ಬಿಸಿ ಬಿಸಿ ಸುದ್ದಿ

ವಿವಿಗಳ ಉನ್ನತಿಗಾಗಿ ವಿಶ್ವ ದರ್ಜೆಯ ಶಿಕ್ಷಣ ನೀಡುವುದು ಅವಶ್ಯಕ: ಪ್ರೊ. ಎಸ್. ಆರ್. ನಿರಂಜನ

ಕಲಬುರಗಿ: ವಿಶ್ವವಿದ್ಯಾಲಯಗಳ ಉನ್ನತಿಗಾಗಿ ವಿಶ್ವ ದರ್ಜೆಯ ಉನ್ನತ ಗುಣಮಟ್ಟ ಮೌಲ್ಯಯುತ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಆರ್. ನಿರಂಜನ ಅವರು ಪ್ರತಿಪಾದಿಸಿದರು.

ಗುರುವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 42ನೇ ಸಂಸ್ಥಾಪನಾ ದಿನಾಚರಣೆಯ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.

ಪ್ರಪಂಚದ ಅನೇಕ ವಿವಿಗಳು ತಮ್ಮ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಕಲಿಕೆ ನೀಡಿ ಜಗತ್ತಿನಾದ್ಯಂತ ತಮ್ಮ ವಿಶ್ವವಿದ್ಯಾಲಯ ಹೆಸರನ್ನು ಪಸರಿಸಿವೆ. ಆ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಸಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನಿಡಬೇಕಾಗಿದೆ. ಇದಲ್ಲದೇ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ವಿವಿಗಳಲ್ಲಿ ಗಣನೀಯವಾಗಿ ಆಗಬೇಕು ಎಂದು ಅವರು ಹೇಳಿದರು.

ವಿವಿಗಳು ತಮ್ಮಲ್ಲಿರುವ ಪ್ರಾದೇಶಿಕ ಪ್ರಾಮುಖ್ಯತೆಯನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಅವುಗಳ ಕುರಿತು ಕೌಶಲ್ಯಾಧರಿತ ಶಿಕ್ಷಣವನ್ನು ನೀಡಬೇಕು. ವಿವಿಗಳಿಗೆ ಪ್ರಮುಖವಾದ ಅಂಶವೆಂದರೆ ಅದು ಸಂಶೋಧನೆಯಾಗಿದೆ. ಹೀಗಾಗಿ ಸಂಶೋಧನಾ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಪಾರದರ್ಶಕ ಶಿಕ್ಷಣ ದೊರಕುವಂತೆ ವಿವಿಗಳು ಶ್ರಮಿಸಬೇಕು. ವಿದೇಶಿ ವಿವಿಗಳ ಕಾರ್ಯವೈಖರಿ ಬಗ್ಗೆ ನಾವುಗಳು ಅರಿಯಬೇಕಾಗಿದೆ. ಆದರಿಂದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಮಂಡಳಿ ಸ್ಥಾಪಿಸಿ ಹೆಚ್ಚಿನ ಪ್ರೋತ್ಸಾಹ ನೀಡಿ ವಿಶ್ವ ಮಟ್ಟದಲ್ಲಿ ಗುರಿತಿಸುವಂತೆ ವಿಶ್ವವಿದ್ಯಾಲಯಗಳು ರೂಪಿಸಬೇಕು ಎಂದು ಅವರು ನಿಕಟ ಪೂರ್ವ ಕುಲಪತಿಗಳು ಅಭಿಪ್ರಾಯಪಟ್ಟರು.

ನೂತನ ಶಿಕ್ಷಣ ನೀತಿ – 2020 ಅನ್ನು ಪ್ರಪ್ರಥಮ ಭಾರಿಗೆ ಅನುಷ್ಠಾನಗೊಳಿಸುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಗುಲಬರ್ಗಾ ವಿಶ್ವವಿದ್ಯಾಲಯವಾಗಿದ್ದು ಹೆಮ್ಮೆ ಸಗಂತಿಯಾಗಿದೆ. ನೂತನ ಶಿಕ್ಷಣ ನೀತಿಯಿಂದ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಕೊಠಾರಿ ಆಯೋಗದ ಶಿಫಾರಸಿನಂತೆ ಶಿಕ್ಷಣಕ್ಕಾಗಿ ಪ್ರತೀಶತ 6% ಜಿಡಿಪಿ ಮೀಸಲು ಇಡಲಾಗುವುದು. ಇದರಿಂದ ವಿವಿಯ ಉನ್ನತಿಕರಣಕ್ಕೆ ಬಲಿಷ್ಠ ಅಡಿಪಾಯ ನಿರ್ಮಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ನ್ಯಾಕ್‍ನ 4ನೇ ಆವೃತ್ತಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕಿದೆ. ‘ಎ’ ಶ್ರೇಣಿಗೆ ಅರ್ಹತೆ ಪಡೆಯಲು ವಿಶ್ವವಿದ್ಯಾಲಯ ತುರ್ತಾಗಿ ಕೈಗೊಳ್ಳಬೇಕಾದ ದೂರದೃಷ್ಠಿ ಯೋಜನೆ ಸಿದ್ಧತೆ, ಬೋಧನಾ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಸನ್ನದವಾಗಬೇಕು. ಗುಲಬರ್ಗಾ ವಿವಿಯು ನ್ಯಾಕ್ 4ನೇ ಅವೃತ್ತಿಯಲ್ಲಿ ಎ ಶ್ರೇಣಿ ಪಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರು, ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಸ್ನಾತಕ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಪದವಿ ಪಠ್ಯಕ್ರಮ 2021-22 ಶೈಕ್ಷಣಿಕ ಸಾಲಿನಿಂದ ಆರಂಭಗೊಳ್ಳುತ್ತಿದೆ.

ಈ ಹೊಸ ನೀತಿಯಿಂದ ಯುವ ಜನತೆಗೆ ವಿಷಯಗಳ ಆಳವಾದ ಜ್ಞಾನ, ವೃತ್ತಿ ಕೌಶಲ್ಯ ಜೊತೆಗೆ ಸಾಮಥ್ರ್ಯ ವೃದ್ಧಿ ಪಡೆದು ಸಮಾಜದಲ್ಲಿ ಉತ್ತಮ ನಾಗರೀಕನಾಗಿ ಸ್ವತಂತ್ರ ಮತ್ತು ಸ್ವಾವಲಂಬಿಯಾಗಿ ಬದುಕಲು ಹೆಚ್ಚು ಒತ್ತು ಕೊಡಲಾಗಿದೆ ಎಂದ ಅವರು ಶಿಕ್ಷಣದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗೆ ಆಧ್ಯತೆ ನೀಡಲಾಗಿರುವುದರಿಂದ ಬೋಧಕ ಸಿಬ್ಬಂದಿ ಪರಿಶ್ರಮ ಅತಿ ಅಗತ್ಯ ಸಂಶೋಧನೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸಂಶೋಧನಾ ಸಲಹಾ ಸಮಿತಿ ರಚನೆಗೆ ವಿಶ್ವವಿದ್ಯಾಲಯ ಮುಂಬರುವ ದಿನಗಳಲ್ಲಿ ಆಸಕ್ತಿವಹಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಸಾಧಕ ಪ್ರಾಧ್ಯಾಕರು ಹಾಗೂ ಸೇವಾ ನಿವೃತ್ತಿ ಪಡೆದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಗುಲಬರ್ಗಾ ವಿವಿಯ ಕುಲಸಚಿವ ಶರಣಬಸಪ್ಪ ಕೋಟ್ಟೆಪ್ಪಗೋಳ ಅವರು ಸ್ವಾಗತ ಹಾಗೂ ಪ್ರಾಸ್ತವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಪ್ರೊ. ಹೆಚ್. ಟಿ. ಪೋತೆ ಅವರು ವಿವಿಯ ಸಾಧನೆಯ ವಾರ್ಷಿಕ ವರದಿಯನ್ನು ಮಂದಿಸಿದರು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯೆ ಶ್ರೀಮತಿ ಪ್ರತಿಭಾ ಛಾಮಾ, ವಿತ್ತಾಧಿಕಾರಿ ಪ್ರೊ. ಬಿ ವಿಜಯ, ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ, ಎಲ್ಲಾ ನಿಕಾಯದ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ನಗರದಿಂದ ಆಗಮಿಸಿದ ಗಣ್ಯರು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊ. ವಿದ್ಯಾಸಾಗರ್, ಪ್ರೊ. ರಮೇಶ್ ಲಂಡನ್ಕರ್ ಹಾಗೂ ಪ್ರಕಾಶ ಉದನೂರು ಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago