ಕಲಬುರಗಿ: ನಗರದ ನೆಹರು ಗಂಜ್ ಪ್ರದೇಶ ಬಳಿಯ ನೇತಾಜಿ ಚೌಕ್ನಲ್ಲಿ ನೇತಾಜಿ ನಾಗರಿಕ ಸಮಿತಿ ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ಡಿವೈಎಸ್ಪಿ ಸೋಮಶೇಖರ ವ್ಹಿ. ಮಠಪತಿ ಅಧ್ಯಕ್ಷತೆಯಲ್ಲಿ ಆಜಾದಿ ಹಿಂದ್ ದಿವಸ್ ಸಂಭ್ರಮಾಚರಿಸಲಾಯಿತು.
ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ೨೧ ಅಕ್ಟೋಬರ್ ೧೯೪೩ ರಲ್ಲಿ ಭಾರತ ಸ್ವಾತಂತ್ರ್ಯ ಉತ್ಸವ ದಿನಾಚರಣೆ ಎಂದು ಘೋಷಣೆ ಮಾಡಿದರು. ಅಂಡಮಾನ್ ಮತ್ತು ನಿಕೋಬಾರ ದ್ವೀಪವನ್ನು ರಾಜಧಾನಿಯನ್ನಾಗಿ ಘೋಷಿಸಿದಲ್ಲದೆ, ಭಾರತದ ಸ್ವಾತಂತ್ರ್ಯ ಮತ್ತು ಏಕತೆಗೆ ಶ್ರಮಿಸಿದವರು ಎಂದು ನೇತಾಜಿ ನಾಗರಿಕ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ ವ್ಹಿ. ಮಠಪತಿ ಸ್ಮರಿಸಿದರು. ರಾಷ್ಟ್ರಧ್ವಜ, ರಾಷ್ಟ್ರ ನಾಣ್ಯ, ರಾಷ್ಟ್ರೀಯ ಗೀತೆ ಮತ್ತಿತರ ಅಧಿಕೃತ ಅಂಶಗಳನ್ನು ಸಹ ಪ್ರಕಟಿಸಿದರು. ಹೀಗಾಗಿ, ನಮ್ಮ ಭಾರತಕ್ಕೆ ನಿಜವಾದ ಸ್ವಾತಂತ್ರ ಸಿಕ್ಕಿದ್ದು ೨೧ನೇ ಅಕ್ಟೋಬರ್ ೧೯೪೩ ರಲ್ಲಿ, ಪ್ರಥಮ ಪ್ರಧಾನಿ ಸುಭಾಷ್ಚಂದ್ರ ಬೋಸ್ ಅವರಾಗಿದ್ದಾರೆ ಎಂದು ಗುಣಗಾನ ಮಾಡಿದರು.
ಅಲ್ಲದೆ, ೧೨ ವಿದೇಶಗಳಲ್ಲೂ ಭಾರತ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖವಿದೆ. ಜಪಾನ್, ಸಿಂಗಾಪುರ, ಜರ್ಮನಿ ಮೊದಲಾದ ದೇಶಗಳಲ್ಲಿ ಸೈನ್ಯ ಹುಟ್ಟು ಹಾಕಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಂತಯ್ಯ ಸಂಧಿಮಠ, ಮಹಾದೇವಯ್ಯ ಕರದಳ್ಳಿ, ಗಿರೀಶಗೌಡ ಇನಾಂದಾರ್ ದುಮ್ಮುದ್ರಿ, ಓಂ. ಆರ್ ವಸ್ತ್ರದ್, ಮಚ್ಚೇಂದ್ರನಾಥ ಮೂಲಗೆ, ಸಿದ್ದಯ್ಯ ಸಾವಳಗಿ, ಸುರೇಶ ಮಾಲು, ಆರ್. ಜೈನ್, ಅಂಕಿತ್ ಜಿ. ಮುದ್ದಾ, ಎಂ.ಇಂಡಿ, ಚವ್ಹಾಣ, ಅನವೀರ ಸೇರಿದಂತೆ ಅನೇಕರು, ಹಿತೈಷಿಗಳು, ಅನುಯಾಯಿಗಳು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…