ಶಹಾಬಾದ: ಕಟ್ಟಡ ಕಾರ್ಮಿಕರ ಬೇಡಿಕೆ ದಿನಾಚರಣೆ ಮತ್ತು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರವಿವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೆಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಕಟ್ಟಡ ಕಾರ್ಮಿಕರ ಬೇಡಿಕೆ ದಿನಾಚರಣೆಯನ್ನು ರಾಷ್ಟ್ರದಾದ್ಯಂತ ಆಚರಣೆ ನಡೆಸುತ್ತಿದ್ದೆವೆ. ನೋಟು ಅಮಾನ್ಯಕರಣದಿಂದ ಕೆಲಸಗಳು ಕಡಿಮೆಯಾಗಿ, ದೇಶದ ನಾಲ್ಕೂ ನೂರು ಕೋಟಿ ಅಸಂಘಟಿತರಾದ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೆ ಒಳಗಾಗಿದ್ದಾರೆ.ಆದರೆ ಈ ತೊಂದರೆಯನ್ನು ಸರಿಪಡಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಮಾತ್ರ ದುರ್ದೈವದ ಸಂಗತಿ. ರಾಜ್ಯದಲ್ಲಿ ನಿರ್ಮಾಣ ವಲಯದ ಕಾರ್ಮಿಕರಿಗಾಗಿ ೧೯ ಕಾರ್ಯಕ್ರಮಗಳು ಮಂಡಳಿಯಿಂದ ಘೋಷಿಸಲ್ಪಟ್ಟಿವೆ.ಸುಮಾರು ೨೪೦೦ ಕೋಟಿ ನಿಶ್ಚಿತ ಠೇವಣಿ ಮತ್ತು ಬಡ್ಡಿ ಸೇರಿ ಸೆಸ್ ಸಂಗ್ರಹವಾಗಿದೆ.೩೦ ಲಕ್ಷದಷ್ಟು ಕಾರ್ಮಿಕರು ಮಂಡಳಿಯಲ್ಲಿ ನೊಂದಣಿಯಾಗಿದ್ದಾರೆ.
ಆದರೆ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಹಚ್ಚಿನ ಸೌಲಭ್ಯ ನೀಡದೇ, ಸರ್ಕಾರದ ನಿರ್ದೇಶನ ಗಾಳಿಗೆ ತೂರಿದೆ.ಅಲ್ಲದೇ ಟೆಂಡರ್ ಕರೆಯದೇ ಕಳಪೆ ಮಟ್ಟದ ಸಾಮಗ್ರಿ ಖರೀದಿಸಿದೆ.ಆದರೆ ಕಟ್ಟಡ ಕಾಂಇಕರಿಗೆ ಸಿಗಬೇಕಾದ ಸೌಲಭ್ಯಗಳು ನಿಧಾನಗತಿಯಲ್ಲಿ ಸಾಗಿವೆ.ಸಕಾಲದಲ್ಲಿ ಅರ್ಜಿ ಸಲ್ಲಿಸಿದರೂ ಸಕಾಲ ಕಾನೂನಿಗೆ ಕಾರ್ಮಿಕ ಇಲಾಖೆಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.ಕೂಡಲೇ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿತರಿಸಬೇಕು ಸೇರಿದಂತೆ ಸ್ಥಳೀಯ ಕಾರ್ಮಿಕರಿಗೆ ಕಟ್ಟಡ ಕಾಮಗಾರಿಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು.ಕಟ್ಟಡಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಬೆಲೆ ನಿಯಂತ್ರಿಸಬೇಕು.
ರಿಯಲ್ ಎಸ್ಟೆಟ್ ಮೇಲಿನ ಜಿಎಸ್‌ಟಿ ಸಡಿಲಗೊಳಿಸಬೇಕು. ಮರಳು ನೀತಿ ಸಾರ್ವತ್ರೀಕರಣಗೊಳಿಸಬೇಕು. ಮಂಡಳಿಯಿಂದ ನೀಡುವ ಸೌಲಭ್ಯದಲ್ಲಿ ಜೇಷ್ಠತೆ ಕಾಪಾಡಬೇಕು.ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭಷ್ಟಾಚಾರ ತಡೆಗಟ್ಟಬೇಕು. ಕಲಬುರಗಿ ನಗರಕ್ಕೆ ಮತ್ತು ಜಿಲ್ಲೆಗೆ ಒಬ್ಬರಂತೆ ಕಾರ್ಮಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು.ಪ್ರತಿ ತಾಲೂಕಿಗೆ ಕಾರ್ಮಿಕ ನಿರೀಕ್ಷಕರನ್ನು ನೇಮಿಸಬೇಕು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೆಷನ್ ಅಧ್ಯಕ್ಷ ಭೀಮಶಾ, ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಹಣಮಂತರಾಯ ಪೂಜಾರಿ,ಪ್ರಕಾಶ ಕುಸಾಳೆ,ಯಶವಂತ ಪಾಟೀಲ, ರಾಮು ಜಾಧವ, ನಿಲೇಶ ರಾಠೊಡ, ಶೇಖಮ್ಮ ಕುರಿ, ಲಕ್ಷ್ಮಿಕಾಂತ ಸಾಗರ,ರಾಯಪ್ಪ ಹುರಮುಂಜಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…