ಬಿಸಿ ಬಿಸಿ ಸುದ್ದಿ

ಹತಾಶೆಯಾಗಿ ಕಾಂಗ್ರೆಸ್ ನಾಯಕರಿಗೆ ಕಟೀಲ್ ಟೀಕಿಸುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಹತಾಶೆ ಹಾಗೂ ಪ್ರಚಾರದ ಗೀಳಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕ ದಾಳಿಗಿಳಿದಿದ್ದಾರೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ವ್ಯಕ್ತಿಯೊಬ್ಬ ಹತಾಶೆನಾದಾಗ ಏನೇನೋ ಮಾತನಾಡಲು ಶುರು ಮಾಡುತ್ತಾನೆ ಹಾಗೂ ದಾರಿ ತಪ್ಪುವುದು ಸಹಜ. ಕೆಲವೊಮ್ಮೆ ಹತಾಶೆ ತೀವ್ರಗೊಂಡಾಗ ಮದ್ಯಪಾನ ಮಾಡುತ್ತಾರೆ ಅಥವಾ ಡ್ರಗ್ ಕೂಡಾ ತೆಗೆದುಕೊಳ್ಳುತ್ತಾನೆ.

ಬಹುಶಃ ಕಟೀಲ್ ಆ ಹಂತ ತಲುಪಿಲ್ಲ ಎಂದು ಭಾವಿಸುತ್ತೇನೆ. ಆದರೆ ಕೆಲವೊಮ್ಮೆ ಅವರು ಮಾತನಾಡುವುದು ನೋಡಿದರೆ ಅನುಮಾನ ಮೂಡುತ್ತಿದೆ. ಒಂದು ವೇಳೆ ಅವರಿಗೆ ವೈದ್ಯರ ಆಪ್ತ ಸಮಾಲೋಚನೆ ಅವಶ್ಯಕತೆ ಇದ್ದರೆ ಕಾಂಗ್ರೆಸ್ ಪಕ್ಷ ವೈದ್ಯರಿಂದ ಸಮಾಲೋಚನೆ ಕೊಡಿಸಲಿದೆ ಎಂದು ಕುಟುಕಿದರು.

ಕಟೀಲ್ ಅವರನ್ನ ಸಿಎಂ ಹಾಗೂ ಯಡಿಯೂರಪ್ಪ ಅವರು ಓವರ್ ಶಾಡೋ ಮಾಡಿದ್ದಾರೆ. ಹಾಗಾಗಿ ಅವರ ಮಾತಿಗೆ ಅವರ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳು ಕಟೀಲ್ ಅವರಿಗೆ ಹೆಚ್ಚು ಪ್ರಚಾರ ಕೊಡುತ್ತಿಲ್ಲ. ಹಾಗಾಗಿ ಪ್ರಚಾರದ ಹಂಬಲದಿಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನ ಡ್ರಗ್ ಪೆಡ್ಲರ್ ಎಂದಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ದಂದೆ ಹೆಚ್ಚಾಗುತ್ತಿದೆ. ಸ್ವತಃ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಡ್ರಗ್ ದಂದೆಯಲ್ಲಿ ತೊಡಗಿ ಅರೆಸ್ಟ್ ಆಗಿದ್ದಾರೆ. ಮಣಿಪುರ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಲ, ಗುಜರಾತ್, ಮಧ್ಯಪ್ರದೇಶ ಹಾಗೂ ಪಂಜಾಬ್ ಗಳಲ್ಲಿ ಡ್ರಗ್ಸ್ ದಂದೆ ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿತ್ತು ಎಂದು ಆರೋಪಿಸಿದರು.

ಮುಂದುವರೆದು ಹೇಳಿದ ಅವರು ಈ ಕುರಿತು ಆರ್ ಎಸ್ ಎಸ್ ಮುಖಂಡರಾದ ಮೋಹನ್ ಭಾಗವತ್ ಅವರೇ ಹೇಳಿಕೆ ನೀಡಿದ್ದು ಗಮನಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ದಂದೆಯನ್ನು ತಡೆಯಲು ವಿಫಲವಾಗಿದ್ದಾರೆ ಎಂದರ್ಥವಾಯ್ತಲ್ಲ ಎಂದರು.

ಕರ್ನಾಟಕದಲ್ಲಿಯೂ ಡ್ರಗ್ ದಂದೆ ಹೆಚ್ಚಾಗಿದ್ದು ಮಾದಕವಸ್ತುಗಳ ಸಾಗಾಣಿಕೆಗೆ ಇಡೀ ಏಷ್ಯಾದಲ್ಲೇ ಬೆಂಗಳೂರು ಹೇಳಿ ಮಾಡಿಸಿದ ಜಾಗದಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿಯಲ್ಲಿ ಸುಮಾರು 2600 ಕೆಜಿಯ ರೂ 6 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿಯವರೇ. ಇನ್ನೂ ಬಿಜೆಪಿಯ ಸ್ಟಾರ್ ಪ್ರಚಾರಕಿ ಕೂಡಾ ಡ್ರಗ್ ದಂದೆಯ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.

ಕಟೀಲ್ ಅವರದೇ ಪಕ್ಷ ಆಡಳಿತ ನಡೆಸುವ ನಮ್ಮ ರಾಜ್ಯದಲ್ಲಿ 2018 ರಲ್ಲಿ 285 ಪ್ರಕರಣಗಳಲ್ಲಿ 44 ಜನ ವಿದೇಶಿಯರು ಅರೆಸ್ಟ್ ಆಗಿದ್ದಾರೆ. 2019 ರಲ್ಲಿ 768 ಪ್ರಕರಣಗಳಲ್ಲಿ 38 ವಿದೇಶಿಯರು ಹಾಗೂ 1260 ಸ್ಥಳೀಯರು ಅರೆಸ್ಟ್ ಆಗಿದ್ದಾರೆ.

ಮತ್ತು1053 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ.2020 ರಲ್ಲಿ 2766 ಪ್ರಕರಣದಲ್ಲಿ 70 ವಿದೇಶಿಯರು ಹಾಗೂ 3673 ಸ್ಥಳಿಯರು ಅರೆಸ್ಟ್ ಆಗಿದ್ದಾರೆ ಮತ್ತು 1912 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 2021 ರ ಅಕ್ಟೋಬರ್ ವರೆಗೆ 3337 ಪ್ರಕರಣದಲ್ಲಿ 100 ಕ್ಕೂಹೆಚ್ಚು ವಿದೇಶಿಯರು ಹಾಗೂ 4210 ಸ್ಥಳೀಯರು ಅರೆಸ್ಟ್ ಆಗಿದ್ದಾರೆ ಮತ್ತು 3255 ಕೆಜಿ ಡ್ರಗ್ ಪಡಿಸಿಕೊಳ್ಳಲಾಗಿದೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರಲ್ಲಿ 6 ಪಟ್ಟು ಹೆಚ್ಚಾಗಿದೆ ಹಾಗೂ 290% ಡ್ರಗ್ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಡ್ರಗ್ ತೆಗೆದುಕೊಳ್ಳುವ 40 ವಯಸ್ಸಿನವರಲ್ಲಿ 37 % ಇದ್ದಾರೆ .

ಮೊದಲ ಸಲ ಡ್ರಗ್ ಸೇವನೆ ಪ್ರಕರಣದಲ್ಲಿ ಸಿಕ್ಕವರು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳು ಹಾಗೂ ಕೊರೋನಾದಿಂದ ಕೆಲಸ ಕಳೆದುಕೊಂಡರಾಗಿದ್ದಾರೆ. ಆತಂಕಕಾರಿ ಎಂದರೆ ಶಿಕ್ಷಕರೇ ಇದರಲ್ಲಿ ಭಾಗಿಯಾಗಿದ್ದಾರೆ ಇದು ಸಂಶೋಧನೆಯಿಂದ ಹೊರಬಂದ ಮಾಹಿತಿ ಎಂದು ವಿವರಿಸಿದರು.

ಗ್ರಹ ಇಲಾಖೆ ಮಾಹಿತಿ ಪ್ರಕಾರ ಕಳೆದ ಮೂರು ಕೊಕೇನ್ ಬಳಕೆ ದುಪ್ಪಟ್ಟಾಗಿದೆ. ನಿಮ್ಮದೇ ಸರಕಾರ ಇತ್ತಲ್ಲ ಏನು ಮಾಡಿದಿರಿ ? ಮಲೆನಾಡು, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ರೆಸಾರ್ಟ್ ಹಾಗೂಹೋಂ ಸ್ಟೇಗಳಲ್ಕಿ ಡ್ರಗ್ ದೊರಕುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಚಿಂಚೋಳಿ ಸೇರಿದಂತೆ ಡ್ರಗ್ ದಂದೆ ಹೆಚ್ಚಾದ ಜಿಲ್ಲೆಯ ಶಾಸಕರನ್ನೇ ಹೊಣೆಗಾರರನ್ನಾಗಿ ಮಾಡಲಿ ಎಂದು ಎಂದು ಲೆಹರ್ ಸಿಂಗ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಡ್ರಗ್ ನಿಂದಾಗಿ ರಾಜ್ಯದಲ್ಲಿ ದಿನವೊಂದಕ್ಕೆ ಮೂರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಕ್ರೈಮ್ ವರದಿ ಪ್ರಕಾರ ದೇಶದಲ್ಲಿ 2018 ರಲ್ಲಿ 1230 ಜನ ಹಾಗೂ 2019 ರಲ್ಲಿ1113 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರಗ್ ನಿಯಂತ್ರಣಕ್ಕಾಗಿ ರಾಜ್ಯದ ಶಾಲೆ- ಕಾಲೇಜುಗಳಲ್ಲಿ ಗಳಲ್ಲಿ ಡ್ರಗ್ ವಿರೋಧಿ ಸಮಿತಿ ಮಾಡುವುದಾಗಿ ಸಿಎಂ ಹಾಗೂ ಆರೋಗ್ಯ ಸಚಿವರು ಹೇಳಿದ ಮಾತು ಇನ್ನೂ ಜಾರಿಗೆ ಬಂದಿಲ್ಲ.

ಇತ್ತೀಚಿಗೆ ಗುಜರಾತ್ ನ ಅದಾನಿ ಬಂದರಲ್ಲಿ ರೂ 21,000 ಕೋಟಿ ಮೌಲ್ಯದ 3000 ಕೆಜಿ ಡ್ರಗ್ ಸಿಕ್ಕಿದೆ. ಅದೇ ಗುಜರಾತ್ ನಲ್ಲಿ ಜೂನ್ ತಿಂಗಳಲ್ಲಿ 1.75 ಕೋಟಿ ವೌಲ್ಯದ 25,000 ಕೆಜಿ ತೂಕದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ ಅಫ್ಘಾನಿಸ್ತಾನ ಹಾಗೂ ಪಾಕಿಸ್ಥಾನ ದಿಂದ ಬಂದಿರುವ ಮಾಹಿತಿಇದೆ. ಇದೇನಾ ಗುಜರಾತ್ ಮಾಡಲ್ ? ಕಳೆದ ಏಳು ವರ್ಷದಲ್ಲಿ ಡ್ರಗ್ ಮಾಫಿಯಾ ವ್ಯಾಪಕವಾಗಿದೆ. ಡ್ರಗ್ ದಂದೆ ಯಿಂದ ಬರುವ ಹಣದಿಂದ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎನ್ನುವ ಮಾತಿದೆ.ಈ ಕುರಿತು ಕಟೀಲ್ ಯಾಕೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಕರಿಗೆ ನೌಕರಿ ಇಲ್ಲ. 8% ನಿರುದ್ಯೋಗ ಇದೆ. ಉದ್ಯೋಗ ಕೊಡುವ ಬದಲು ನಶೆಯನ್ನು ಹಂಚುತ್ತಿದ್ದೀರಾ ? Narcotics Control boardನಲ್ಲಿ DG ಪೋಸ್ಟ್ ಖಾಲಿ ಇದೆ. ಯಾಕೆ ಆ ಹುದ್ದೆ ತುಂಬಿಲ್ಲ?. ಕಟೀಲ್ ಅವರೇ ನಿಮಗೆ ನಿಜವಾದ ಶಕ್ತಿಇದ್ದರೆ ರಾಹುಲ್ ಗಾಂಧಿ ಅವರಿಗೆ ಪ್ರಶ್ನೆ ಮಾಡುವ ಬದಲು ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿ ಎಂದು ಸಲಹೆ ನೀಡಿದರು. ಕಟೀಲ್ ಅವರು ನಮ್ಮ ನಾಯಕರನ್ನ ಟೀಕಿಸಲಿ ನಾವು ಅವರ ನಾಯಕರ ಕುರಿತು ಮಾತನಾಡುತ್ತೇವೆ ಎಂದು ಸವಾಲ್ ಹಾಕಿದರು.

ನಾನು ಬಿಜೆಪಿ ನಾಯಕರ ಡ್ರಗ್ ಅವ್ಯವಹಾರ ಕುರಿತು ಹೇಳಿದ್ದೇನೆ. ಕಟೀಲ್ ಅವರು ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಅವರನ್ನ ಡ್ರಗ್ ಪೆಡ್ಲರ್ ಎನ್ನುತ್ತಾರೆ ? ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಹೇಳಿಕೊಳ್ಳುವಂತ ಯೋಜನೆ ಜಾರಿಗೆ ತಂದಿಲ್ಲ. ಆ ಬಗ್ಗೆ ಎಂದಾದರೂ ಹೇಳಿದ್ದಾರ? ಬಿಜೆಪಿಯವರು ವೈಯಕ್ತಿಕ ಟೀಕೆ ಮಾಡುವ ಬದಲು ವಿಷಯಾಧಾರಿತ ಚರ್ಚೆ ನಡೆಸಲಿ. ಸಿದ್ದಾಂತ ಹಾಗೂ ಅಭಿವೃದ್ದಿ ವಿಚಾರದಲ್ಲಿ ಚರ್ಚೆ ಮಾಡಲಿ ನಾವೂ ತಯಾರಿದ್ದೇವೆ ಎಂದು ಆಹ್ವಾನ ನೀಡಿದರು.

ಕೋಲಿ ಕಬ್ಬಲಿಗ ಹಾಗೂ ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಕುರಿತಾಗಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ” ಸಂತೋಷ ಮಾಡಲಿ. ಚಿಟಿಕೆ ಹೊಡೆಯುವುದರೊಳಗೆ ಮಾಡುವುದಾಗಿ ಹೇಳುತ್ತಾರೆ. ಕಳೆದ ಎರಡು ವರ್ಷದಿಂದ ಚಿಟಿಕೆ ಹೊಡೆಯುವುದರಲ್ಲೇ ಇದ್ದಾರೆ ” ಎಂದು ವ್ಯಂಗ್ಯವಾಡಿದರು.

” 05.03.2020 ರಂದು ಚಿಂಚೋಳಿ ಎಂ.ಪಿ. ಅವರು ಪ್ರಧಾನ ಮಂತ್ರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಬಂಜಾರ ಸಮುದಾಯವನ್ನು ಎಸ್ ಟಿ ಸೇರಿಸಲು ಮನವಿ ಮಾಡಿದ್ದಾರೋ ಇಲ್ಲವೋ ಎಂದು ಹಲವಾರು ಬಾರಿ ” ಚಿಂಚೋಳಿ ಎಂಪಿ” ಅವರಿಗೆ ಕೇಳಿದ್ದೇನೆ. ಉತ್ತರ ಕೊಟ್ಟಿಲ್ಲ, ಇತ್ತೀಚಿಗೆ ನಾನು ಎದುರಾದರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಒಂದು ವೇಳೆ ನಿಮಗೆ ಎಲ್ಲಾದರೂ ಸಿಕ್ಕರೆ ನೀವೆ ಕೇಳಿ ” ಎಂದು ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಜಗದೇವ ಗುತ್ತೇದಾರ, ಡಾ.ಕಿರಣ್ ದೇಶಮುಖ, ಚೇತನ ಗೋನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago