ಬಿಸಿ ಬಿಸಿ ಸುದ್ದಿ

ಸ್ವಯಂ ಉದ್ಯೋಗದ ಮೂಲಕ ನಿರುದ್ಯೋಗ ನಿವಾರಿಸಲು ಕರೆ

ಆಳಂದ: ಯುವಕ, ಯುವತಿಯರು ಸರ್ಕಾರಿ ನೌಕರಿಯ ಮೇಲೆ ಅವಲಂಬಿತರಾಗದೆ ಇಲಾಖೆಯ ಸೌಲಭ್ಯಗಳು ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸಮಾಜದಲ್ಲಿನ ನಿರುದ್ಯೋU ಪೀಡಗನ್ನು ನಿವಾರಿಸಲು ಮುಂದಾಗಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಕರೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಪಂಚಾಯತ ಕಲಬುರಗಿ ಆಶ್ರಯದಲ್ಲಿ ಉದ್ಯಮ ಶೀಲತಾ ಜಾಗೃತಿ ಕಾರ್ಯಾಗಾರವನ್ನು ಅವರು ಉದ್ಘಾಟನೆ ಮಾತನಾಡಿದರು.

ಎಲ್ಲರಿಗೂ ಸರ್ಕಾರಿ ನೌಕರ ಅಸಾಧ್ಯವಾಗಿದೆ. ಕೈಗಾರಿಕೆ ಇಲಾಖೆ ಹಲವು ಇಲಾಖೆಗಳಲ್ಲಿನ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಹೇಳಿದರು.

ನಿರುದ್ಯೋಗ ನಿವಾರಣೆಗಾಗಿ ಕೇಂದ್ರದ ಸರ್ಕಾರ ಜನಪರ ಯೋಜನೆಗಳ ಜಾರಿಗೆ ತಂದಿದೆ. ಅದರ ಲಾಭವನ್ನು ಪ್ರತಿಯೊಬ್ಬ ನಿರುದ್ಯೋಗಿಗಳ ಪಡೆಯುವಂತಾಗಬೇಕು ಎಂದರು.

ಕೈಗಾರಿಕೆ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗಕ್ಕೆ ಆನ್‍ಲೈನ್ ಅರ್ಜಿಗಳ ಸಲ್ಲಿಕೆ ಮೊದಲು ಸಂಪೂರ್ಣ ಯೋಜನೆಗಳ ಕುರಿತು ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಮೊದಲು ಉದ್ಯೋಗಕ್ಕಾಗಿ ಯೋಜನೆ ರೂಪಿಸಿ ನಂತರ ಅರ್ಜಿ ಸಲ್ಲಿಸಬೇಕು.

ಬಹುತೇಕರು ಕೈಗಾರಿಕೆ ಇಲಾಖೆಗೆ ಯಂತ್ರಗಳ ಪಡೆಯಲು ಮಾತ್ರ ಅರ್ಜಿ ಸಲ್ಲಿಸದೆ, ಹೋಟೆಲ್ ವ್ಯಾಪಾರ, ಹಣ್ಣು, ತರಕಾರಿ, ಸಸಿ ಮಾರಾಟ, ಅಲಂಕಾರಕ ಸಾಮಗ್ರಿ ಸೇರಿ ಇತರ ವ್ಯಾಪಾರ ಉದ್ಯೋಗಕ್ಕೂ ಒಲವು ತೋರಬೇಕು. ಇದಕ್ಕಾಗಿ ಸುಮಾರು 40 ಲಕ್ಷದ ವರೆಗೂ ಸಾಲಸೌಲಭ್ಯಗಳು ನೀಡಲಾಗುತ್ತದೆ ಎಂದರು.

ಸ್ಥಳೀಯ ಎಸ್‍ಬಿಐ ಪ್ರಧಾನ ವ್ಯವಸ್ಥಾಪಕ ಇಂತೇಸಾರ ಹುಸೇನ ಮಾತನಾಡಿ, ಯೋಜನೆ ಮಾಡುವ ಮೊದಲು ಮಾಹಿತಿ ಪಡೆದು ನಂತರ ಬ್ಯಾಂಕಿಗೆ ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಿ, ವ್ಯವಹಾರ ಮಾಡುವ ಕುರಿತು ಮಾರುಕಟ್ಟೆಯಲ್ಲಿ ಕೈಗೊಳ್ಳುವ ಉದ್ಯೋಗದ ಪ್ರಗತಿ ಅದರ ಸಾಧನೆಯ ಕುರಿತು ತಿಳಿದುಕೊಳ್ಳಿ, ವ್ಯಾಪಾರದಲ್ಲಿ ಪೈಪೋಟಿ ಮಾಡದೆ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಫಲಾನುಭವಿಗಳು ನಡೆದುಕೊಳ್ಳಬೇಕು ಎಂದರು.

ಉದ್ಯೋಗಕ್ಕಾಗಿ ಸಾಲ ಪಡೆದಂತೆ ಸಮಯಕ್ಕೆ ಸಾಲ ಮರುಪವಾತಿಸಿ ಸಾಲನವೀಕರಿಸಬೇಕು. ಬ್ಯಾಂಕ್‍ಗಳು ನೀಡುವ ಹಣ ಸರ್ಕಾರದಲ್ಲ. ಜನ ಸಾಮಾನ್ಯರದ್ದಾಗಿದೆ. ನಿಮ್ಮ ಉದ್ಯೋಗಕ್ಕೆ ಕೇವಲ ಸಬ್ಸಿಡಿ ಮಾತ್ರ ಸರ್ಕಾರ ನೀಡುತ್ತದೆ. ಏಕಕಾಲಕ್ಕೆ ಸಾಲದ ಪೂರ್ಣ ಮೊತ್ತದ ಬೇಡಿಕೆ ಇಡದೆ ಹಂತ, ಹಂತವಾಗಿ ಸಣ್ಣ ಪ್ರಮಾಣದಿಂದ ಆರಂಭಿಸಿ ದೊಡ್ಡ ಸಾಲದ ಬೇಡಿಕೆಗೆ ಮುಂದಾಗಬೇಕು ಎಂದರು.

ಸಾರಿಗೆ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಇಲಾಖೆಯ ಸಹಾಯಕ ನಿರ್ದೇಶಕ ಮುಕುಂದ ರೆಡ್ಡಿ ಅವರು ಸ್ಕ್ರೀನ್ ಮೂಲಕ ಪರದೆಯ ಮೇಲೆ ಫಲಾನುಭವಿಗಳಿಗೆ ಕೈಗಾರಿಕೆ ಯೋಜನೆಗಳ ಮಾಹಿತಿ ನೀಡಿದರು.

ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಅಬ್ದುಲ್ ಅಜೀಂ, ಸೈಯದ್ ಆಶ್ಫಾಕ್ ಅಹ್ಮೆದ್, ರೇವಣಸಿದ್ಧಪ್ಪ ಘಂಟಿ, ಡಾ| ಚಂದ್ರಕಾಂತ ಚಂದಾಪೂರ ಉಪನ್ಯಾಸ ನೀಡುವರು. ತಾಲೂಕು ಕೈಗಾರಿಕೆ ವಿಸ್ತರಣಾಧಿಕಾರಿ ಜಾಫರ್ ಖಾಸೀಂ ಅನ್ಸಾರಿ ಪ್ರಸ್ತಾವಿಕ ಮಾತನಾಡಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago