ಬಿಸಿ ಬಿಸಿ ಸುದ್ದಿ

ಗದಗ : 6 ವರ್ಷಗಳಿಂದ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಿಲ್ಲವೂ..!

  • # ಕೆ.ಶಿವು.ಲಕ್ಕಣ್ಣವರ

ಗದಗ: ಗದಗದ ಒಂದು ಪ್ರೌಢ ಶಾಲೆಯಲ್ಲಿ ಆರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಗೋಳಾಟ ಪಡುತ್ತಿದದಾರೆ. ಹೀಗೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ವಿಧ್ಯಾರ್ಥಿಗಳು, ಪೋಷಕರು ಸಿಟ್ಟಿಗೆದ್ದಿದ್ದಾರೆ.

ಕಳೆದ 6 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಮಕ್ಕಳು ಪರದಾಟ ಪಡುತ್ತಿರುವ ಪರಿಸ್ಥಿತಿ ಗದಗದಲ್ಲಿ ಇರುವ ಬಗ್ಗೆ ವಿಚಾರ ಬಯಲಾಗಿದೆ.

ಪ್ರೌಢಶಾಲೆಯಲ್ಲಿ ಇಂಗ್ಲಿಷ್​ ಶಿಕ್ಷಕರಿಲ್ಲದ್ದಕ್ಕೆ ಮಕ್ಕಳು ಹಾಗೂ ಪೋಷಕರು ಪರದಾಟ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ್​​ ಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಇದ್ದ ಶಿಕ್ಷಕಿ ಪಲ್ಲವಿಯವರನ್ನೇ ನೇಮಿಸುವಂತೆ ಆಗ್ರಹಿಸಿದ್ದಾರೆ. ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗುತ್ತಿದ್ದಾರೆ.

ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಒತ್ತಾಯ ಮಾಡಿದ್ದಾರೆ. ಬಿಇಒರನ್ನು ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಲಕ್ಷ ಲಕ್ಷ ಸಂಬಳ ತಗೊಂಡು ನಿಮ್ಮ ಮಕ್ಕಳನ್ನು ಖಾಸಗಿ ಶಾಲೆ ಹಾಕ್ತೀರಿ ಅಂತ ಕಿಡಿ ಕಾರಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗದಗ ಡಿಡಿಪಿಐ ಜಿ.ಎಮ್.ಬಸವಲಿಂಗಪ್ಪ ವಿರುದ್ಧ ಮಕ್ಕಳು ಧಿಕ್ಕಾರ ಕೂಗಿದ್ದಾರೆ. ಡಿಡಿಪಿಐ ಮತ್ತು ಬಿಇಓಗೆ ಮಕ್ಕಳ ಎದುರಲ್ಲೇ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ರಮವಾಗಿ ಇಂಗ್ಲಿಷ್ ಶಿಕ್ಷಕಿಯನ್ನು ಬೇರೆ ಜಿಲ್ಲೆಗೆ ನಿಯೋಜನೆ ಆರೋಪ ವ್ಯಕ್ತವಾಗಿದೆ. ಆರು ವರ್ಷದ ಹಿಂದೆಯೇ ಇದ್ದ ಇಂಗ್ಲಿಷ್ ಶಿಕ್ಷಕಿಯನ್ನು ನಿಯಮ ಉಲ್ಲಂಘಿಸಿ ಡೆಪ್ಟೇಷನ್ ಮೇಲೆ ಬೇರೆ ಶಾಲೆಗೆ ಅಧಿಕಾರಿಗಳು ಕಳಿಹಿಸಿದ್ದಾರೆ. ಆರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಗೋಳಾಟ ಪಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ವಿಧ್ಯಾರ್ಥಿಗಳು, ಪೋಷಕರು ಸಿಟ್ಟಿಗೆದ್ದಿದ್ದಾರೆ.

ಈ ಮೊದಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ಗೋಳಾಟ ಕಂಡುಬಂದಿತ್ತು. ಹಾಸ್ಟೆಲ್​​ನಲ್ಲಿ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿನಿಯರು ಪರದಾಟ ಪಡುತ್ತಿದ್ದರು. ಗದಗ ಜಿಲ್ಲೆಯ ರೋಣದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಟಾಯ್ಲೆಟ್​ನಲ್ಲೇ ಸ್ನಾನ ಮಾಡುವ ದುಸ್ಥಿತಿ ಎದುರಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿದ ಹಾಸ್ಟೆಲ್​ ಸಿಬ್ಬಂದಿ, ಕುರಿ ದೊಡ್ಡಿಯಂತೆ ಮಕ್ಕಳನ್ನು ತುಂಬಿದ್ದರು. ಅಧಿಕಾರಿಗಳ ಬಗ್ಗೆ ಈ ವಿಚಾರದಲ್ಲೂ ಅಸಮಾಧಾನ ಉಂಟಾಗಿತ್ತು. ಒಂದೇ ಹಾಲಿನಲ್ಲಿ 30-40 ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಕಾಟ್, ಬೆಡ್​ ಇಲ್ಲದೇ ನೆಲದ ಮೇಲೆ ಮಕ್ಕಳು ಮಲಗುತ್ತಿದ್ದರು. ಕಿಟ್​​ಗಳನ್ನು ನೀಡದೇ ಹಾಸ್ಟೆಲ್​ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿತ್ತು…!

ಈಗ ಗದಗದ ಕದಡಿಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲದ ಬಗೆಗೆ ಪರದಾಟ…

ಹೀಗಿರುವಾಗ ಎಲ್ಲಿಯವರೆಗೆ ಶಿಕ್ಷಣ ಇಲಾಖೆಯಲ್ಲಿ ಇಂತಹ ಪರದಾಟವಿರುತ್ತದೆ. ಅಲ್ಲದೇ ಇದೊಂದು ಜಿಲ್ಲೆಯ, ತಾಲ್ಲೂಕಿನ, ಗ್ರಾಮದ ಸಮಸ್ಯೆಯಲ್ಲ. ಬಹುತೇಕ ಬಹಳಷ್ಟು ಊರುಗಳ ಪರದಾಟ. ಒಟ್ಟಿನಲ್ಲಿ ಈ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವವರು ಯಾರೂ..?

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

6 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

6 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago