ಶಹಾಬಾದ: ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಶನಿವಾರ ನಗರದ ಅಂಚೆ ಕಚೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆ ಹಾಗೂ ಪ್ರಧಾನಿಗಳಾದ ನರೇಂದ್ರ ಮೋದಿಜಿರವರ ಜನ್ಮ ದಿನ ಶುಭಾಶಯಗಳು ಕೋರಿ ಪತ್ರ ಮುಖಾಂತರ ಸಂದೇಶ ಕಳಿಸಲಾಯಿತು.
ವಿಶ್ವ ಅಂಚೆ ದಿನಾಚರಣೆ ಅಂಗವಾಗಿ ಅಂಚೆ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
ನಗರಸಭೆಯ ನಾಮನಿರ್ದೇಶನ ಸದಸ್ಯ ಶರಣು ವಸ್ತ್ರದ್ ಮಾತನಾಡಿ, ಜಗತ್ತಿನ ದೊಡ್ಡ ಸಂವಹನ ಜಾಲವಾದ ಅಂಚೆಯು ಹಿಂದೆ ಪ್ರತಿ ಮನೆಯ ಸ್ನೇಹಿತನಾಗಿತ್ತು.
ಸಂದೇಶ ರವಾನೆಯಿಂದ ಹಿಡಿದು ಪಿಂಚಣಿವರೆಗೂ ಅಂಚೆ ಪಾತ್ರ ಬಹಳ ಮುಖ್ಯವಾಗಿದೆಅಂಚೆಯು ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಹಿತಿ ರವಾನಿಸುವಲ್ಲಿ ಪ್ರಮುಖ ಮಾರ್ಗವಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಆಯಾಮದೊಂದಿಗೆ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆಯು ಬ್ಯಾಂಕ್ ಕಾರ್ಯಗಳನ್ನು ಸಹ ನಿರ್ವಹಿಸುತ್ತಿದೆ. ಠೇವಣಿ ಇಡುವ ಸೌಲಭ್ಯವನ್ನು ಕಲ್ಪಿಸಿದೆ. ಆನ್‌ಲೈನ್ ಮೂಲಕ ವ್ಯವಹರಿಸಬಹುದಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ
ಹೇಳಿದರು.
ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗೂಲಕರ, ಬಸವರಾಜ ಬಿರಾದಾರ, ಪ್ರಮುಖರಾದ ಸುಭಾ? ಜಾಪೂರ,ಜಯಶ್ರೀ ಸೂಡಿ,ಆರತಿ ಕೂಡಿ,ದಿನೇಶ ಗೌಳಿ,ಸಂಜಯ ವಿಟ್ಕರ, ರಾಜೇಶ ದಂಡಗೂಲಕರ, ಭೀಮಯ್ಯ ಗುತ್ತೇದಾರ,ಕಿರಣ ದಂಡಗೂಲಕರ, ಮಹಾದೇವ ಕಿಲಾರಿ, ಅಂಚೆ ಕಚೇರಿ ಸಿಬ್ಬಂದಿಗಳಾದ ತಿಪ್ಪಣ್ಣ ಪೋಸ್ಟ್ ಮಾಸ್ಟರ್, ಪವನ್ ಕುಲಕರ್ಣಿ, ಸಂಕಪ್ಪ ಚೆಟ್ಟಿ, ನರಸಪ್ಪ, ನಾಗೇಂದ್ರಕುಮಾರ್, ವಿನೋದ್ ಚವಾಣ್, ಶಂಕರ್ ರಾಠೋಡ್ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…