ಬಿಸಿ ಬಿಸಿ ಸುದ್ದಿ

ಅಪ್ಪ ಮಗನ ಪುಸ್ತಕ ಬಿಡುಗಡೆಗೆ ಬಂದವರು ಏನಂದರು ಗೊತ್ತಾ?

ಕಲಬುರಗಿ: ಈ ಜಗತ್ತಿನಲ್ಲಿ ಪುಸ್ತಕಗಳು ಮನುಕುಲದ ವಿಕಾಸ, ಬೆಳವಣಿಗೆ ಮಾಡಿವೆ.ಅಂತರಂಗವನ್ನು ಅರಳಿಸುತ್ತವೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

ರಾಷ್ಟ್ರಕೂಟ ಪುಸ್ತಕ ಮನೆ ಹಾಗೂ ಸಂಸ್ಕೃತಿ ಪ್ರಕಾಶನ, ಕನ್ನಡ ಸಾಹಿತ್ಯ ವಿಭಾಗ ವಿಜಿ ಮಹಿಳಾ ಕಾಲೇಜು, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋದಲ್ಲಿ ನಗರದ ವಿ.ಜಿ. ಮಹಿಳಾ ಕಾಲೇಜಿನಲ್ಲಿ ಇಂದು ಆಯೋಜಿಸಿದ್ದ ಪತ್ರಕರ್ತ- ಲೇಖಕ ಮಹಿಪಾಲರಡ್ಡಿ ಮುನ್ನೂರ, ಅವರ ಪುತ್ರ ವಿಜಯಭಾಸ್ಕರರೆಡ್ಡಿ ಬರೆದ ಮಾಧ್ಮಮ ಮುಖಿ, ನೆನಪಿನ ಪಡಸಾಲೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲಬುರಗಿ ಸಾಂಸ್ಕೃತಿಕ ವಾಗಿ ತುಂಬಾ ಶ್ರೀಮಂತವಾಗಿದೆ ಎಂದು ಹೇಳಿದರು.

ಎರಡೂ ಕೃತಿಗಳನ್ನು ಕತೆಗಾರ್ತಿ ಸಂಧ್ಯಾ ಹೊನಗುಂಟಿಕರ ಪರಿಚಯಿಸಿದರು. ವಿಜಯಭಾಸ್ಕರರೆಡ್ಡಿ ಕವಿತೆಗಳು
ಮುಗ್ದ, ಸಹಜ, ಸರಳ ಕವಿತೆಗಳಾಗಿದ್ದು, ಕ್ಯಾಚಿ ಟೈಟಲ್ ಕಾವ್ಯಗಳಿವೆ. ಒಳ್ಳೆಯ ಪ್ರತಿಮೆಗಳನ್ನು ಉತ್ತಮವಾಗಿ ಬಳಸಿದ್ದಾರೆ ಎಂದರು.

ಮಾಧ್ಯಮ ಕ್ಷೇತ್ರದಲ್ಲಿನ ಅನುಭವಗಳನ್ನು ಪೇರಿಸಿ ಮಾಧ್ಯಮದ ವಿವಿಧ ಮುಖಗಳನ್ನು ಮಹಿಪಾಲ ಅವರು ಅನಾವರಣಗೊಳಿಸಿದ್ದಾರೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಜಿ.ಎನ್. ಮೋಹನ ಮಾತನಾಡಿ, ಅಪ್ಪ ಮಕ್ಕಳ ಕ್ರಿಯಾಶೀಲತೆಗೆ ಈ ಪುಸ್ತಗಳೆ ಸಾಕ್ಷಿಯಾಗಿ ಎಂದು ಹೇಳಿದರು.
ಹಿರಿಯರಾದ ಚಿನ್ನಪ್ಪರೆಡ್ಡಿ ತುಳೇರ, ಶರಣಬಸವ ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ಲಿಂಗರಾಜ ಶಾಸ್ತ್ರಿ ಅತಿಥಿಗಳಾಗಿದ್ದರು.

ಕಾಲೇಜನ ಪ್ರಾಚಾರ್ಯ ಡಾ. ಈಶ್ವರಯ್ಯ ಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಜೋಶಿ ನಿರೂಪಿಸಿದರು. ಸಿದ್ಧಪ್ರಸಾದರೆಡ್ಡಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಚ್. ನಿರಗುಡಿ ವಂದಿಸಿದರು.

ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ಮದನಾ, ಎ.ಕೆ. ರಾಮೇಶ್ವರ, ಸ್ವಾಮಿರಾವ ಕುಲಕರ್ಣಿ, ಪಿ.ಎಂ. ಮಣ್ಣೂರ, ಸುರೇಶ ಬಡಿಗೇರ, ಸಿದ್ಧರಾಮ ಹೊನ್ಕಲ್, ಎಸ್.ಎಸ್. ಪಾಟೀಲ, ಡಾ.ಲಕ್ಷ್ಮೀ ಶಂಕರ ಜೋಶಿ, ಡಾ. ಸುಜಾತಾ ಜಂಗಮಶೆಟ್ಟಿ, ಎಲ್.ಬಿ.ಕೆ. ಆಲ್ದಾಳ, ರತ್ನಕಲಾ ಮಹಿಪಾಲರೆಡ್ಡಿ, ಚಾಮರಾಜ ದೊಡ್ಡಮನಿ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago