ಬಿಸಿ ಬಿಸಿ ಸುದ್ದಿ

ಮಕ್ಕಳಲ್ಲಿ ಕೈಗಳ ನೈರ್ಮಲ್ಯದ ಜಾಗೃತಿ ಮೂಡಿಸುವ ಎಚ್ ಫಾರ್ ಹ್ಯಾಂಡ್‍ವಾಶಿಂಗ್ ಪುಸ್ತಕ ಬಿಡುಗಡೆ

ಬೆಂಗಳೂರು: ವಿಶ್ವದ ನಂಬರ್ ಒನ್ ಹೈಜಿನ್ ಸೋಪ್ ಬ್ರ್ಯಾಂಡ್ ಆಗಿರುವ ಲೈಫ್‍ಬಾಯ್ ಈ ವರ್ಷ ಇದೇ ಮೊದಲ ಬಾರಿಗೆ ವರ್ಣಮಾಲೆ ಪುಸ್ತಕ ಎಚ್ ಫಾರ್ ಹ್ಯಾಂಡ್‍ವಾಶಿಂಗ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ಲೋಬಲ್ ಹ್ಯಾಂಡ್‍ವಾಶಿಂಗ್ ಡೇ(ಜಿಎಚ್‍ಡಿ)ಯನ್ನು ಆಚರಿಸುತ್ತಿದೆ.

ಈ ಪುಸ್ತಕವನ್ನು ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರು ಬರೆದಿದ್ದು, ಕೈಗಳ ನೈರ್ಮಲ್ಯದ ಪರಿಕಲ್ಪನೆಗಳನ್ನು ಇಂಗ್ಲೀಷ್ ವರ್ಣಮಾಲೆಯೊಂದಿಗೆ ಅತ್ಯುತ್ತಮವಾಗಿ ಸಂಯೋಜಿಸಿದ್ದಾರೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಈ ಪುಸ್ತಕವನ್ನು ದೇಶದ ಶಾಲೆಗಳಲ್ಲಿ ಪ್ರಸಾರ ಮಾಡುವ ದಿಸೆಯಲ್ಲಿ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಲೇಖಕ ರಸ್ಕಿನ್ ಬಾಂಡ್, ಎಚ್‍ಯುಎಲ್‍ನ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ, ಲೈಫ್‍ಬಾಯ್‍ನ ಹ್ಯಾಂಡ್‍ವಾಶಿಂಗ್ ರಾಯಭಾರಿ ಕಾಜೋಲ್ ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ ಅವರು ಮಾತನಾಡಿ, “ಇಂದಿಗೂ ಸಹ ಜಾಗತಿಕವಾಗಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ 1 ಮಿಲಿಯನ್‍ಗೂ ಅಧಿಕ ಮಕ್ಕಳು ಡಯೇರಿಯಾ ಮತ್ತು ನ್ಯುಮೋನಿಯಾದಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಸಾಬೂನಿನಿಂದ ಕೈತೊಳೆದುಕೊಳ್ಳುವಂತಹ ಸುಲಭ ವಿಧಾನಗಳ ಮೂಲಕ ಇಂತಹ ರೋಗಗಳನ್ನು ತಡೆಗಟ್ಟಬಹುದಾಗಿದೆ. ಈ ಸಾಂಕ್ರಾಮಿಕವು ಕೈತೊಳೆಯುವುದು ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ವಿಷಯ ಎಂಬುದನ್ನು ಸಾಬೀತುಪಡಿಸಿದೆ. ಇಂದು, ನಾವು ಮಕ್ಕಳಲ್ಲಿ ಕೈತೊಳೆಯುವ ಪದ್ಧತಿಯ ಬದಲಾವಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತಿದ್ದೇವೆ.

ಏಕೆಂದರೆ, ಕೈತೊಳೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಾವು ನಮ್ಮ ಮೊದಲ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ಮಕ್ಕಳಲ್ಲಿ ಕೈತೊಳೆಯುವ ಒಳ್ಳೆಯ ಅಭ್ಯಾಸಗಳನ್ನು ಕಲಿಸುತ್ತದೆ. ಈ ಪುಸ್ತಕವನ್ನು ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರು ಬರೆದಿದ್ದಾರೆ. ಇವರು ಕೇವಲ ಲೇಖಕರಷ್ಟೇ ಅಲ್ಲ, ಇವರು ಮಕ್ಕಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ.

ಇವರು ಅತ್ಯದ್ಭುತವಾಗಿ ಪುಸ್ತಕವನ್ನು ರಚಿಸಿದ್ದಾರೆ ಮತ್ತು ಮಕ್ಕಳಲ್ಲಿ ಕೈತೊಳೆದುಕೊಳ್ಳುವ ಮಹತ್ವವನ್ನು ಪುನರುಚ್ಚರಿಸಲು ಸಹಕಾರಿಯಾಗಲಿದೆ. ನಮ್ಮ ಎಚ್ ಫಾರ್ ಹ್ಯಾಂಡ್‍ವಾಶಿಂಗ್ ಪುಸ್ತಕ ಉಪಕ್ರಮವನ್ನು ಜಾರಿಗೊಳಿಸಲು ಸಹಕಾರ ನೀಡಿದ್ದಕ್ಕಾಗಿ ಶಿಕ್ಷಣ ಸಚಿವಾಲಯಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

ಕೈತೊಳೆದುಕೊಳ್ಳುವುದು ಜಾಗತಿಕವಾಗಿ ಅಗತ್ಯವಾಗಿ ಪರಿಣಮಿಸಿದೆ. ವಿಶೇಷವಾಗಿ ಕಳೆದ ಎರಡು ವರ್ಷಗಳಿಂದ ಇದು ಅತ್ಯಗತ್ಯವೆನಿಸಿದೆ. ಆದರೆ, ನಮ್ಮ ಭವಿಷ್ಯದ ಪೀಳಿಗೆಗಳು ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಸಾಂಕ್ರಾಮಿಕ ರೋಗದಂತಹ ಭೀಕರವಾದುದು ಸಂಭವಿಸುವುದಕ್ಕೆ ಕಾಯಬೇಕಿಲ್ಲ ಎಂಬುದನ್ನು ಖಚಿತಪಡಿಸುವ ಸಮಯ ಈಗ ಬಂದಿದೆ’’ ಎಂದು ತಿಳಿಸಿದರು.

ಲೈಫ್‍ಬಾಯ್ ಹ್ಯಾಂಡ್‍ವಾಶಿಂಗ್ ರಾಯಭಾರಿ ಕಾಜೋಲ್ ಅವರು ಮಾತನಾಡಿ, “ಒಂದು ದಶಕದಿಂದಲೂ ನಾನು ಲೈಫ್‍ಬಾಯ್ ಜೊತೆಗೆ ಸಹಭಾಗಿತ್ವ ಹೊಂದಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಇದು ನನಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ತಾಯಂದಿರಾಗಿ ನಾವು ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂಬುದನ್ನು ಮನಗಂಡಿದ್ದೇವೆ. ಮಕ್ಕಳು ಇನ್ನೂ ಪ್ರಭಾವಶಾಲಿಗಳಾಗಿರುವಾಗ ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವಾಗ ಅಭ್ಯಾಸಗಳು ಉತ್ತಮವಾಗಿ ರೂಪುಗೊಳ್ಳುತ್ತವೆ ಎಂಬುದನ್ನು ನಾನು ನಂಬುತ್ತೇನೆ. ಈ ಅಭ್ಯಾಸಗಳು ನನಗೆ ವಿಶೇಷವಾದ ಸಂತೋಷವನ್ನು ಉಂಟುಮಾಡುತ್ತವೆ.

ಏಕೆಂದರೆ, ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಬ್ಬ ಪೋಷಕರ ಪರವಾಗಿ ಈ ಅದ್ಭುತವಾದ ಮತ್ತು ಕಲ್ಪನಾತ್ಮಕವಾದ ಪುಸ್ತಕ ರೂಪದ ಅಭ್ಯಾಸದ ಉಪಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವ ಶಿಕ್ಷಣ ಸಚಿವಾಲಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ’’ ಎಂದು ಹೇಳಿದರು.

ವರ್ಣಮಾಲೆ ಪುಸ್ತಕದ ಲೇಖಕ ರಸ್ಕಿನ್ ಬಾಂಡ್ ಅವರು ಮಾತನಾಡಿ, “ಮಕ್ಕಳಿಗಾಗಿ ನಾನು ಪುಸ್ತಕಗಳನ್ನು ಬರೆಯುತ್ತೇನೆ. ಆದರೆ, ಈ ಬಾರಿಯ ನನ್ನ ಬರವಣಿಗೆ ವಿಭಿನ್ನವಾಗಿದೆ. ಈ ಪರಿಕಲ್ಪನೆಯೊಂದಿಗೆ ಲೈಫ್‍ಬಾಯ್ ತಂಡ ಬಂದಾಗ ನನಗೆ ಆಶ್ಚರ್ಯ ಮತ್ತು ಕುತೂಹಲ ಉಂಟಾಗಿತ್ತು. ಏಕೆಂದರೆ, ನಾನು ಈ ಹಿಂದೆ ಮಾಡಿದ ಕೆಲಸಕ್ಕಿಂತ ಇದು ಭಿನ್ನವಾಗಿತ್ತು. ಎಚ್ ಫಾರ್ ಹ್ಯಾಂಡ್‍ವಾಶಿಂಗ್ ವರ್ಣಮಾಲೆ ಪುಸ್ತಕ ಯಾವಾಗಲೂ ವಿಶೇಷವಾಗಿದೆ. ಏಕೆಂದರೆ, ಇದು ಮೊದಲ ಬಾರಿ ಮಕ್ಕಳಿಗಾಗಿ ಬರೆದಿರುವ ವಿಶೇಷವಾದ ಪುಸ್ತಕವಾಗಿದ್ದು, ಅರ್ಥಪೂರ್ಣವಾಗಿದೆ.

ಲೈಫ್‍ಬಾಯ್ ಅನುಷ್ಠಾನಗೊಳಿಸಿರುವ ಎಚ್ ಫಾರ್ ಹ್ಯಾಂಡ್‍ವಾಶಿಂಗ್ ಅಭಿಯಾನವು ಒಂದು ಅದ್ಭುತವಾದ ಉಪಕ್ರಮವಾಗಿದೆ. ಈ ವರ್ಣಮಾಲೆ ಪುಸ್ತಕವು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಭವಿಷ್ಯದ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಅತ್ಯಂತ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ’’ ಎಂದು ತಿಳಿಸಿದರು.

2008 ರಲ್ಲಿ ಜಾಗತಿಕ ಕೈತೊಳೆದುಕೊಳ್ಳುವ ಪಾಲುದಾರಿಕೆಯೊಂದಿಗೆ ಲೈಫ್‍ಬಾಯ್ ಜಾಗತಿಕ ಕೈತೊಳೆದುಕೊಳ್ಳುವ ದಿನವನ್ನು ಸಹ-ಸಂಸ್ಥಾಪನೆ ಮಾಡಿದೆ. ಈ ಬ್ರ್ಯಾಂಡ್ ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದಕ್ಕೆ 2010 ರಿಂದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ 30 ಕ್ಕೂ ಹೆಚ್ಚು ದೇಶಗಳ 1 ಬಿಲಿಯನ್‍ಗೂ ಅಧಿಕ ಜನರಿಗೆ ಈ ಅಭಿಯಾನ ತಲುಪಿದೆ.

ಕಳೆದ ವರ್ಷ, ಲೈಫ್‍ಬಾಯ್ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಎಚ್ ಫಾರ್ ಹ್ಯಾಂಡ್‍ವಾಶಿಂಗ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು ಕೈಗಳ ನೈರ್ಮಲ್ಯ ನಡವಳಿಕೆಯ ಬದಲಾವಣೆಯನ್ನು ಶಾಲಾ ಪಠ್ಯಕ್ರಮದೊಂದಿಗೆ ಸಂಯೋಜನೆ ಮಾಡುವ ಮೂಲಕ ಪ್ರೋತ್ಸಾಹ ನೀಡುವ ಸಾಧನವಾಗಿ ಪರಿಣಮಿಸಿದೆ. ಮಕ್ಕಳ ಬೆಳವಣಿಗೆ ಹಂತದಲ್ಲಿಯೇ ವರ್ಣಮಾಲೆಯ ಮೂಲಕ ಅರಿವನ್ನು ಮೂಡಿಸಲಾಗುತ್ತದೆ. ಇದರಲ್ಲಿ ಎಚ್ ಎಂಬ ಇಂಗ್ಲೀಷ್ ಅಕ್ಷರವು ಕೇವಲ ಹ್ಯಾಟ್, ಹಾರ್ಸ್, ಹಿಪ್ಪೋ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಇನ್ನು ಮುಂದೆ ಕೈತೊಳೆಯುವುದನ್ನೂ ಅಂದರೆ, ಹ್ಯಾಂಡ್‍ವಾಶಿಂಗ್ ಅನ್ನೂ ಸೂಚಿಸುತ್ತದೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

7 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

18 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

18 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

20 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

20 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

20 hours ago