ಕಲಬುರಗಿ: ಜಿಲ್ಲೆಯಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಜಿಲ್ಲೆಯಾದ್ಯಂತ ಆಚರಿಸಲು ಬಿಜೆಪಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸೇವೆ ಮತ್ತು ಸಮರ್ಪಣ ಅಭಿಯಾನ ಅಡಿಯಲ್ಲಿ ಆಯೋಜಿಸಿರುವ ಗಾಂಧಿ ಜಯಂತಿಯ ಜಿಲ್ಲಾ ಸಂಚಾಲಕರು ಹಾಗೂ ಬಿಜೆಪಿ ಎಸ್ ಸಿ ಮತ್ತು ಹಿಂದುಳಿದ ವರ್ಗದ ಮೋರ್ಚಾ ರಾಜ್ಯ ಉಪಾಧ್ಯಕ್ಷರುಗಳಾದ ಅಂಬಾರಾಯ ಅಷ್ಠಗಿ ಹಾಗೂ ಶೋಭಾ ಬಾಣಿ, ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣಗೌಡ ಪಾಟೀಲ ಧಮ್ಮೂರ ಹಾಗೂ ಆತೀಶ ಪವಾರ ರವರು ತಿಳಿಸಿದ್ದಾರೆ.
ಈ ಕಾರ್ಯಕ್ರಮಗಳಿಗೆ ಮಂಡಲ ಅಧ್ಯಕ್ಷು/ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರತಿ ಮಂಡಲ/ಬೂತಗಳಿಗೆ ನಾಲ್ಕು ಜನ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಗಾಂಧೀಜಿಯವರ ಜಯಂತಿಯನ್ನು ಕೋವಿಡ-19 ನಿಯಮಾನುಸಾರ ಆಚರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನಿಯವರ ಅತ್ಯುತ್ತಮ ಕಾರ್ಯಕ್ರಮ ಶ್ಲಾಘಿಸಿ ಪೋಸ್ಟ್ ಕಾರ್ಡ್ ಬರೆಯುವುದು, ಪರಿಸರ ಸ್ನೇಹಿ ಕಾರ್ಯ (ಸ್ವಚ್ಛತಾ ಅಭಿಯಾನ),ಆರೋಗ್ಯ ಚಟುವಟಿಕೆಗಳು(ರಕ್ತ ದಾನ, ಆರೋಗ್ಯ ತಪಾಸಣಾ ಶಿಬಿರ,ಲಸಿಕಾ ಅಭಿಯಾನ), ಸೇವಾ ಕಾರ್ಯ (ಹಣ್ಣು-ಹಂಪಲು ಹಂಚುವುದು,ಅಂಧರಿಗೆ ನೇರವು, ಪಡಿತರ ಚೀಲ ವಿತರಣೆ) ಸ್ವದೇಶಿ ವಸ್ತುಗಳ ಖರೀದಿ, ಇನ್ನು ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಈ ಕಾರ್ಯಕ್ರಮಗಳು ಅಕ್ಟೋಬರ 02 ರಿಂದ 07 ನೇ ತಾರಿಖಿನ ವರೆಗೆ ನಡೆಯಲಿವೆ ಎಂದು ಅಭಿಯಾನದ ಸಂಚಾಲಕರುಗಳಾದ ಅಂಬಾರಾಯ ಅಷ್ಠಗಿ, ಶೋಭಾ ಬಾಣಿ, ಸಿದ್ದಣ್ಣಗೌಡ ಪಾಟೀಲ ಧಮ್ಮೂರ, ಆತೀಶ ಪವಾರ ತಿಳಿಸಿದ್ದಾರೆ.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…