ಕಲಬುರಗಿ: ಕಳೆದ ಒಂದು ವಾರಗಳಿಂದ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದ 7 ಕಿಮೀ ಭೂ ಪ್ರದೇಶದಲ್ಲಿ ಸತತವಾಗಿ ಭೂಕಂಪದ ಅನುಭವಕ್ಕೆ ಬೇಸತು ಜನರು ಗ್ರಾಮವನ್ನು ತೊರೆಯುತ್ತಿದ್ದಾರೆ.
ಗ್ರಾಮದ ತುಂಬಾ ಟ್ರಾಕ್ಟರಗಳು, ಕ್ರೋಸರ್ ಗಳು ಟಾಟಾ ಐಸಿ, ದೊಡ್ಡ ಆಟೋಗಳೇ ತುಂಬಿಹಹೋಗಿದ್ದು, ಸಾಮಾನು ತುಂಬಿಕೊಂಡು ಹೋಗುತ್ತಿವೆ. ಭಾರವಾದ ಹೃದಯದಿಂದ ನೀರುತುಂಬಿದ ಕಂಗಳಿಂದ ಊರುಬಿಡುತ್ತಿರುವ ಜನರ ಅಸಹಾಯಕ ದೃಶ್ಯಗಳು ಮನಕಲಕುವಂತಿದೆ. ಜನರಿಲ್ಲದೆ ಗ್ರಾಮ ಬಿಕೋ ಎನ್ನುತ್ತಿದೆ.
ಕಡಿಕೇಶ್ವರ, ರಾಯಕೋಡ್, ಕಪನೂರು, ಭೂತ್ಪರ, ರುದ್ನೂರು, ಹೊಡೆಬೀರನಹಳ್ಳಿ, ಮರನಾಳ್, ಭಂಡನಳ್ಳಿ, ನೆನಕನಳ್ಳಿ, ಕೊರವಿ ತಾಂಡಾ, ಸುಲೇಪೆಟ್, ನಾವದಗಿ, ತೇಗಲತಿಪ್ಪ, ಹೊಸಳ್ಳಿ (ಎಚ್) ಸೇರಿದಂತೆ ಹಲವು ಗ್ರಾಮದ ಜನರು ನಿನ್ನೆ ರಾತ್ರಿ 9:55ಕ್ಕೆ ಎರಡು ಬಾರಿ ಭೂಕಂಪ ಸಂಭವಿಸಿ ಮನೆಯಲ್ಲಿದ್ದ ಪಾತ್ರೆ ಮತ್ತು ಮನೆಗಳು ಬಿರುಕುಬಿಟ್ಟಿರುವುದರಿಂದ ರಸ್ತೆಯಲ್ಲಿ ಉಳಿಯಬೇಕಾಯಿತು.
ಈಗಾಗಲೇ ಭೂಕಂಪದ ವಿಪತ್ತು ಅನುಭವಿಸುತ್ತಿರುವ ಗ್ರಾಮಗಳಲ್ಲಿ ಈಗಾಗಲೇ ಡಂಗೂರ ಸಾರಿ ಮನೆಯಲ್ಲಿ ಯಾರು ಮಲಗಬಾರದು ಮನೆಯಿಂದ ಹೊರಬಂದು ಮಲಗಿ ಮುನ್ನೆಚ್ಚರಿಕೆ ವಹಿಸಿ ಎಂದು ತಾಲ್ಲೂಕು ಆಡಳಿತ ಮನವಿ ಮಾಡುತ್ತಿದೆ.
ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಭೂಕಂಪಿಸುತ್ತಿರುವ ಬಗ್ಗೆ ಕಾರಣ ಪತ್ತೆಹಚ್ಚುವಲ್ಲಿ ವಿಫಲಾಗುತ್ತಿದ್ದು, ಕಳೇದ 1 ವರ್ಷಗಳಿಂದ ಸತತ ಭೂಕಂಪ ಕುರಿತು ಗ್ರಾಮಸ್ಥರು ಆತಂಕೀಡಾಗಿದ್ದಾರೆ. ಕಾರಣ ಪತ್ತೆ ಹಚ್ಚಲು ಸಾಧ್ಯವಾಗದಿರುವುದರಿಂದ ಜನರು ಪ್ರಾಣ ರಕ್ಷಣೆಯ ಹಿತದೃಷ್ಟಿಯಿಂದ ಗ್ರಾಮ ತೊರೆಯುತ್ತಿರುವ ಕಂಡುಬರುತ್ತಿದೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…