ಕಲಬುರಗಿ: ಎರಡು ದಿನಗಳ ಕಾಲ ಬೆಂಗಳೂರಿನ ಜಯನಗರದ ಅಕ್ವಾಟಿಕ್ಸ್ ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಾರ್ಸ್ಟರ್ ಈಜು ಸ್ಪರ್ಧೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಸನ್ ಸಿಟಿ ಅಕ್ವಾಟಿಕ್ಸ್ ಸ್ವಿಮ್ಮೆರ್ಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಭಾಗವಹಿಸಿದ ಏಳು ಜನ ಈಜು ಸ್ಪರ್ಧಾರ್ಥಿಗಳು ಒಟ್ಟು 7 ಚಿನ್ನದ ಪದಕ , 12 ಬೆಳ್ಳಿ ಪದಕ , ಎಂಟು ಕಂಚಿನ ಪದಕ ಸೇರಿದಂತೆ 27 ಪದಕಗಳನ್ನು ಗೆದ್ದಿದ್ದಾರೆ, ಅದರ ಜೊತೆಗೆ ಒಟ್ಟಾರೆ ತಂಡಗಳ ರಿಲೇ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅವರಿಗೆ ಯುವ ಸಂಘಟಕರು , ಸಾಮಾಜಿಕ ಕಾರ್ಯಕರ್ತರಾದ ಸುನೀಲ ಮಾರುತಿ ಮಾನಪಡೆಯರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು ಸನ್ಮಾನಿಸಲಾಯಿತು.
ಈ ಸ್ಪರ್ಧೆಯಲ್ಲಿ ಬಾಗವಹಿಸಿದ ಲೋಕೇಶ ಪೂಜಾರಿ ಮೂರು ಚಿನ್ನದ ಪದಕ , ಒಂದು ಬೆಳ್ಳಿ ಪದಕ ಮೂರು ಕಂಚಿನ ಪದಕ , ಶರಣಪ್ಪ ಕುರಿಕೋಟ ಒಂದು ಚಿನ್ನದ ಪದಕ , ಒಂದು ಬೆಳ್ಳಿ ಪದಕ, ಮೂರು ಕಂಚಿನ ಪದಕ , ಶಿವಲಿಂಗಪ್ಪ ಸಿಂಗಶೆಟ್ಟಿ ಎರಡು ಚಿನ್ನದ ಪದಕ , ಒಂದು ಬೆಳ್ಳಿ ಪದಕ , ಒಂದು ಕಂಚಿನ ಪದಕ , ಮಂಚೇಂದ್ರ ಸಿಂಗ ಠಾಕೋರ ಒಂದು ಚಿನ್ನದ ಪದಕ ,ಒಂದು ಬೆಳ್ಳಿ ಪದಕ ಶಂಕರ್ ಕವಲಗಿ ಒಂದು ಚಿನ್ನದ ಪದಕ , ಎರಡು ಬೆಳ್ಳಿ ಪದಕ , ಒಂದು ಕಂಚಿನ ಪದಕ , ರೇಖಾ ಯಾಣಿ ಐದು ಬೆಳ್ಳಿ ಪದಕ , ಅಭಿಷೇಕ ಒಂದು ಬೆಳ್ಳಿ , ಒಂದು ಕಂಚಿನ ಪದಕ ಸೇರಿದಂತೆ ಒಟ್ಟು 27 ಪದಕಗಳನ್ನು ಜಯಸಿದ್ದಾರೆ.
ಈ ಸಂದರ್ಭದಲ್ಲಿ ವಾಲಿಬಾಲ್ ಆಟಗಾರ ರಾಘವೇಂದ್ರ ಬನ್ನೂರಕರ್ ,ಅಶೋಕ ಗುಲಗಂಜಿ ,ಸೋಮೇಶ ಪಾಟೀಲ , ಖುಷಿ ಥಾಕೋರ್, ಸುಶ್ಮಿತಾ ಪೂಜಾರಿ ಇದ್ದರು.. ಇದೆ ಸಂದರ್ಭದಲ್ಲಿ ಮಾತಾಡಿದ ಸುನೀಲ ಮಾರುತಿ ಮಾನಪಡೆಯವರು ಕಲಬುರಗಿ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಆದರೆ ಇಂದಿಗೂ ಅದು ಅದು ಸಾಧ್ಯವಾಗಿಲ್ಲ ಸರ್ಕಾರದ ಮಲತಾಯಿ ದೊರಣೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕ್ರೀಡಾರ್ಥಿಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುಲಿಲ್ಲ ಸಾಧನೆ ಮಾಡಿದರು.
ಅವರ ವೈಯಕ್ತಿಕ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಕಲಬುರಗಿ ನಗರದ ಕ್ರೀಡಾಂಗಣದಲ್ಲಿ ಕೋವಿಡ್ ನಿಂದ ಬಂದ್ ಆಗಿರುವ ಇನ್ನು ತೆರೆದಿಲ್ಲ ತರಬೇತಿದಾರರನ್ನು , ಜೀವರಕ್ಷಕರನ್ನು ನೌಕರರನ್ನು ಇನ್ನು ಕೆಲಸಕ್ಕೆ ಕರೆದಿಲ್ಲ ಇದರಿಂದಾಗಿ ಈಜುಕೊಳದಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದೆ ಪ್ರತಿಭೆಗಳು ತೊಂದ್ರೆ ಅನುಭವಿಸುತ್ತಿದ್ದಾರೆ ಹಿಂತಹ ಸಮಯದಲ್ಲಿಯೂ ತಮ್ಮ ಪ್ರಯತ್ನದ ಮೂಲಕ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದು ದೊಡ್ಡ ಸಾಧನೆ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…