ಶಹಾಬಾದ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತೀರಸ್ಕರಿಸಬೇಕೆಂದು ಆಗ್ರಹಿಸಿ ಶುಕ್ರವಾರ ಶ್ರೀ ಸಿದ್ಧರಾಮೇಶ್ವರ ವಡ್ಡರ ಅಭಿವೃದ್ಧಿ ಸಂಘ ಮತ್ತು ಅಖಿಲ ಭಾರತ ಬಂಜಾರಾ ಸಮಾಜ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಭೋವಿ, ಬಂಜಾರ, ಕೊರಚ, ಕೊರಮ, ಅಲೆಮಾರಿ, ಅರೆ ಅಲೆಮಾರಿ, ಸುಡುಗಾಡು ಸಿದ್ಧ, ಇನ್ನಿತರೆ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿದರು.
ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕು. ಸೋರಿಕೆಯಾಗಿರುವ ಈ ವರದಿ ಅಂಶಗಳನ್ನು ಗಮನಿಸಿದಾಗ ಇದಕ್ಕೆ ಪಾವಿತ್ರ್ಯತೆ ಇಲ್ಲ ಅನ್ನಿಸುತ್ತದೆ. ಆಯೋಗ ತನ್ನ ಉದ್ದೇಶಕ್ಕೆ ವಿರುದ್ಧದ ಶಿಫಾರಸ್ಸುಗಳನ್ನು ಮಾಡಿದೆ. ಅಸಂವಿಧಾನಿಕ ಅಂಶಗಳು ಮತ್ತು ಅವಾಸ್ತವಿಕ ಅಂಕಿ ಅಂಶಗಳು ಈ ವರದಿಯಲ್ಲಿವೆ. ಹೀಗಾಗಿ ಈ ವರದಿ ಈಗ ಅಪ್ರಸ್ತುತ. ಇದು ಸ್ವೀಕಾರಕ್ಕೆ ಯೋಗ್ಯವಲ್ಲ ಎಂದು ಆಗ್ರಹಿಸಿದರು. ಇನ್ನು ಪರಿಶಿ? ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇ? ಪ್ರಚೋದನೆ ಒತ್ತಲು ಹೊರಟಿರುವ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.
ಭೋವಿ ವಡ್ಡರ ಸಮಾಜದ ಉಪಾಧ್ಯಕ್ಷ ಅನಿಲ ಬೋರಗಾಂವಕರ,ಪ್ರಧಾನ ಕಾರ್ಯದರ್ಶಿ ದೇವದಾಸ ಜಾಧವ, ಲಂಬಾಣಿ ಸಮಾಜದ ಅಧ್ಯಕ್ಷ ದೀಲಿಪ ನಾಯಕ,ಪ್ರಕಾಶ ರಾಠೋಡ, ರಾಮು ಕುಸಾಳೆ,ಕನಕಪ್ಪ ದಂಡಗೂಲಕರ, ಅಂಬಣ್ಣ ಕುನ್ನೂರಕರ,ಶಂಕರ ಕುಸಾಳೆ,ಸಿದ್ರಾಮ ಕುಸಾಳೆ,ಸಂಜಯ ವಿಟ್ಕರ,ರಾಮು ನಿಡಗುಂದಿ,ದೀಪಕ ಚೌಧರಿ,ಸಿದ್ರಾಮ ಗುಂಜಳಕರ,ರಾಕೇಶ ಪವರ,ನಗರಸಭೆ ಸದಸ್ಯರಾದ ಪಾರ್ವತಿ ಪವರ,ರವಿ ಮಿಸ್ತ್ರಿ,ವೆಂಕಟೇಶ ಪವರ,ಶ್ರೀನಿವಾಸ ನೇದಲಗಿ,ವೆಂಕಟೇಶ ಮೇಲಗಿರಿ,ಅರುಣ ದೇವಕರ,ತಿಪ್ಪಯ್ಯ ಕಣಸೂರ,ಆಂಜನೇಯ ಕುಸಾಳೆ,ಗಿರಿಸ್ವಾಮಿ ಕುಸಾಳೆ, ಹಣಮಂತ ,ಅಂಬಾದಾಸ ಗೂರಿಜಿ,ಶ್ರೀನಿವಾಸ ದೇವಕರ,ದತ್ತು ಭಂಕುರ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…