ಜಿ.ಕೆ.ಗೋವಿಂದ ರಾವ್ 1937 ಅವರು ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಜನಿಸಿದವರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ರಂಗಭೂಮಿ, ಸಿನಿಮಾರಂಗದ ಒಡನಾಟದ ಪರಿಪಾಠವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯವಾಗಿತ್ತು.
ಅವರ ಪ್ರಕಟಿತ ಕೃತಿಗಳೆಂದರೆ ‘ಈಶ್ವರ ಅಲ್ಲಾ’ (ಕಿರುಕಾದಂಬರಿ), ‘ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ’, ‘ಶೇಕ್ಸ್‌ಪಿಯರ್ ಸಂವಾದ’ (ವಿಮರ್ಶಾ ಲೇಖನಗಳು), ‘ನಡೆ-ನುಡಿ’, ‘ನಾಗರಿಕತೆ’ ಮತ್ತು ‘ಅರಾಜಕತೆ’, ‘ಬಿಂಬ ಪ್ರತಿಬಿಂಬ’, ‘ಕ್ರಿಯೆ ಪ್ರತಿಕ್ರಿಯೆ’, ‘ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು?’ (ಸಂಕೀರ್ಣ ಬರಹಗಳ ಸಂಗ್ರಹಗಳು). ಮುಂತಾದವು, ಅವರ ಕೃತಿಗಳು ಆಗಿವೆ.
ಇಂತಹ ಬರಹಗಳ ಕೊಡುಗೆ ಕೊಟ್ಟ ನಟ, ಸಾಹಿತಿ, ರಂಗಭೂಮಿ ಕಲಾವಿದ, ಹಾಗೂ ಜನಪರ ಚಿಂತಕ ಜಿ.ಕೆ. ಗೋವಿಂದ ರಾವ್ ಅವರು ಅಸ್ತಂಗತರಾಗಿದ್ದಾರೆ ಈಗ. ಆದರೆ ಅವರು ನೀಡಿದ ಅಪಾರ ಅಮುಲ್ಯ ಕೊಡುಗೆಗಳು ನಮ್ಮಲ್ಲಿ ಜೀವಂತವಿವೆ.
ಇಂತಹ ಹಿರಿಯ ನಟ, ಚಿಂತಕ, ವಾಗ್ಮಿ, ಸಾಹಿತಿ ಜಿ.ಕೆ.ಗೋವಿಂದ ರಾವ್ ನಿನ್ನೆ ಹುಬ್ಬಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ. ವಯೋಸಹಜ ಅನಾರೋಗ್ಯೊಕ್ಕೆ ಈಡಾಗಿದ್ದ ಜಿ.ಕೆ.ಗೋವಿಂದ ರಾವ್ ತಮ್ಮ ಇಳಿ ವಯಸ್ಸಿನಲ್ಲೂ ರಂಗ ಚಟುವಟಿಕೆ ಮತ್ತು ಹೋರಾಟಗಳಲ್ಲಿ ಸಕ್ರೀಯರಾಗಿದ್ದವರು. ಈ ಎಲ್ಲಾ ಕ್ರೀಯಗಳಲ್ಲಿ ಸಕ್ರೀಯರಾಗಿದ್ದ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲಿಯೇ ಅಸುನೀಗಿದ್ದಾರೆ.
ಮೂಲತಹ ಇಂಗ್ಲೀಷ್ ಪ್ರೊಫೆಸರ್ ಆಗಿದ್ದ ಜಿ ಕೆ ಗೋವಿಂದ ರಾವ್ ಕನ್ನಡದ ಮೇಲೆ ಅಪಾರ ಹಿಡಿತ ಹೊಂದಿದ್ದವರು. ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದವರು. ಜಿ ಕೆ ಗೋವಿಂದ ರಾವ್ ಬಹುಮಖ ಪ್ರತಿಭೆ. ಸಾಹಿತ್ಯದ ಜೊತೆಜೊತೆಗೆ ನಾಟಕ ರಂಗದಲ್ಲೂ ಜಿ.ಕೆ. ಗೋವಿಂದ ರಾವ್ ಸಕ್ರೀಯರಾಗಿದ್ದವರು.
ರಂಗ ಕರ್ಮಿಯ ಜೊತೆಜೊತೆಗೆ ಹಲವು ಸಿನೇಮಾ ಮತ್ತು ಟಿವಿ ದಾರವಾಹಿಗಳಲ್ಲಿ ನಟಿಸಿದ್ದಾರೆ ಕೂಡ. ಯಾವುದೇ ಪಾತ್ರ ಕೊಟ್ಟರೂ ಜೀವಂತಿಕೆ ತುಂಬಬಲ್ಲ ಸಾಮರ್ಥ್ಯ ಜಿ.ಕೆ ಗೋವಿಂದ ರಾವ್ ರವರಿಗಿತ್ತು. ಈ ಕಾರಣದಿಂದ ಜಿ.ಕೆ.ಗೋವಿಂದ ರಾವ್ ದಾರವಾಹಿಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದವರು.
ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ, ರೆ ಮುಂತಾದ ಹಲವು ಸಿನೇಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದವರು. ಮಹಾಪರ್ವ ಮತ್ತು ಮಾಲ್ಗುಡಿ ಡೇಸ್ ಎಂಬ ಟಿವಿ ಕಾರ್ಯಕ್ರಮಗಳು ಜಿ.ಕೆ.ಗೋವಿಂದ ರಾವ್ ಅವರಿಗೆ ಬಹು ಪ್ರಸಿದ್ದಿಯನ್ನು ತಂದುಕೊಟ್ಟಿದ್ದವು.
ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಜಿ.ಕೆ.ಗೋವಿಂದ್ ರಾವ್, ಈಶ್ವರಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್ಪೀಯರ್ ನಾಟಕ ಅಧ್ಯಯನ, ಶೇಕ್ಸ್ಪೀಯರ್ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರೀಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್ ಮುಂತಾದ ಹಲವು ಕೃತಿಗಳನ್ನು ಹೊರತಂದಿದ್ದವರು.
ಚಳವಳಿಗಳಲ್ಲೂ ಮುಂಚೂಣಿಯಲ್ಲಿದ್ದ ಜಿ.ಕೆ.ಗೋವಿಂದ ರಾವ್ ಹೋರಾಟದ ಕ್ಷೇತ್ರದಲ್ಲಿ ಜಿಕೆಜಿ ಎಂದೇ ಚಿರಪರಿಚಿತರು. ಮಾನವ ಹಕ್ಕು ಉಲ್ಲಂಘನೆ, ಪ್ರಭುತ್ವದ ದೌರ್ಜನ್ಯ, ಅನ್ಯಾಯ ಅಕ್ರಮಗಳು ಎಲ್ಲೇ ನಡೆದರೂ ಜಿಕೆಜಿ ಹೋರಾಟ ಅಲ್ಲಿ ದಾಖಲಾಗುತ್ತಿತ್ತು. ಎಡಪಂಥೀಯ ಚಿಂತಕರ ಜೊತೆಗೆ ಗುರುತಿಸಿಕೊಂಡಿದ್ದ ಜಿ.ಕೆ.ಗೋವಿಂದ ರಾವ್ ಪ್ರಗತಿಪರ ಹೋರಾಟಗಾರರಾಗಿದ್ದವರು.
ಆದಿವಾಸಿ ವಿದ್ಯಾರ್ಥಿ ಬಂಧನದ ವಿರುದ್ಧದ ಹೋರಾಟ ಸೇರಿದಂತೆ ಕರ್ನಾಟಕದ ಬಹುತೇಕ ಚಳವಳಿಯಲ್ಲಿ ಜಿ.ಕೆ.ಗೋವಿಂದ ರಾವ್ ಭಾಗಿಯಾಗಿದ್ದವರು. ಪ್ರಖರ ವಾಗ್ಮಿಯೂ ಆಗಿದ್ದ ಜಿಕೆಜಿ ಭಾಷಣವು ಹಲವರನ್ನು ಪ್ರೇರೇಪಿಸುವಂತಿರುತ್ತಿತ್ತು. ಖಡಕ್ ಶೈಲಿಯಲ್ಲಿ ಭಾಷಣ ಮಾಡುವ ಜಿ.ಕೆ.ಗೋವಿಂದ ರಾವ್ ಮೇಲ್ನೋಟಕ್ಕೇ ಕಠೋರದಂತೆ ಕಂಡು ಬಂದರೂ ಮರು ಕ್ಷಣದಲ್ಲಿ ಮಾತೃಹೃದಯಿ ಎಂಬುದನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿತ್ತು.
ಮೊನ್ನೆ ಮುಂಜಾನೆ ಜಿ ಕೆ ಗೋವಿಂದ ರಾವ್ ತೀರಿದ್ದು ಸಾಹಿತ್ಯ, ರಂಗಚಟುವಟಿಕೆ, ಸಿನೇಮಾ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟವೇ ಆಗಿದೆ. ಮತ್ತೇ ಬಾ ಜಿ.ಕೆ.ಗೋವಿಂದ ರಾವ್ ಎಂಬುದೊಂದೇ ನಮಗುಳಿದಿರುವ ದಾರಿ…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…