ಕಲಬುರಗಿ: ಕರ್ನಾಟಕ ಸ್ಟ್ಯಾಂಪು ಶುಲ್ಕಗಳ (ಡ್ಯೂಟಿ) ತಿದ್ದುಪಡಿ ವಿಧೇಯಕದಲ್ಲಿ ನಮೂದಾಗಿರುವಂತೆ ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಪ್ ಡ್ಯೂಟಿಯನ್ನು ಅಪಾರ್ಟ್‍ಮೆಂಟ್‍ಗಳ ಮೊದಲ ನೋಂದಣಿಗೆ ಮಾತ್ರ ಎಂದು ಸೀಮಿತಗೊಳಿಸದೆ ಇದನ್ನು ಅಪಾರ್ಟ್‍ವೆïಂ, ತರಹೇವಾರಿ ಅಳತೆಯ ನಿವೇಶನಗಳ ಎಲ್ಲಾ ಹಂತದ ಮಾರಾಟಗಳಲ್ಲಿ ಅನ್ವಯಿಸಿದಲ್ಲಿ ರಾಜ್ಯಾದ್ಯಂತ ಇರುವ ಬಡವರು, ಮದ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಸರಕಾರವನ್ನು ಆಗ್ರಹಿಸಿ ಗಮನ ಸೆಳೆದಿದ್ದಾರೆ.
ವಿದಾನ ಸಭೆಯಲ್ಲಿ ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ವಿಧೇಯಕದ ಮಹತ್ವದ ಅಂಶಗಳನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಿದಾಗ ಮಾತನಾಡಿರುವ ಡಾ. ಅಜಯ್ ಸಿಂಗ್ ಸ್ಟ್ಯಾಂಪ್ ಡ್ಯೂಟಿ ವಿಧೇಯಕ ನಾವು ಸ್ವಾಗತಿಸುತ್ತೇವೆ. ಆದರೆ ಇಲ್ಲಿರುವ ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಟಪ್ ಡ್ಯೂಟಿ ಅಪಾರ್ಟಮೆಂಟ್ಗಳ ಮೊದಲ ಮಾರಾಟಕ್ಕಷ್ಟೇ ಸೀಮಿತಗೊಳಿಸದೆ ಅಪಾರ್ಟ್‍ಮೆಂಟ್‍ಗಳೂ ಸೇರಿದಂತೆ ವಿವಿಧ ಅಳತೆಯ ನಿವೇಶನಗಳಿಗೂ ಎಲ್ಲಾ ಹಂತದ ಮಾರಾಟದಲ್ಲಿಯೂ ಅನ್ವಯಿಸಬೇಕು. ಅಂದಾಗ ಹೆಚ್ಚಿನ ಜನತೆಗೆ ಇದರಿಂದ ಅನುಕೂಲವಾಗುತ್ತದೆ. ಬರೀ ಅಪಾರ್ಟ್‍ಮೆಂಟ್ ಗೆ ಮಾತ್ರ ಈ ವಿಚಾರ ಅನ್ವಯವಾದಲ್ಲಿ ಅದು ಬೆಂಗಳೂರಿನ ರಿಯಲ್ ಈಸ್ಟೇಟ್ ಡೇವಲಪರ್‍ಗಳಿಗೆ ಮಾತ್ರ ಅನುಕೂಲವಾಗಲಿದೆ, ರಾಜ್ಯದಲ್ಲಿನ ಗ್ರಾಮಾಂತರ ಭಾಗದಲ್ಲಿರುವ ಜನತೆಗೆ ಇದರಿಂದ ನಯಾಪೈಸೆ ಲಾಭವಾಗದು ಎಂದು ಕಂದಾಯ ಸಚಿವರು ಹಾಗೂ ಸಭಾಧ್ಯಕ್ಷರ ಗಮನ ಸೆಳೆದರು.
ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಪ್ ಡ್ಯೂಟಿಯ ತಿದ್ದುಪಡಿ ಕೇವಲ ಮೊದಲ ಹಂತದ ಮಾರಾಟಕ್ಕೆ, ಅದೂ ಅಪಾರ್ಟ್‍ಮೆಂಟ್‍ಗೆ ಮಾತ್ರ ಸೀಮಿತ ಮಾಡದೆ ಎಲ್ಲಾ ಹಂತದ ಮಾರಾಟಗಳಿಗೆ ಹಾಗೂ ನಿವೇಶನಗಳಿಗೂ ಇದು ಅನ್ವಯಿಸಿದರೆ ಹೆಚ್ಚಿನ ಜನತೆಗೆ ಲಾಭವಾಗುತ್ತದೆ, ಇದರಿಂದ ರಿಯಲ್ ಈಸ್ಟೆಟ್ ಅಭಿವೃದ್ಧಿ ಹೊಂದಲಿದೆ, ಬಡವರಿಗೆ ಈ ತಿದ್ದುಪಡಿ ಲಾಭ ತಲುಪತ್ತದೆ.
ಬಡವರು, ಮಧ್ಯಮ ವರ್ಗದವರು ಒಂದು ನಿವೇಶನ, ಅಪಾರ್ಟ್‍ಮೆಂಟ್ ಖರೀದಿಸಿರುತ್ತಾರೆ, ನಂತರ ಅದನ್ನು ಮಕ್ಕಳ ಮುವೆ, ಶಿಕ್ಷಣ ಇತರೆ ಸಂದಭರ್Àದಲ್ಲಿ ಮಾರಲು ಮುಂದಾಗುತ್ತಾರೆ. ಅವರ ಕಷ್ಟ ಕಾಲದಲ್ಲಿ ಇಂತಹ ಆಸ್ತಿ ಮಾರಾಟಕ್ಕೆ ಮುಂದಾದಾಗ ಅವರ 2 ನೇ, 3 ನೇ ಮಾರಾಟಗಳಿಗೂ ಸದರಿ ತಿದ್ದುಪಡಿಯಾಗುತ್ತಿರುವ ಸ್ಟಾಂಪ್ ಡ್ಯೂಟಿ ನಿಯಮ ಅನ್ವಯವಾದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಡಾ. ಅಜಯ್ ಸಿಂಗ್ ವಿಷಯ ಮಂಡಿಸಿದರು.
ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಮಾತಿಗ ಸ್ಪಂದಿಸಿದ ಕಂದಾಯ ಸಚಿವ ಅಶೋಕ ಮೊದಲ ಹಂತದ ಮಾರಾಟಕ್ಕೆ ಸದರಿ ತಿದ್ದುಪಡಿ ಅನ್ವಯವಾಗಲಿದೆ, ಹಾಗಂತ ಇತರರಿಗೆ ಇದರಿಂದ ತೊಂದರೆಯಾಗದು ಎಂದು ಸಮಜಾಯಿಷಿ ನೀಡಿದರೆ, ಸದನದಲ್ಲಿ ಇದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಯವರೂ ಮಾತನಾಡುತ್ತ ರಿಯಲ್ ಈಸ್ಟೇಟ್ ಹಸಿರು ಚಿಗುರಲಿ ಎಂಬ ಉz್ದÉೀಶದಿಂದ ಈ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆಂದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…