ಹಾವೇರಿಯ ಮಹಾನ್ ಲಲಿತ ಪ್ರಬಂಧಕಾರ ‘ರಾಕು’ರ ಬಗೆಗೆ ಒಂದು ಲೇಖನ ಬರೆಯಬೇಕಾಗಿತ್ತು. ಆ ಬಗೆಗೆ ಹಾವೇರಿಯವರೇ ಆದ ಕವಿ, ಸಾಹಿತಿ ಮತ್ತು ನಾಟಕಕಾರ ಸತೀಶ್ ಕುಲಕರ್ಣಿಯವರಿಂದ ಕಾಡಿ-ಬೇಡಿ ಕೆಲ ಮಾಹಿತಿಯನ್ನೂ ಸಂಗ್ರಹಿಸಿದ್ದೆನು. ಆದರೆ ಅಷ್ಟೊರಳಗೆ ಕೆಲ ಕಾರಣಗಳಿಂದ ಇನ್ನೂ ‘ರಾಕು’ ಬಗೆಗೆ ಬರೆಯಲಾಗಿರಲಿಲ್ಲಿ.
ಈಗ ಅಂದರೆ ಸೆಪ್ಟೆಂಬರ್ 28 ರಂದರು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟಿದ ದಿನ. ಆ ಕಾರಣಕ್ಕೆ ಈ ಭಗತ್ ಸಿಂಗ್ ರ ಬಗೆಗೆ ನಾಲ್ಕು ಸಾಲು ಬರೆದು ನಮನ ಅರ್ಪಿಸ ಬೇಕಾಯಿತು. ಹಾಗಾಗಿ ನಾವು ಓದಿದ ಭಗತ್ ಸಿಂಗ್ ಬಗೆಗಿನ ಕುರುಹುಗಳನ್ನು ಹಾಗೇ ಗೀಚಿದ್ದೇನೆ…
ಭಗತ್ ಸಿಂಗ್ ಈ ಹೆಸರೇ ಒಂದು ರೋಮಾಂಚನವನ್ನುಂಟು ಮಾಡುವಂತಹದು. ಯುವಜನತೆಗೆ ಚೇತನ ತುಂಬುವ ಶಕ್ತಿ ಅಡಗಿದೆ ಈ ಹೆಸರಲ್ಲಿ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಧೀರ, ಧೀಮಂತ ಕ್ರಾಂತಿಕಾರಿ ವ್ಯಕ್ತಿ ಭಗತ್ ಸಿಂಗ್!
ಭಗತ್ ಸಿಂಗ್ ಹುಟ್ಟಿದ್ದು ಸೆಪ್ಟೆಂಬರ್ 27/ 28. 1906 ರಂದು. ಭಗತ್ ಸಿಂಗ್ ಪಂಜಾಬಿನ ಲಯಲ್ಪುರ್ ಜಿಲ್ಲೆಯ ಬಂಗ ಎಂಬ ಹಳ್ಳಿಯಲ್ಲಿ ಹುಟ್ಟಿದ. ಸರ್ದಾರ್ ಕಿಶನ್ ಸಿಂಗ್ ಹಾಗೂ ವಿದ್ಯಾವತಿಯ ಮೂರನೇ ಮಗನಾಗಿ ಹುಟ್ಟಿದ ಈ ಬಾಲಕ ಮುಂದೆ ದೇಶ ಮೆಚ್ಚುವ ಮಗನಾಗುವವನೆಂದು ಎಣಿಸಿರಲಿಲ್ಲವೇನೋ..! ಭಗತ್ ಸಿಂಗ್ ಕುಟುಂಬ ಸ್ವಾತಂತ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಹುಷಃ ಇದೇ ಭಗತ್ ಸಿಂಗ್ ನಲ್ಲಿ ದೇಶದ ಬಗ್ಗೆ ಪ್ರೇಮ ಮೂಡಲು ಕಾರಣವಾಯಿತು ಎಂದರೆ ತಪ್ಪಾಗಲಾರದೇನೋ.
1916 ರಲ್ಲಿ DAV ಶಾಲೆ, ಲಾಹೋರ್ ನಲ್ಲಿ ಕಲಿಯುತ್ತಿದ್ದಾಗಲೇ ಖ್ಯಾತ ಹೋರಾಟಗಾರರಾದ ಲಾಲಾ ಲಜಪತ್ ರಾಯ್ ಇವರ ಪರಿಚಯವಾಗಿತ್ತು ಭಗತ್ ಸಿಂಗ್ ಗೆ. 1919 ರಲ್ಲಿ ನಡೆದ ಜಲಿಯನ್ವಾಲಾಭಾಗ್ ನಲ್ಲಿ ನಡೆದ ಘಟನೆಯಿಂದ ಬಹಳ ನೊಂದ ಭಗತ್ ಸಿಂಗ್ ಬ್ರಿಟಿಷರನ್ನು ಭಾರತದಿಂದ ಹೊರದಬ್ಬಿ ಸ್ವಾತಂತ್ರ್ಯ ಭಾರತದ ಕನಸು ಕಾಣಲು ಶುರು ಮಾಡಿದರು. 1921 ರಲ್ಲಿ ಗಾಂಧಿಜಿ ಅವರು ಬ್ರಿಟಿಷರ ವಿರುದ್ಧ ‘Non – Cooperation Movement’ ಕರೆಕೊಟ್ಟಾಗ ಶಾಲೆಯನ್ನು ತ್ಯಜಿಸಿ ಬಂದು ಆ ತಂಡವನ್ನು ಸೇರಿದರು ಭಗತ್ ಸಿಂಗ್. ಅದೇ ಗಾಂಧಿಜಿ 1922 ರಲ್ಲಿ ತಾವು ಬ್ರಿಟಿಷರ ವಿರುದ್ಧ ಮಾಡಿದ್ದ ಆಂದೋಲನವನ್ನು ವಾಪಸ್ ತೆಗೆದುಕೊಂಡಾಗ ಬಹಳ ನೊಂದ ಭಗತ್ ಸಿಂಗ್ ಗೆ ಅಹಿಂಸೆಯ ಮೇಲಿದ್ದ ನಂಬಿಕೆಯನ್ನು ಹೊರಟು ಹೋಗುವಂತೆ ಹೋಗಿ ಕ್ರಾಂತಿಯ ಮಾರ್ಗವೇ ಸರಿ ಎಂದು ನಿರ್ಧರಿಸಿದರು. ಮತ್ತೆ ಶಾಲೆ ಸೇರಲು ಕ್ರಾಂತಿಕಾರಿ ಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದ್ದ ಲಾಹೋರಿನ ನ್ಯಾಷನಲ್ ಕಾಲೇಜ್ ಸೇರಿದರು. ಅಲ್ಲಿ ಅವರಿಗೆ ಕ್ರಾಂತಿಕಾರಿಗಳಾದ ಸುಖದೇವ್, ಭಗವತಿ ಚರಣ್ ಮುಂತಾದವರ ಭೇಟಿ ಆಯಿತು.
ಕ್ರಾಂತಿಯ ಬಗ್ಗೆ ಮೊದಲು ಭಗತ್ ಸಿಂಗ್ ಗೆ ಪಾಠ ಮಾಡಿದ್ದು ಗಣೇಶ್ ಶಂಕರ್ ಎಂಬ ವಿದ್ಯಾರ್ಥಿ. ಲಾಹೋರಿನಲ್ಲಿ ‘ನೌಜವಾನ್ ಭಾರತ್ ಸಭಾ’ ಎಂಬ ಸಂಘವನ್ನು ಸ್ಥಾಪಿಸಿ ಪಂಜಾಬಿನಾದ್ಯಂತ ತಮ್ಮ ಹೋರಾಟದ ಸಂದೇಶಗಳನ್ನು ಸಾರಿದರು.
1928 ರಲ್ಲಿ ದೆಹಲಿಯಲ್ಲಿ ನಡೆದ ಕ್ರಾಂತಿಕಾರಿಗಳ ಸಭೆಯಲ್ಲಿ ಮತ್ತೊಬ್ಬ ಧೀಮಂತ ಕ್ರಾಂತಿಕಾರಿ “ಚಂದ್ರಶೇಖರ್ ಆಜಾದ್” ರನ್ನು ಭೇಟಿ ಮಾಡಿದರು ಭಗತ್ ಸಿಂಗ್. ನಂತರ ಇಬ್ಬರೂ ಸೇರಿ ‘ಹಿಂದೂಸ್ಥಾನ್ ಸಮಾಜವಾದಿ ಪ್ರಜಾತಂತ್ರ ಸಂಘ’ ಎಂಬ ಸಂಘವನ್ನು ಸ್ಥಾಪಿಸಿದರು. ಅದರ ಮೂಲ ಉದ್ದೇಶ ಸಶಸ್ತ್ರ ಕ್ರಾಂತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವುದೇ ಆಗಿತ್ತು.
1928ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ದಿಂದ ಭಾರತಕ್ಕೆ ‘ಸೈಮನ್ ಕಮಿಷನ್’ ಎಂಬ ತಂಡ ಬಂದಿತು. ಇದರ ಉದ್ದೇಶ ಭಾರತೀಯರಿಗೆ ಎಷ್ಟು ಸ್ವಾತಂತ್ಯ್ರ ಹಾಗೂ ಜವಾಬ್ದಾರಿಗಳನ್ನು ಕೊಡಬೇಕು ಎಂದು ನಿರ್ಧರಿಸುವುದೇ ಆಗಿತ್ತು. ವಿಪರ್ಯಾಸವೆಂದರೆ ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯನನ್ನು ನೇಮಿಸದಿರುವುದು ಭಾರತೀಯರ ಕೋಪಕ್ಕೆ ಕಾರಣವೂ ಆಯಿತು. ಇದರ ವಿರುದ್ಧ ನಡೆಸಿದ ಹೋರಾಟದಲ್ಲಿ ಪೊಲೀಸರು ನಡೆಸಿದ ಲಾಟಿ ಚಾರ್ಜ್ ನಲ್ಲಿ ಲಾಲಾ ಲಜಪತ್ ರಾಯ್ ಅವರು ತೀವ್ರವಾಗಿ ಗಾಯಗೊಂಡು ನಿಧನರಾದರು. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಭಗತ್ ಸಿಂಗ್ ಮತ್ತವನ ತಂಡ ಪೋಲಿಸ್ ಅಧಿಕಾರಿ ಸ್ಕಾಟ್ ಅನ್ನು ಕೊಲ್ಲುವ ಬದಲಾಗಿ ಅವನ ಸಹಾಯಕ ಸಾಂಡರ್ಸ್ ನನ್ನು ಕೊಂದರು. ಆ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಭಗತ್ ಸಿಂಗ್ ಲಾಹೋರ್ ಬಿಡಬೇಕಾಯಿತು.
1929 ಏಪ್ರಿಲ್ 8 ರಂದು ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಅಸ್ಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಕರಪತ್ರಗಳನ್ನು ಎಸೆದರು. ಅಲ್ಲಿ ಅವರಿಬ್ಬರನ್ನು ಬಂಧಿಸಿದ ಪೊಲೀಸರು ಅವರನ್ನು ಬಂಧೀಖಾನೆಯಲ್ಲೂ ಇರಿಸಿದರು. ಅಲ್ಲಿ ಕ್ರಾಂತಿಕಾರಿಗಳ ದಂಡೇ ನೆರದಿತ್ತು. ಬ್ರಿಟಿಷ್ ಅಧಿಕಾರಿಗಳು ಎಷ್ಟೇ ಹಿಂಸಿಸಿದರೂ ‘ವಂದೇಮಾತರಂ’ ಎಂಬ ಘೋಷಣೆಗಳು ನಿಲ್ಲುತ್ತಲೇ ಇರಲಿಲ್ಲ. ಸತತವಾಗಿ ಉಪವಾಸ ಸತ್ಯಾಗ್ರಹಗಳು ನಡೆದೇ ಇದ್ದವು. ಅಕ್ಟೋಬರ್ 7ರ 1930 ರಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಈ ಮೂವರಿಗೂ ಮರಣದಂಡನೆ ವಿಧಿಸಲಾಯಿತು. ಖ್ಯಾತ ರಾಜಕೀಯ ವ್ಯಕ್ತಿಗಳು ಅಂದು ಮನಸು ಮಾಡಿದ್ದರೆ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರುರವರ ಮರಣ ದಂಡನೆ ತಪ್ಪಿಸಬಹುದಿತ್ತೇನೋ.!?
ಆದರೆ ಅದು ಆಗಲಿಲ್ಲ. ಕಡೆಯದಾಗಿ 23 ಮಾರ್ಚ್ 1931 ರಂದು ಬೆಳ್ಳಂ ಬೆಳಿಗ್ಗೆ ಮೋಸವಾಗಿ ಈ ಮೂವರನ್ನು ಗಲ್ಲಿಗೇರಿಸಲಾಯಿತು…
ಭಾರತದ ಸ್ವಾತಂತ್ರ್ಯ ಸಮರಕ್ಕೆ ತನ್ನ ಪ್ರಾಣವನ್ನೇ ಬಲಿಕೊಟ್ಟ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರು ಮರಳಿ ಬರಬಹುದೆಂದು ಜೈಲಿನ ಆಚೆ ಕಾತರದಿಂದ ಕಾಯುತ್ತಿದ್ದ ಅವರ ಕುಟುಂಬದವರಿಗೆ ಅವರ ಅಭಿಮಾನಿಗಳಿಗೆ ಕಡೆಯ ಪಕ್ಷ ಅವರ ದೇಹಗಳನ್ನು ನೋಡಲೂ ಅವಕಾಶ ಸಿಗಲಿಲ್ಲದಿರುವು ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದ ದುರ್ಧೈವವೇ ಸರಿ…
ಹೀಗೆಯೇ ನಡೆದ ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟಯೊಂದು ಬಹು ರೋಚಕ ನೆನಪಾಗಿ ಉಳಿಯಿತು…
ಇಲ್ಲಿಗೆ ಈ ಮೂವರ ಅದರಲ್ಲೂ ಭಗತ್ ಸಿಂಗ್ ಒಂದು ಸ್ವಾತಂತ್ರ್ಯ ಹೋರಾಟದ ಕ್ರಾತಕಾರ ನೆನಪಾಗಿಯೇ ಉಳಿಯಿತು…
ಇಂದಿಗೆ ಭಗತ್ ಸಿಂಗ್ ಸತ್ತು 80 ವರ್ಷಗಳು ಆಯಿತು. ಈ ಸಮಯದಲ್ಲಿ ಅವರನ್ನು ನೆನೆಯುತ್ತ ಅವರಿಗಿದೋ ಕ್ರಾಂತಕಾರಕ ನಮನ..!
—
# ಕೆ.ಶಿವು.ಲಕ್ಕಣ್ಣವರ
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…