ವಿಠ್ಠಲ ವಿಠ್ಠಲ ಎಂಬ ದೇವರ ಹೆಸರನ್ನು ಪಠಿಸಿದರೆ ಹೃದಯಾಘಾತದಿಂದ ಪಾರಾಗಬಹುದು ಎಂಬುದನ್ನು ಪುಣೆಯ ವೇದ ವಿಜ್ಞಾನದ ವಿ(ಅ)ಜ್ಞಾನಿಗಳು ತಿಳಿಸಿದ್ದಾರೆ.
ಈ ಮಾತುಗಳನ್ನು ಬಸವಾದಿ ಶರಣರ ವಿಚಾರಗಳ ಹಾಗೂ ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ಒರೆಗೆ ಹಚ್ಚಿ ನೋಡೋಣ. ಯಾವುದೆ ಶಬ್ಧವನ್ನು ಪುನರಪಿ ಅನ್ನುವುದರಿಂದ ಆ ಶಬ್ಧ ಬಾಯಿಪಾಠವಾಗ ಬಹುದು. ಆದರೆ ಹೃದಯಾಘಾತವಾಗುವುದು ಅದು ಹೇಗೆ ತಡೆಯುತ್ತದೆ ?
ಹೃದಯ ಸ್ಥಂಬನವಾಗುವ ಸೂಚನೆ ಕಂಡು ಬಂದಾಕ್ಷಣ ಪ್ರಾಥಮಿಕವಾಗಿ ರೋಗಿಯ ಎಡಭಾಗದ ಎದೆಯ ಮೇಲೆ ಎರಡೂ ಕೈಇಟ್ಟು ಅದುಮಬೇಕು. ಅಥವಾ ಆತನ ಬಾಯಿಯಲ್ಲಿ ಬಾಯಿ ಇಟ್ಟು ಉಸಿರು ತುಂಬಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಆದರೆ ಈ ವರೆಗೂ ಯಾರೊಬ್ಬರೂ ವಿಠ್ಠಲನ ನೆನೆಯುವುದರಿಂದ ಹೃದಯಾಘಾತ ನಿಲ್ಲಿಸಬಹುದೆಂದು ಹೇಳಿಲ್ಲ.
ವಿಠ್ಠಲ ಪದದಲ್ಲಿ ಇರುವ ‘ಠ್ಠ’ ಎಂಬ ಅಕ್ಷರ ಗಟ್ಟಿಯಾಗಿ ಅನ್ನುವುದರಿಂದ ಹೃದಯಾಘಾತ ನಿಲ್ಲಿಸಬಹುದೆಂಬುದು ವೇದ ವಿಜ್ಞಾನಿಗಳ ನಿಲುವು. ಇದನ್ನು ಅಧಿಕೃತ ಎಂದು ಹೇಳಬೇಕಾದವರು ವಿಜ್ಞಾನವನ್ನು ಓದಿರುವ ಡಾಕ್ಟರ್ ಗಳೆ ಹೊರತು ಅನ್ಯರಲ್ಲ.
ಆದರೆ ವಿಜ್ಞಾನಕ್ಕಿಂತ ಇಂದು ಅಜ್ಞಾನಿಗಳ ಹೇಳಿಕೆಗಳೆ ಬಹಳ ಮಹತ್ವ ಪಡೆಯುತ್ತಿರುವುದು ದುರಂತದ ಸಂಗತಿ. ವೇದ ಶಾಸ್ತ್ರ ಆಗಮಗಳು ಓದಿನ ಮಾತುಗಳು, ಸಂತೆಯ ಸುದ್ದಿಗಳು ಎಂದು ಬಸವಾದಿ ಶರಣರು ತಿಳಿಸಿ ಆಗಿದೆ.
ಯಾರನ್ನೋ ನೆನೆಯುವ ಮೂಲಕ ಅವರಂತೆ ಆಗುತ್ತೇವೆ ಎಂಬುದು ಮರೀಚಿಕೆ. ನಾನು ಯಾರಂತೆಯೋ ಆಗಬೇಕಾದರೆ ಮೊದಲು ನಾನು ಆ ಪಥದತ್ತ ಮುಖ ಮಾಡಬೇಕು. ನಂತರವಷ್ಟೆ ಅವರ ವಿಚಾರಗಳತ್ತ ನಾನು ಆಕರ್ಷಿತನಾಗಬಹುದು. ಈ ಸೆಳೆತ ಬಲವಾದಾಗ, ನಮ್ಮ ಮನಸ್ಸು ಆ ವ್ಯಕ್ತಿಯ ವ್ಯಕ್ತಿತ್ವದಿಂದ ಪ್ರಭಾವಗೊಂಡಾಗ ನಾವು ಗಟ್ಟಿಗೊಳ್ಳಬಹುದು. ಸದೃಢವಾಗಬಹುದು. ಆದರೆ ಯಾರನ್ನೋ ನೆನೆದರೆ, ಅವರ ಹೆಸರು ಪಠಿಸಿದರೆ ರೋಗ ಹೋಗುತ್ತದೆ ಎಂಬುದಕ್ಕೆ ಯಾವುದೆ ಆಧಾರಗಳಿಲ್ಲ.
ಎಂಬ ಅಮ್ಮಿಗೆಯ ದೇವಯ್ಯಗಳ ವಚನ ನಮ್ಮ ಕಣ್ಣುಗಳನ್ನು ತೆರೆಸುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…