ಸುರಪುರ: ತಾಯಿ ತಿಮ್ಮಮ್ಮ ಮೆಮೊರೆಬಲ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಬಾದ್ಯಾಪುರ,ದೇವಿಕೆರಾ ಮತ್ತು ಅರಕೇರಾ (ಕೆ) ಗ್ರಾಮದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಯುವ ಮುಖಂಡ ಶಂಕರ ನಾಯಕ ಮಾತನಾಡಿ,ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಜನರ ಸೇವೆ ಮಾಡಿದ್ದಾರೆ.ಅಂತಹ ವಾರಿಯರ್ಸ್‌ಗಳನ್ನು ಇಂದು ತಾಯಿ ತಿಮ್ಮಮ್ಮ ಮೆಮೊರೆಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಲ್ಲದೆ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ಸ್ವತಃ ತಮಗೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದಾಗಲು ಜನರಿಗಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪ್ರತಿ ಗ್ರಾಮಗಳಿಗು ಭೇಟಿ ನೀಡಿ ಎಲ್ಲರಿಗೂ ಮಾಸ್ಕ್ ಧರಿಸುವಂತೆ,ಸ್ಯಾನಿಟೈಜರ್ ಬಳಸುವಂತೆ ಮತ್ತು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಜನರಿಗೆ ಕೈ ಮುಗಿದು ಕೇಳಿಕೊಂಡು ಜನರ ರಕ್ಷಣೆಗೆ ನಿಂತ ಜನ ನಾಯಕರಾಗಿದ್ದಾರೆ.ಅಂತಹ ಜನ ನಾಯಕರು ಇಂದು ಪ್ರತಿ ಗ್ರಾಮಗಳಲ್ಲಿ ಕೊರೊನಾ ನಿರ್ಮೂಲನೆಗಾಗಿ ಸೇವೆ ಮಾಡಿದ ಎಲ್ಲಾ ಸೇನಾನಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅಲ್ಲದೆ ಎಲ್ಲರು ಕಡ್ಡಾಯವಾಗಿ ಸಲಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರವಿರುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖಂಡ ನಾಯಕ ಬೈರಿಮಡ್ಡಿ ಮಾತನಾಡಿ,ಕೋವಿಡ್ ಸಂದರ್ಭದಲ್ಲಿ ಬಡ ಜನರಿಗಾಗಿ ರಾಜುಗೌಡ ಸೇವಾ ಸಮಿತಿಯಿಂದ ನಿರಂತರವಾಗಿ ಆಹಾರ ಮತ್ತು ನೀರು ವಿತರಣೆ,೨ ಲಕ್ಷ ಮಾಸ್ಕ್‌ಗಳ ವಿತರಣೆ ಮತ್ತು ಆಕ್ಸಿಜನ್ ಮಷಿನ್‌ಗಳ ವಿತರಣೆ ಮಾಡುವ ಮೂಲಕ ಎಲ್ಲರ ರಕ್ಷಣೆಯ ಕೆಲಸ ಮಾಡಿದ ಶಾಸಕರಾದ ರಾಜುಗೌಡ ಅವರಿಗೆ ಇಡೀ ಕ್ಷೇತ್ರದ ಜನತೆ ಎಂದಿಗೂ ಮರೆಯಬಾರದು ಎಂದರು.
ಪ್ರಾಸ್ತಾವಿಕವಾಗಿ ಲಕ್ಷ್ಮೀಕಾಂತ ದೇವರಗೋನಾಲ ಮಾತನಾಡಿ,ಆರೋಗ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಹಾಗು ಸಿಬ್ಬಂದಿಗಳು ಜೊತೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗು ಸ್ಥಳಿಯ ಸಂಸ್ಥೆಗಳ ಸ್ವಚ್ಛತಾಕರ್ಮಿಗಳ ನಿರಂತರ ಶ್ರಮದಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಅತೀ ಕಡಿಮೆ ಸಾವಿನ ಪ್ರಕರಣಗಳು ನಮ್ಮ ತಾಲೂಕಿನಲ್ಲಿ ಕಂಡುಬಂದಿದೆ.ಆದ್ದರಿಂದ ಈ ಎಲ್ಲಾ ವಾರಿಯರ್ಸ್‌ಗಳಿಗೆ ಪ್ರಣಾಮ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜನಸಂಘ ಸಂಸ್ಥಾಪಕರಾದ ದೀನ ದಯಾಳ್ ಉಪಾದ್ಯಯರ ಜಯಂತಿ ಆಚರಣೆ ಹಾಗು ಜಗತ್ತಿನಲ್ಲಿಯೇ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವ ಕೆಲಸ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಶಂಸನಾ ಪತ್ರವನ್ನು ಕಳುಹಿಸಲಾಯಿತು ಹಾಗು ವಾರಿಂiiರ್ಸ್‌ಗಳಾದ ಲಕ್ಷ್ಮೀಕಾಂತ ದೇವರಗೋನಾಲ,ಗಂಗಾಧರ ನಾಯಕ ಅರಳಳ್ಳಿ,ಪರಶುರಾಮ ನಾಟೆಕರ್,ಸಂತೋಷ ಮೇದಾ,ತಿಗಳಪ್ಪ ಕವಡಿಮಟ್ಟಿ,ಪವನ ವಿಭೂತಿ,ಪ್ರವೀಣ ವಿಭೂತಿ,ರಮೇಶ ಯಾದವ್,ಶೇಖು ಭೂಮಶೆಟ್ಟಿ,ಮೌನೇಶ ಹಾವಿನಾಳ ಹಾಗು ಬೀಟ್ ಪೊಲೀಸ್ ಸೇರಿದಂತೆ ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ,ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮಗ್ಗೆಮ್ಮ ಚನ್ನೂರ, ಮುಖಂಡರಾದ ಶ್ರೀನಿವಾಸ ನಾಯಕ ದರಬಾರಿ, ಭೀಮಣ್ಣ ಬೇವಿನಾಳ,ವೆಂಕಟೇಶ ನಾಯಕ ಬೈರಿಮಡ್ಡಿ ,ರವಿಕುಮಾರ ನಾಯಕ ಬೈರಿಮಡ್ಡಿ,ಮಲ್ಲು ಬಾದ್ಯಾಪುರ, ನಿಂಗಣ್ಣ ನಾಗನಟಿಗಿ ಮಾಗುಂಡಾಳ, ಮಲ್ಲಪ್ಪ ಟಣಕೆದಾರ,ಮಲ್ಲಿಕಾರ್ಜುನ ಗೌಡ ಪೊಲೀಸ್ ಪಾಟೀಲ್,ಶಿವಪ್ಪ ಜಮದರಖಾನಿ,ಮಲ್ಲಣ್ಣ ಕುರಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…