ಕಲಬುರಗಿ: ಈ ಜಗತ್ತಿನಲ್ಲಿ ಮಣ್ಣನ್ನು ಆಳಿದವರನ್ನು ಜನ ಬೇಗ ಮರೆತರೆ,ಉತ್ತಮ ಕಾರ್ಯ ಮಾಡಿ ಪರರಿಗಾಗಿ ಬದುಕಿದವರ ಹೆಸರು ಅಚ್ಚಳಿಯದೆ ಉಳಿದು ಅಮರರಾಗಿ ಸರ್ವರಿಗೂ ದಾರಿ ದೀಪವಾಗುತ್ತಾರೆ ಎಂದು ಕಲ್ಯಾಣ ನಾಡಿನ ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ ಹೇಳಿದರು.
ತಾಲುಕಿನ ಹತಗುಂದಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಘತ್ತರಗಿ ಭಾಗ್ಯವಂತಿ ಮಹಾಪುರಾಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ಇಂದಿನ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಶವಸಂಸ್ಕಾರಕ್ಕೆ ಸಾವಿರಾರು ಕಿಲೋಮೀಟರ್ ದೂರದಿಂದ ಬರುವ ಜನರಿದ್ದಾರೆ ಆದರೆ ಜೀವಂತವಿದ್ದಾಗ ಪಕ್ಕದಲ್ಲಿದ್ದರೂ ಸಣ್ಣ ಸಹಾಯವು ಮಾಡುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಅಲೢದೆ ಹಲವಾರು ಹಾಸ್ಯ ಚಟಾಕಿಗಳೊಂದಿಗೆ ನೆರೆದವರನ್ನು ನಗಿಸುವುದರೊಂದಿಗೆ ಉತ್ತಮ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾದ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ ಮಾತನಾಡುತ್ತಾ ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ ಶಿಕ್ಷಣ ಜೀವನದಲಿೣ ನಿರಾಶೆಗೊಳಿಸುವುದಿಲ್ಲ ಹಾಗೂ ಸಂಸ್ಕಾರ ಎಂದಿಗೂ ಕೆಳಗೆ ಬೀಳಲು ಬಿಡುವುದಿಲ್ಲ, ಅದಕ್ಕಾಗಿ ಉತ್ತಮ ಸಂಸ್ಕಾರದಿ೦ದ ಸುಂದರ ಸಮಾಜ ನಿರ್ಮಿಸುವ ಕಾರ್ಯ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರೀ ಮಾಷಾಳ ಮಾತನಾಡುತ್ತಾ ಈ ನಾಡು ಅಧ್ಯಾತ್ಮಿಕತೆಯ ತಾಣವಾಗಿದೆ ಶರಣರು,ಸಂತರು, ಮಹಾತ್ಮರು ನಡೆದಾಡಿದ ಸ್ಥಳದಲ್ಲಿ ನಾವೆಲ್ಲರೂ ಹುಟ್ಟಿರುವುದೆ ಮಹಾಪುಣ್ಯ ಅವರ ಆಚಾರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕೆಂದು ಮಾರ್ಮಿಕವಾಗಿ ನುಡಿದರು. ಸ್ಟೇಷನ್ ಬಬಲಾದ ಪೂಜ್ಯರಾದ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ಸೂಂಟನೂರ ಪೂಜ್ಯರಾದ ಬಾಲಯೋಗಿ ಬಸವಣ್ಣಪ್ಪ ಮುತ್ಯ, ಚಿಣಮಗೇರಾದ ಪೂಜ್ಯರಾದ ಸಾಧು ಮಹಾರಾಜರ ಇದ್ದರು. ಭಾಗ್ಯವಂತಿ ದೇವಸ್ಥಾನದ ಆರಾಧಕರಾದ ಮಾತೋಶ್ರೀ ಶಿವಲೀಲಾ ತಾಯಿ ಸಾನ್ನಿಧ್ಯ ವಹಿಸಿದ್ದರು.ಕಲಾವಿದರಾದ ಗದಗ ಪುಣ್ಯಾಶ್ರಮದ ಗವಾಯಿಗಳಾದ ರವಿಕುಮಾರ ಆಳಂದ, ತಬಲಾವಾದಕರಾದ ಸಿದ್ದೇಶಕುಮಾರ ಲಿಂಗನಬಂಡಿ,ಕೋಳಲುವಾದಕರಾದ ಪ್ರಶಾಂತ ಗೋಲ್ಡ್ ಸ್ಮಿತ, ಸ೦ಗಮೇಶ ಜಿಡಗಾ, ಮಡಿವಾಳಪ್ಪ ನಂದೂರ ಪಟ್ಟಣ, ಆಂಜನೇಯ ಗುತ್ತೆದಾರ, ಮಹೇಶ ತೆಲೆಕುಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮಂತ ಉದನೂರ, ದಸ್ತಯ್ಯ ಗುತ್ತೇದಾರ, ಅಮೃತರಾವ ಶಿಂಧೆ, ರಾಜಕುಮಾರ ರಾಮಪುರೆ, ರಾಚಣ್ಣ ಮತ್ತಿಮೂಡ, ಶಾಂತಕುಮಾರ ಬಿರಾದಾರ, ಗುಂಡಪ್ಪ ಸಾವಳಗಿ, ಷಣ್ಮುಖ ಬಿರಾದಾರ, ಉದಯಕುಮಾರ ಹತಗು೦ದಿ, ಬಸವರಾಜ ಪಾಟೀಲ, ಧೂಳಯ್ಯ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಹಲವಾರು ಜನ ಭಾಗವಹಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…