ಬಿಸಿ ಬಿಸಿ ಸುದ್ದಿ

ದೇಹದಾನ ಮಾಡಿ ಹಲವು ಜೀವ ಉಳಿಸಿ: ಶ್ರೀ ಡಾ. ಅಪ್ಪಾರಾವ ದೇವಿ ಮುತ್ತಾ

ಕಲಬುರಗಿ: ಮನುಷ್ಯ ಜೀವಂತ ಇರುವಾಗ ದಾನ ಮಾಡದಿದ್ದರೂ ಪರವಾಗಿಲ್ಲ. ಸತ್ತ ಮೇಲಾದರೂ ದೇಹದಾನ ಮಾಡಿದರೆ, ನಾಲ್ಕು ಜೀವ ಉಳಿಸಿ ಸಾರ್ಥಕ್ಯ ಮೆರೆದಂತಾಗುತ್ತದೆ ಎಂದು ಶ್ರೀನಿವಾಸ ಸರಡಗಿಯ ಕೊಲ್ಲಾಪುರ ಮಹಾಲಕ್ಷ್ಮೀ ಪೀಠದ ಶ್ರೀ ಡಾ. ಅಪ್ಪಾರಾವ ದೇವಿ ಮುತ್ತಾ ಸಲಹೆ ನೀಡಿದರು.

ನಗರದ ಗಂಜ್ ನಗರೇಶ್ವರ ಶಾಲೆಯಲ್ಲಿ ತಮ್ಮ ಜನ್ಮ ದಿನ ನಿಮಿತ್ತ ದೇಹ ದಾನ ಮಾಡಿದ ನಾಲ್ಕು ಚಕ್ರ ತಂಡದ ಮುಖ್ಯಸ್ಥರು ಮಲಾದ್ವಯರಿಗೆ   ಪ್ರಮಾಣಪತ್ರ ವಿತರಿಸಿ ಮಾತನಾಡಿದ ಶ್ರೀಗಳು, ಸಮಾಜ ನಮಗೇನು ಮಾಡಿದೆ ಎಂದು ಪ್ರಶ್ನಿಸುವವರ ಸಂಖ್ಯೆ ಜಾಸ್ತಿ ಇದೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಯೋಚಿಸಬೇಕಿದೆ. ಈ ಮನೋಭಾವದವರ ಸಂಖ್ಯೆ ಹೆಚ್ಚಿದರೆ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.

ಮಾಲಾದ್ವಯರು ದೇಹ ದಾನ ಮಾಡುವ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದಾರೆ. ಇವರ ವಿವಿಧ ಚಟುವಟಿಕೆಗಳು ಮಾದರಿ ಎನಿಸಿದೆ. ಮನುಷ್ಯ ಹೆಂಡ ಕುಡಿದಷ್ಟು ಹಾಲು ಕುಡಿದರೆ ಆರೋಗ್ಯವಂತನಾಗಿರಬಹುದು. ದಂಡ ಕಟ್ಟಿದಷ್ಟು ದಾನ ಮಾಡಿದರೆ ಬಡವರಿಗೆ ನೆರವಾಗಬಹುದು ಎಂದು ಹೇಳಿದರು.

ಮಾಲಾ ದ್ವಯರ ಕಾರ್ಯ ಶ್ಲಾಘನೀಯ ಪ್ರತಿಯೊಬ್ಬರು ಇಂತಹ ಮಾನವೀಯ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು.. ಮಣ್ಣಲ್ಲಿ‌ ಮಣ್ಣಾಗುವ ದೇಹವನ್ನು ಸಮಾಜಕ್ಕೆ ಅರ್ಪಿಸಬೇಕು ಎಂದು ರವಿಂದ್ರ ಮುಕ್ಕಾ ಹೇಳಿದರು. ಅಥಿತಿಗಳಾಗಿ ಬಂದ ಡಾ.ಸುಧಾ ಹಲಕಾಯಿ ಅವರು ಮಲಾದ್ವಯರು ಕಲಬುರಗಿಯ ಕಣ್ಣುಗಳು,  ಹೆಣ್ಣುಮಕ್ಕಳಿಗೆಲ್ಲ ಪ್ರೇರಣೆ ಎಂದು ಹೇಳಿದರು.

ನಗರೇಶ್ವರ ಶಾಲೆ ಕಾರ್ಯದರ್ಶಿ ರವೀಂದ್ರ ಮುಕ್ಕಾ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಪ್ರಶಸ್ತಿ ಪ್ರದಾನ ಕಮಾಲಪೂರದ ತಹಶಿಲ್ದಾರರಾದ ಅಂಜುಮ್ ತಬಸ್ಸುಮ್ ನೆರೆವೆರೆಸಿದರು ಮುಖ್ಯ ಅತಿಥಿಗಳಾಗಿ ಎಚ್‌ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ರಮೇಶ ತಿಪ್ಪನೂರು ಬಂಧು , ಗುಲ್ಬರ್ಗ ಸೌತ್ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ ಗಾಜರೆ, ಯುವ ಜನಜಾಗೃತಿ ವೇದಿಕೆ ಸಂಸ್ಥಾಪಕ ಸಿದ್ದು ಅಂಕೂಶದೊಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಡಾ. ಶರಣರಾಜ ಚಪ್ಪರಬಂದಿ,, ಡಾ.ಸುಧಾ ಹಾಲಕಾಯಿ, ಉಪಸ್ಥಿತರಿದ್ದರು.

ಮಹೇಶಂದ್ರ ಪಾಟೀಲ್ ಕಣ್ಣಿಗೆ ಸ್ವಾಗತಿಸಿದರು. ಕಲ್ಯಾಣರಾವ ಮಾಟೀಲ್ ಕಣ್ಣಿ ಪ್ರಾಸ್ತಾವಿಕ ಮಾತನಾಡಿದರು. ಮಂಜು ಹಿರೊಳ್ಳಿಕರ್, ಮಾಲಿನಿ ಬುಟ್ಟೇಗಾರ ನಿರೂಪಣೆ ಮಾಡಿದರು. ನಾಲ್ಕು ಚಕ್ರ ತಂಡದ ಸದಸ್ಯರು ಹಾಗೂ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ನಾಲ್ಕುಚಕ್ರ ಸದಸ್ಯರಾದ ವಿಜಯಲಕ್ಷ್ಮಿ ಹೀರೆಮಠ ಜ್ಯೋತಿ ಕೊಟನೂರ್ ಪೂರ್ಣಿಮಾ ಕುಲಕರ್ಣಿ ವೈಶಾಲಿ ನಾಟಿಕಾರ್ ಜ್ಯೋತಿ ಪಾಟೀಲ್ ಉಮೇಶ ಕೊಟನೂರ್ ಪ್ರಸಾದ್ ಜೋಷಿ  ನಾಗರಾಜ ಹೆಂಬಾಡಿ ಆನಂದತೀರ್ಥ ರಾಹುಲ್ ರಾಠೊಡ್ ಸಚಿನ್‌ ಕಲ್ಲೂರ್ ಕಾರ್ತಿಕ್ ಇಬ್ರಾಂಪೂರ್ ಸುಭಾಷ್ ಮೇತ್ರೆ ಅಂಬರೀಶ ಬಂದರವಾಡ ಸಾಹೇಬಗೌಡ ಜಾಕಾಪೂರ ಉಪಸ್ಥಿತರಿದ್ದರು.

ಕಾಯಕ ಸ್ತ್ರೀ ಪ್ರಶಸ್ತಿ ಪುರಸ್ಕೃತರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿರುತ್ತಿರುವ ಮಹಿಳೆಯರನ್ನು ಗುರುತಿಸಿ ಕಾಯಕ ಸ್ತ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಮಲಾಪುರ ತಹಸೀಲ್ದಾರ್‌ ಅಂಜುಮ್ ತಬಸ್ಸುಮ್ ಪ್ರಶಸ್ತಿ ಪ್ರದಾನ ಮಾಡಿದರು. “ಸಾಹಿತಿ ಶೈಲಜಾ ಭಾಗೇವಾಡಿ, ಯೋಗ ಶಿಕ್ಷಕಿ ಸುಮಂಗಲಾ ಚಕ್ರವರ್ತಿ, ಗೃಹ ಉದ್ಯಮಿ ಅನ್ನಪೂರ್ಣ ಸಂಗೋಳಗಿ, ಯಶೋಧಾ ಕಟಕೆ, ನರ್ಸ್  ಸುಧಾರಾಣಿ ಅವರಿಗೆ ಪ್ರಶಸ್ತಿ ನೀಡಲಾಯಿತು.

ಸತ್ತ ಮೇಲೆ ನಮ್ಮ ಅಂಗಾಂಗಳು ನಾಲ್ಕಾರು ಜೀವ ಉಳಿಸುತ್ತವೆ. ಎಂದರೆ ದೇಹ ದಾನ ಮಾಡುವುದು ಅತ್ಯಂತ ಪುಣ್ಯದ ಕೆಲಸವೇ ಸರಿ, ದೇಹ ದಾನ ಮಾಡಲು ಎಲ್ಲರೂ ಮನಸ್ಸು ಮಾಡುವ ಅಗತ್ಯವಿದೆ. ಮಣ್ಣಲ್ಲಿ ಲೀನವಾಗಿಸಿ ಹಾಳು ಮಾಡುವ ಬದಲು ದೇಹ ದಾನ ಮಾಡಬೇಕು. ದೇಹ ದಾನ ಕುರಿತು ಜನಜಾಗೃತಿ ಮೂಡಿಸಲು ನಾಲ್ಕು ಚಕ್ರ ವಿಶೇಷ ಯೋಜನೆ ರೂಪಿಸಲಿದೆ ಎಂದು ಮಾಲಾ ದಣ್ಣೂರ ಮತ್ತು ಮಾಲಾ ಕಣ್ಣಿ ನಾಲ್ಕು ಚಕ್ರ ತಂಡದ ಮುಖ್ಯಸ್ಥರು ಹೇಳಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

15 hours ago