ಬಿಸಿ ಬಿಸಿ ಸುದ್ದಿ

ವೇಸ್ಟ್‌ ಡೀಕಾಂಪೋಸರ್ ಉಪಯೋಗಗಳು

ವೇಸ್ಟ್‌ಡೀಕಾಂಪೋಸರ್ ದೆಹಲಿಯ ಕೇಂದ್ರೀಯ ಸಾವಯವ ಕೃಷಿ ಕೇಂದ್ರ ಸೂಕ್ಷ್ಮಾಣುಜೀವಿ ದ್ರಾವಣವನ್ನು ಅಭಿವೃದ್ಧಿಪಡಿಸಿದ. ಇದನ್ನು ರಾಸುಗಳ ಸಗಣಿಯ ಲೋಳೆಯಲ್ಲಿರುವ ಮ್ಯೂಕಸ್ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ತಯಾರಿಸಲಾಗಿದೆ. ಬೆಳೆಗಳ ಇಳುವರಿ ಹೆಚ್ಚಳಕ್ಕೆ, ಮಣ್ಣಿನ ಫಲವತ್ತತೆ ಉತ್ಕೃಷ್ಟಗೊಳಿಸಲು ಇದು ನೆರವಾಗುತ್ತದೆ. ಬೀಜೋಪಚಾರಕ್ಕೆ, ಬೆಳೆಯುಳಿಕೆ, ತ್ಯಾಜ್ಯಗಳನ್ನು ಬೇಗ ಕಳಿಸಿ ಬಳಕೆ ಮಾಡಲು ಈ ದ್ರಾವಣವನ್ನು ಬಳಸಬಹುದು.

ತಯಾರಿಸುವ ವಿಧಾನ:  ೨೦೦ ಲೀಟರ್ ನೀರಿಗೆ ೨ ಕೆ.ಜಿ. ಯಿಂದ ೪ ಕೆ.ಜಿಯವರೆಗೆ ಬೆಲ್ಲ ಬೆರೆಸಿ ಬಳಸುವ ಬೆಲ್ಲ ಸಾವಯದ್ದಾಗಿದ್ದರೆ ಒಳ್ಳೆಯದು. ಅದು ಲಭ್ಯವಾಗದಿದ್ದರೆ ದನಗಳಿಗೆ ತಿನ್ನಿಸುವ ಬೆಲ್ಲಇದ್ದರೆ ಸಾಕು. ನೀರಿಗೆ ಬೆರೆಸಿದ ಬೆಲ್ಲವನ್ನು ಕರಗಿಸಿ ಅವಕಾಶವಿದ್ದರೆ ಮೊದಲೇ ಬೆಲ್ಲವನ್ನುಒಂದು ಬಕೆಟ್ ನೀರಿನಲ್ಲಿ ಕರಗಿಸಿಟ್ಟುಕೊಂಡು ದ್ರಾವಣ ಮಾಡಿಟ್ಟುಕೊಳ್ಳಬಹುದು. ಇದಾದ ನಂತರಡ್ರಮ್‌ನಲ್ಲಿರುವ ಬೆಲ್ಲದದ್ರಾವಣವನ್ನು ಕೋಲಿನಿಂದಚೆನ್ನಾಗಿತಿರುಗಿಸಬೇಕು. ಬೆಲ್ಲಕರಗಿದ್ರಾವಣ ತಯಾರಾಗುತ್ತದೆ.

ಶೀಷೆಯಲ್ಲಿರುವ ೫೦ ಮಿ.ಲೀ ವೇಸ್ಟ್‌ಡಿಕಂಪೋಸರ್‌ಅನ್ನುಡ್ರಮ್‌ನಲ್ಲಿರುವ ೨೦೦ ಲೀ. ನೀರಿಗೆ ಬೆರೆಸುವುದು. ಮಿಶ್ರಣವನ್ನು ಚೆನ್ನಾಗಿ ಕೋಲಿನಿಂದ ತಿರುಗಿಸಿ. ಡ್ರಮ್ ಮುಚ್ಚಳವನ್ನು ಮುಚ್ಚಿರಿ, ಪ್ರತಿದಿನ ಒಂದು ಸಲವಾದರೂ ಕೋಲಿನಿಂದ ಮಿಶ್ರಣವನ್ನು ತಿರುಗಿಸುತ್ತಿರಿ. ನಾಲ್ಕು ದಿನ ಅಥವಾ ಏಳು ದಿನಗಳ ಒಳಗೆ ಡ್ರಮ್‌ನ ಮುಚ್ಚಳ ತೆಗೆಯಿರಿ. ಆಗ ದ್ರಾವಣದ ಮೇಲ್ಪದರದಲ್ಲಿ ಕೆನೆ ರೀತಿ ವಸ್ತು ಕಾಣುತ್ತದೆ- ಡಾ. ಮಹಾಂತೇಶ ಜೋಗಿ.

ದ್ರಾವಣವನ್ನು ಬಳಸಲು ಸೂಚನೆಗಳು: ಸಿದ್ಧವಾದ ವೇಸ್ಟ್‌ಡಿಕಂಪೋಸರ್ ದ್ರಾವಣವನ್ನು ತ್ಯಾಜ್ಯ ಕರಗಿಸಿ ಗೊಬ್ಬರವಾಗಿಸಲು, ಬೆಳೆಯ ಇಳುವರಿ ಹೆಚ್ಚಿಸಲು, ಮಣ್ಣಿನ ಫಲವತ್ತತೆ ವೃದ್ಧಿ ಮಾಡಲು, ಬೋಜೋಪಚಾರ ಮಾಡಲು, ಬೆಳೆಗಳಿಗೆ ಕೀಟ & ರೋಗಗಳ ಬಾಧೆ ನಿಯಂತ್ರಣ ಮಾಡಲು ಹೀಗೆ ಯಾವ ರೀತಿ ಬೇಕಾದರೂ ಬಳಸಬಹುದಾಗಿದೆ. ಎಲ್ಲ ರೀತಿಯ ಬೆಳೆಗಳಿಗೂ ಏಳು ದಿನಕ್ಕೊಮ್ಮೆ ಬಳಸಬಹುದು.

ತರಕಾರಿ ಬೆಳೆಗಳಿಗಾದರೆ ಮೂರು ದಿನಕ್ಕೊಮ್ಮೆ, ಹಣ್ಣಿನ ಬೆಳೆಗಳಿಗಾದರೆ ಏಳು ದಿನಕ್ಕೊಮ್ಮೆ ಸಿಂಪಡಿಸಬಹುದು. ಒಂದು ಎಕರೆಗೆ ೨೦೦ ಲೀಟರ್ ದ್ರಾವಣವನ್ನು ಹನಿ ನೀರಾವರಿ ಮೂಲಕ ಹರಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ಬೆಳೆ ಇಳುವರಿಯೂ ಹೆಚ್ಚಾಗುತ್ತದೆ. ಯಾವುದೇ ರೀತಿಯ ಬಿತ್ತನೆ ಬೀಜದ ಮೇಲೆ ದ್ರಾವಣವನ್ನು ಚಿಮುಕಿಸಿ, ಚೆನ್ನಾಗಿ ಕಲಸಿ, ನೆರಳಿನಲ್ಲಿ ಅರ್ಧ ಗಂಟೆ ಒಣಗಿಸಬೇಕು ನಂತರ ಬಿತ್ತಬೇಕು. ಜಮೀನಿನ ಮಣ್ಣಿಗೆ ಈ ದ್ರಾವಣ ಸಿಂಪಡಿಸುವುದರಿಂದ ಮಣ್ಣಿನಲ್ಲಿ ಸೂಕ್ಷಾಣು ಜೀವಿಗಳ ಪ್ರಮಾಣ ವೃದ್ಧಿಯಾಗುತ್ತದೆ.

ಹನಿ ನೀರಾವರಿ ಮೂಲಕ ಒದಗಿಸುವುದು: ಒಂದು ಎಕರೆಗೆ ೨೦೦ ಲೀಟರ್ ದ್ರಾವಣವನ್ನು ಹನಿ ನೀರಾವರಿ ಮೂಲಕ ಒದಗಿಸಿದರೆ, ಮಣ್ಣು ಫಲವತ್ತಾಗಿ ಬೆಳೆ ಇಳುವರಿಯೂ ಹೆಚ್ಚಾಗುತ್ತದೆ. ಪ್ಲಾಸ್ಟಿಕ್ ಡ್ರಮ್‌ನಲ್ಲಿ ೧೦೦ ಲೀಟರ್ ನೀರಿನೊಂದಿಗೆ ೧ ಕೆ.ಜಿ. ಬೆಲ್ಲವನ್ನು ಬೆರೆಸುವುದು. ವೇಸ್ಟ್ ಡೀಕಂಪೋಸರ್ ಬಾಟಲ್ ತೆರೆದು ಅದರಲ್ಲಿ ಇರುವ ಪೂರ್ತಿ ಸಾಮಗ್ರಿಯನ್ನು ಡ್ರಮ್‌ನಲ್ಲಿ ಹಾಕುವುದು. ನಂತರ ಮರದ ಕೋಲಿನಿಂದ ಪ್ರತಿ ದಿನ ಕಲಕುವುದು ಹಾಗೂ ಡ್ರಮ್‌ನ ಮೇಲೆ ಪೇಪರ್‌ನಿಂದ ಮುಚ್ಚುವುದು. ೭ ದಿನಗಳ ನಂತರ ದ್ರಾವಣ ಬಳಸಲು ಸಿದ್ಧ — ಡಾ.ರಾಜು ಜಿ. ತೆಗ್ಗಳ್ಳಿ.

ಕಾಂಪೋಸ್ಟ್ ಮಾಡುವ ವಿಧಾನ: ಅರ್ಧ ಟನ್ (೫೦೦ ಕೆ.ಜಿ.) ತ್ಯಾಜ್ಯ ವಸ್ತುವನ್ನು ಹಾಕುವುದು. ಮೇಲಿನಿಂದ ವಿವರಿಸಿದ ದ್ರಾವಣವನ್ನು ಹಾಕುವುದು. ಅದರ ಮೇಲೆ ಪುನಃ ಇನ್ನೊಂದು ಪದರ ತ್ಯಾಜ್ಯ ವಸ್ತುವನ್ನು ಹರಡುವುದು.  ಪುನಃ ಮೇಲಿನಂತೆ ವಿವರಿಸಿದ ದ್ರಾವಣವನ್ನು ಹಾಕುವುದು. ೬೦% ತೇವಾಂಶವನ್ನು (ದ್ರಾವಣ) ಸದಾ ಕಾಪಾಡುವುದು. ಪ್ರತಿ ೭ ದಿನಕ್ಕೊಮ್ಮೆ ಅದನ್ನು ತಿರುವಿ ಹಾಕುವುದು ಮತ್ತು ಅಗತ್ಯವಿದ್ದಲ್ಲಿ ದ್ರಾವಣವನ್ನು ಬಳಸುವುದು. ೩೦ ದಿನಗಳ ನಂತರ ಕಾಂಪೋಸ್ಟ್ ಗೊಬ್ಬರ ಬಳಸಲು ಸಿದ್ಧ.

ವೇಸ್ಟ್ ಡೀಕಂಪೋಸರ್ ದ್ರಾವಣವನ್ನು ನೀರಿನ ಜೊತೆ ಬೆರೆಸುವುದು.
೧. ಪ್ರತಿ ೭ ದಿನಕ್ಕೊಮ್ಮೆ ೫೦% ದ್ರಾವಣದ ಜೊತೆ ೫೦% ನೀರನ್ನು ಬೆರೆಸಿ ಎಲ್ಲಾ ಬೆಳೆಗಳ ಮೇಲೆ ಸಿಂಪಡಿಸುವುದು.
೨. ಪ್ರತಿ ೩ ದಿನಕ್ಕೊಮ್ಮೆ ೪೦% ದ್ರಾವಣದ ಜೊತೆ ೬೦% ನೀರನ್ನು ಬೆರೆಸಿ ತರಕಾರಿ ಬೆಳೆಗಳ ಮೇಲೆ ಸಿಂಪಡಿಸುವುದು.
೩. ಪ್ರತಿ ೭ ದಿನಕ್ಕೊಮ್ಮೆ ೬೦% ದ್ರಾವಣದ ಜೊತೆ ೪೦% ನೀರನ್ನು ಬೆರೆಸಿ ಹಣ್ಣಿನ ಗಿಡಗಳ ಮೇಲೆ ಸಿಂಪಡಿಸುವುದು.

ಹನಿ ನೀರಾವರಿ:
ಪ್ರತಿ ಎಕರೆಗೆ ೨೦೦ ಲೀಟರ್ ದ್ರಾವಣವನ್ನು ನೀರಿನ ಜೊತೆ ಬೆರೆಸುವುದು.
ಬೆಳೆ ಕಟಾವಿನ ನಂತರ ಭೂಮಿ ಮೇಲೆ ಸಿಂಪಡಿಸುವುದು
ಪ್ರತಿ ಎಕರೆಗೆ ೨೦೦ ಲೀಟರ್ ದ್ರಾವಣವನ್ನು ಬೆಳೆ ಕಟಾವಿನ ನಂತರ ಉಳಿದಿರುವ ಕಾಂಡಗಳ ಮೇಲೆ ಸಿಂಪಡಿಸುವುದು.

ಬೀಜೋಪಚಾರ: ವೇಸ್ಟ್ ಡೀಕಂಪೋಸರ್ ದ್ರಾವಣವನ್ನು ಎಲ್ಲಾ ಬೀಜಗಳ ಮೇಲೆ ಸಮಾನವಾಗಿ ಸಿಂಪಡಿಸುವುದು ಅಥವಾ ಬೆರೆಸುವುದು ನಂತರ ನೆರಳಿನಲ್ಲಿ ಒಣಗಿಸುವುದು. ೩೦ ನಿಮಿಷಗಳ ನಂತರ ಬೀಜಗಳು ಬಿತ್ತುವುದಕ್ಕೆ ಸಿದ್ಧ.

ಡಾ. ಮಹಾಂತೇಶ ಜೋಗಿ, ಡಾ. ವಾಸೂದೇವ ನಾಯಕ , ಡಾ.ಜಹೀರ ಅಹಮದ ಡಾ.ರಾಜು ಜಿ. ತೆಗ್ಗಳ್ಳಿ ಕೃಷಿ ವಿಜ್ಜಾನಗಳ ವಿಶ್ವವಿದ್ಯಾಲಯ ರಾಯಚೂರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

23 hours ago