಸಾಮಾನ್ಯಜನರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಅನೇಕ ದೌರ್ಜನ್ಯಗಳನ್ನು ಮಾಡಿತು. ಅನೇಕ ಅಮಾಯಕಜನರನ್ನುಕ್ರೂರವಾಗಿಕೊಂದಿತು, ವಿಶೇ?ವಾಗಿ ಮಹಾಗಾಂವ್ ಮತ್ತುಗೋರ್ಟಾ ಗ್ರಾಮಗಳಲ್ಲಿ. ಗೋರ್ಟಾಗ್ರಾಮದಲ್ಲಿ ಮನೆಯಲ್ಲಿ ಸೇರಿದ್ದ ಸುಮಾರು ೨೦೦ ಸ್ವಾತಂತ್ರ್ಯ ಹೋರಾಟಗಾರರನ್ನುರಜಾಕಾರುಕ್ರೂರವಾಗಿಕೊಂದರು. ಇದನ್ನುಕರ್ನಾಟಕದಜಲಿಯಾನ ವಾಲಭಾಗಎಂದುಕರೆಯಲಾಗುತ್ತದೆ.

ಈ ಅಮಾನವೀಯ ಕ್ರೌರ್ಯಗಳನ್ನು ನಿಲ್ಲಿಸಲು ಮತ್ತು ಹೈದರಾಬಾದಅನ್ನು ಭಾರತೀಯಒಕ್ಕೂಟಕ್ಕೆ ಸಂಯೋಜಿಸಲು ಸರ್ದಾರ್ ಪಟೇಲ್ರು ಮಿಲಿಟರಿಕ್ರಮ ಕೈಗೊಳ್ಳಲು ಬಯಸಿದ್ದರು. ಆದರೆ ಪ್ರಧಾನಿ ನೆಹರು ಮತ್ತುಗವರ್ನರ್‌ಜನರಲ್ ಮೌಂಟ್ ಬ್ಯಾಟನ್‌ಅವರಿಗೆ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳಲು ಇ?ವಿರಲಿಲ್ಲ, ಏಕೆಂದರೆಅವರುಜಾಗತಿಕ ಮಟ್ಟದಲ್ಲಿ ಭಾರತದಘನತೆಯಬಗ್ಗೆಯೋಚಿಸುತ್ತಿದ್ದರು. ಆದಾಗ್ಯೂ ಸರ್ದಾರ್ ಪಟೇಲ್ ಹೈದರಾಬಾದನ್ನು ಭಾರತೀಯಒಕ್ಕೂಟದೊಂದಿಗೆ ಸಂಯೋಜಿಸುವ ದಿಟ್ಟನಿರ್ಧಾರವನ್ನುತೆಗೆದುಕೊಂಡರು ಮತ್ತು ಪೋಲಿಸ್ ಕ್ರಮ ’ಆಪರೇ?ನ್ ಪೋಲೋ’ ಗೆ ಆದೇಶಿಸಿದರು.

ಇಲ್ಲಿಉಲ್ಲೇಖಿಸಬೇಕಾದಎರಡು ಸ್ಥಳಗಳು ಬಹಳ ಮುಖ್ಯವಾಗಿದ್ದುಕುರಿಕೋಟಾ ಮತ್ತು ನಳದುರ್ಗಾ ಸೇತುವೆಗಳು. ಭಾರತೀಯ ಸೇನೆಯು ನಿಜಾಮರಾಜ್ಯಕ್ಕೆ ಪ್ರವೇಶಿಸುವುದನ್ನು ತಡೆಯಲುರಜಾಕಾರರು ಈ ಎರಡು ಸೇತುವೆಗಳನ್ನು ನಾಶಮಾಡಲು ಬಯಸಿದ್ದರು. ಆದಾಗ್ಯೂ ಮಹಾಗಾಂವ್ ಮತ್ತು ನಾಂದೇಡ್‌ನ ಸ್ವಾತಂತ್ರ್ಯ ಹೋರಾಟಗಾರರು ಈ ಎರಡು ಸೇತುವೆಗಳನ್ನು ರಕ್ಷಿಸಲು ಮತ್ತು ಭಾರತೀಯ ಸೇನೆಗೆ ಹೈದರಾಬಾದ್‌ತಲುಪಲು ಸಹಾಯ ಮಾಡಿದರು. ಈ ಚಳವಳಿಯಲ್ಲಿ ಸುಮಾರು ೨ ಲಕ್ಷ ನಾಗರಿಕರು ಮತ್ತು ೭೦೦ ರಜಾಕಾರರುಕೊಲ್ಲಲ್ಪಟ್ಟರು. ಜನರಲ್‌ಚೌಧರಿಯವರ ನೇತೃತ್ವದಲ್ಲಿ ೧೯೪೮ ಸೆಪ್ಟೆಂಬರ್ ೧೩ ರಿಂದ ೧೭ ರವರೆಗೆಕಾರ್ಯಾಚರಣೆ ನಡೆಯಿತು ಮತ್ತುಅಂತಿಮವಾಗಿ ನಿಜಾಮ್ ಶರಣಾದರು ಮತ್ತು ಭಾರತೀಯಒಕ್ಕೂಟಕ್ಕೆ ಸೇರಲುಒಪ್ಪಿಕೊಂಡರುಎಂದು ಪ್ರೊ. ಚನ್ನವೀರ್ ಹೇಳಿದರು.

ವಿಮೋಚನೆಯಿಂದಆಚರೆಣೆಯೆಡೆಗೆಕುರಿತು ಮಾತನಾಡುತ್ತ ಪ್ರೊ. ಚನ್ನವೀರ್‌ಅವರು ಹೀಗೆ ಹೇಳಿದರು ಎರಡು ವ?ಗಳ ಹಿಂದೆ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್‌ಯಡಿಯೂರಪ್ಪಅವರು ಹೈದರಾಬಾದಕರ್ನಾಟಕ ವಿಮೋಚನಾ ದಿನವನ್ನುಕಲ್ಯಾಣಕರ್ನಾಟಕಉತ್ಸವ ದಿನವನ್ನಾಗಿಆಚರಿಸಬೇಕೆಂದು ಘೋಷಿಸಿದ್ದರು. ಏಕೆಂದರೆಇದು ೧೨ ನೇ ಶತಮಾನದ ಮಹಾನ್ ಸಂತ ಮತ್ತು ಸಮಾಜ ಸುಧಾರಕರಾದ ವಿಶ್ವಗುರು ಬಸವಣ್ಣನವರಕರ್ಮಭೂಮಿ. ಸಾಮಾಜಿಕಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿ?ಯಗಳ ಕುರಿತುಚರ್ಚಿಸಲು ಮತ್ತು ಅವುಗಳಿಗೆ ಪ್ರಜಾಪ್ರಭುತ್ವರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲು ಅನುಭವ ಮಂಟಪ ಎಂಬ ಆಧ್ಯಾತ್ಮಿಕ ಸಂಸತ್ತನ್ನು ಸ್ಥಾಪಿಸಿದರು.

ಅನುಭವ ಮಂಟಪವುಎಲ್ಲಾಜಾತಿ, ಮತ, ವರ್ಗ ಮತ್ತು ಲಿಂಗಕ್ಕೆ ಮುಕ್ತವಾಗಿತ್ತು. ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಆಧರಿಸಿತ್ತು ಹಾಗಾಗಿ ಲಕ್ಷಾಂತರ ಶರಣರುದೇಶದ ವಿವಿಧ ಭಾಗಗಳಿಂದ ಬಂದರು. ಅವರುತಮ್ಮ ವಿಚಾರಗಳನ್ನು ವಚನಗಳ ರೂಪದಲ್ಲಿ ಬರೆದಿದ್ದಾರೆ. ಇವು ಕ್ರಾಂತಿಕಾರಿ, ತರ್ಕಬದ್ಧ, ತಾರ್ಕಿಕ ಮತ್ತು ಪ್ರಾಯೋಗಿಕವಾಗಿವೆ. ಏಕೆಂದರೆ ಶರಣರುತಾವು ಹೇಳಿದ ರೀತಿಯಲ್ಲಿ ಬದುಕಿದರು. ಆದುದರಿಂದ ಈ ದಿನವನ್ನುಕಲ್ಯಾಣಕರ್ನಾಟಕಉತ್ಸವ ದಿನವಾಗಿ ಆಚರಿಸಲು ಬಹಳ ಮಹತ್ವದ್ದಾಗಿದೆ ಮತ್ತು ಸೂಕ್ತವಾಗಿದೆ.

ಇನ್ನೋರ್ವಅತಿಥಿ ಪ್ರೊ. ಎಂ ವಿ ಅಳಗವಾಡಿ ಕೂಡ ಈ ಸಂದರ್ಭದಲ್ಲಿ ಮಾತನಾಡುತ್ತಾ, “ಸ್ವಾತಂತ್ರ್ಯ ಚಳುವಳಿಗಾಗಿ ಈ ಪ್ರದೇಶದಜನರ ಸಂಕ?ಗಳು ಮತ್ತು ತ್ಯಾಗಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಆಪರೇ?ನ್ ಪೋಲೊ ಮಾಡದಿದ್ದರೆ ಮತ್ತು ಹೈದರಾಬಾದನ್ನು ಭಾರತೀಯಒಕ್ಕೂಟದೊಂದಿಗೆ ಸಂಯೋಜಿಸದಿದ್ದರೆಅದು ಹೊಟ್ಟೆಯಲ್ಲಿ ಹುಣ್ಣುಆಗುತ್ತಿತ್ತು. ಆದ್ದರಿಂದ ಸರ್ದಾರ್ ಪಟೇಲ್‌ತುಂಬಾಧೈರ್ಯಶಾಲಿ ಮತ್ತು ದೂರದೃಷ್ಟಿಯುಳ್ಳವರಾಗಿದ್ದು, ಈ ಸಂದರ್ಭದಲ್ಲಿ ನಾವು ಈ ಪ್ರದೇಶದಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಜೊತೆಗೆಅವರನ್ನು ಸ್ಮರಿಸಬೇಕು ’ ಎಂದು ಹೇಳಿದರು.

ಗೌರವಾನ್ವಿತ ಕುಲಪತಿ ಪ್ರೊ.ಬಿ.ಸತ್ಯನಾರಾಯಣ ಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡಿ ನಾನು ಕೂಡ ನಿಜಾಮ ಆಳಿದ ಪ್ರದೇಶದಿಂದ ಬಂದವನುಎಂದು ಹೇಳಿದರು. ಹೈದರಾಬಾದರಾಜ್ಯವುಆಂಧ್ರ ಪ್ರದೇಶದ ೯ ಜಿಲ್ಲೆಗಳನ್ನು (ಪ್ರಸ್ತುತತೆಲಂಗಾಣ), ಮಹಾರಾಷ್ಟ್ರದ ೫ ಜಿಲ್ಲೆಗಳನ್ನು ಮತ್ತುಕರ್ನಾಟಕದ ೩ ಜಿಲ್ಲೆಗಳನ್ನು ಹೊಂದಿತ್ತು. ಮೀರ್‌ಒಸ್ಮಾನ್ ಅಲಿ ಖಾನ್, ಸ್ವಲ್ಪ ಪ್ರಗತಿಪರನಾಗಿದ್ದನು ಮತ್ತು ೧೮೮೯ ರಲ್ಲಿ ನಿಜಾಮ್‌ಕಾಲೇಜು ಮತ್ತು ೧೯೧೭ ರಲ್ಲಿಉಸ್ಮಾನಿಯಾ ವಿಶ್ವವಿದ್ಯಾಲಯವನ್ನುಆರಂಭಿಸಿದನು ಆದರೆ ಕಲಿಕೆ ಉರ್ದು ಮಾಧ್ಯಮವಾಗಿತ್ತು. ಆದರೆ ನಿಜಾಮನುಅಭಿವೃದ್ಧಿಗೆ ಹೆಚ್ಚಿನ ಗಮನ ಮತ್ತು ಪ್ರಾಮುಖ್ಯತೆಯನ್ನು ನೀಡಲಿಲ್ಲ. ಆಧುನಿಕ ಶಿಕ್ಷಣ, ಆರೋಗ್ಯ ಸೌಲಭ್ಯಗಳು, ಮತ್ತು ಭೌತಿಕ ಮೂಲಸೌಕರ್ಯಗಳಿಂದಾಗಿ ಬ್ರಿಟಿ? ಪ್ರದೇಶಗಳು ಹೆಚ್ಚು ಪ್ರಗತಿಪರವಾಗಿದ್ದವು.

ಅಂದೂ ಭೂಮಾಲೀಕರುರಾಜ್ಯವನ್ನುಅಕ್ಷರಶಃ ಆಳುತ್ತಿದ್ದರು ಮತ್ತುರೈತರರಕ್ತವನ್ನು ಹೀರುತ್ತಿದ್ದರು. ಅವರುಜನರಿಗೆ ಕಿರುಕುಳ ನೀಡುತ್ತಿದ್ದರು ಮತ್ತುಆದಾಯಕ್ಕಾಗಿರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು, ಏಕೆಂದರೆಕಂದಾಯವುರಾಜ್ಯದಆದಾಯದ ಏಕೈಕ ಮೂಲವಾಗಿತ್ತು. ಜನರುಅಕ್ಷರಶಃಗುಲಾಮರಂತೆ ಬದುಕುತ್ತಿದ್ದರು. ಬರಗಾಲದಲ್ಲಿ ಈ ಪರಿಸ್ಥಿತಿ ಇನ್ನೂಕೆಟ್ಟದಾಗಿತ್ತುಏಕೆಂದರೆಜನರುತೆರಿಗೆ ಪಾವತಿಸಲು ಸಾಧ್ಯವಾಗುತ್ತಿರಲಿಲ್ಲ. ನಿಜಾಮನ ಈ ಕ್ರೂರ ಆಡಳಿತದ ವಿರುದ್ಧ ಪ್ರತಿಭಟಿಸಲು ಮತ್ತು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಸ್ವಾಮಿರಾಮಂದತೀರ್ಥ್, ಹನುಮತರಾವ್, ತರ್ಜಿನ್‌ಖಾನ್, ಮಗ್ದುಮ್ ಮೊಯೆನ್ ಮತ್ತು ಹಲವಾರು ನಾಯಕರು ನಿಜಾಮರಾಜ್ಯದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಆರಂಭಿಸಿದರು. ಖಾಸಿಂ ರಜ್ವಿ ಸಂಘಟಿಸಿದ ಖಾಸಗಿ ಸೇನೆ ರಜಾಕಾರು ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು ಮತ್ತು ಮುಗ್ಧ ಸಾಮಾನ್ಯಜನರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಹಲವಾರು ದೌರ್ಜನ್ಯಗಳನ್ನು ನಡೆಸಿದರು.

ಇದು ಹಿಂದೂ ಮುಸ್ಲಿಂ ಹೋರಾಟ ವಾಗಿರಲಿಲ್ಲ, ಆಡಳಿತಗಾರರು ಮತ್ತು ಸಾಮಾನ್ಯಜನರ ನಡುವಿನ ಹೋರಾಟವಾಗಿತ್ತು. ನಮಗೆಲ್ಲರಿಗೂ ತಿಳಿದಿರುವಂತೆ ಈ ಪ್ರದೇಶವು ೧೭ ನೇ ಸೆಪ್ಟೆಂಬರ್ ೧೯೪೮ ರಂದುಅಂದರೆ ಭಾರತಕ್ಕೆ ಸ್ವಾತಂತ್ರ್ಯದೊರೆತಒಂದು ವ?ಕ್ಕಿಂತಲೂ ಹೆಚ್ಚು ಸಮಯದ ನಂತರ ಸ್ವಾತಂತ್ರ್ಯ ಪಡೆಯಿತು. ಐತಿಹಾಸಿಕ ಕಾರಣಗಳಿಗಾಗಿ ಇಂದುತೆಲಂಗಾಣ, ಮರಾಠವಾಡ ಮತ್ತು ಹೈದರಾಬಾದಕರ್ನಾಟಕ (ಕಲ್ಯಾಣಕರ್ನಾಟಕ) ಪ್ರದೇಶವು ಬ್ರಿಟಿ?ರು ಮತ್ತು ಪ್ರಗತಿಪರರಾಜರು ಆಳಿದ ಭಾಗಗಳಿಗಿಂತ ಹಿಂದುಳಿದಿದೆ.

ಈ ಸಂದರ್ಭದಲ್ಲಿ ಹಣಕಾಸುಅಧಿಕಾರಿ ಶ್ರೀ ಶಿವಾನಂದಮ, ಡೀನ್ರು, ಮುಖ್ಯಸ್ಥರು ಮತ್ತು ಶಿಕ್ಷಕರು ಮತ್ತುಇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತುಡಾ.ರವಿಕಿರಣ್ ನಾಕೋಡ್ ಸಂಗೀತಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ.ಅಪ್ಪುಗೆರೆ ಸೋಮಶೇಖರ್ ಮತ್ತುಡಾ.ಸುರಾಜ್‌ಕಾರ್ಯಕ್ರಮ ನಿರೂಪಿಸಿದರು, ಕುಲ ಸಚಿವ ಪ್ರೊ. ಬಿ ಆರ್‌ಕೆರೂರ್ ವಂದನಾರ್ಪಣೆ ಮಾಡಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago