ಕಲಬುರಗಿ: ಅನ್ನಪೂರ್ಣಾ ಪುರಾತನ ಕಲಾ ಸಾಂಸ್ಕೃತಿಕ ಸಂಸ್ಥೆ ಅಡಿಯಲ್ಲಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 11 ಪುಣ್ಯಸ್ಮರಣೋತ್ಸವ ಹಾಗೂ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ಸಿದ್ಧಾನಂದ ಶಿವಯೋಗಿಗಳು ರೇಣುಕಾಚಾರ್ಯ ಆಶ್ರಮ ಇವರು ಮಾತನಾಡಿ ಒತ್ತಡವನ್ನು ನಿವಾರಿಸಲು ಸಂಗೀತವು ಒಂದು ಉತ್ತಮ ಮಾರ್ಗವಾಗಿದೆ. ಇದು ಮನುಷ್ಯನ ಮನಸ್ಥಿತಿಯನ್ನು ಸುಧಾರಿಸುತ್ತದೆ.ಸಂಗೀತ ಆಲಿಸುವುದರಿಂದ ಕೇಂದ್ರೀಕೃತ ಕಲಿಕೆಯ ವತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಮಕ್ಕಳಿಗೆ ಸಂಗೀತ ಶಿಕ್ಷಣ ಬಹಳ ಅವಶ್ಯ. ಅಲ್ಲದೆ ಸಂಗೀತಕ್ಕೆ ರೋಗ ಕಳೆಯುವ ಶಕ್ತಿ ಇದೆ ಎಂದು ನುಡಿದರು.
ಉದ್ಘಾಟಕರು: ಸಚಿನ್ ಕಡಗಂಚಿ ಕಲಬುರ್ಗಿ ಮಹಾನಗರ ಪಾಲಿಕೆಯ ಸದಸ್ಯರು ಇವರು ಮಾತನಾಡಿ ಕಲೆ ಕಲಾವಿದರು ನಮ್ಮ ದೇಶದ ಬಹುದೊಡ್ಡ ಆಸ್ತಿ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಕಲೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆ ಅಧ್ಯಕ್ಷರಾದ ಸಿದ್ದಯ್ಯ ಎಸ್ ಹಿರೇಮಠ ಸುಂಟನೂರ ಮಾತನಾಡಿ ಸಂಗೀತ ಸಾಹಿತ್ಯ ಒಂದು ನಾಣ್ಯದ ಎರಡು ಮುಖ ಇದ್ದಂತೆ ಅದರಂತೆ ಎರಡೂ ಕ್ಷೇತ್ರಗಳಲಿಯು ಡಾ.ಪಂ.ಪುಟ್ಟರಾಜ ಗವಾಯಿಗಳವರ ಕೊಡುಗೆ ಅಪಾರ ಎಂದರು. ಮುಖ ಅತಿಥಿಗಳಾಗಿ ರಾಚಣ್ಣ ಗಟಿಬ್ಯಾಳಿ ಜ್ಯುವೆಲ್ಲರ್ಸ್ ಮಾಲೀಕರು, ಶಾರದ ವಿ.ಸಿ.ಪಾಟೀಲ ಕಲಬುರ್ಗಿ, ವೀರಶೈವ ಮಹಾಸಭಾ ಸದಸ್ಯರು, ಅತಿಥಿಗಳು: ಅರ್ಚನ ಕುಶಾಲ ಪಾಟೀಲ
ಹಾಗು ಸಂಸ್ಥೆ ಕಾರ್ಯದರ್ಶಿಗಳಾದ ಯುವ ಸಾಹಿತಿ ಕರ್ನಾಟಕ ಚೇತನ ಪ್ರಶಸ್ತಿ ಪುರಸ್ಕೃತ ಶ್ರೀ ಬಂಡಯ್ಯಸ್ವಾಮಿ ಹಿರೇಮಠ ಉಪಸ್ಥಿತಿ ಇದರು ಹಿರಿಯರ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ ಅಣ್ಣಾರಾಯ ಮತ್ತಿಮಡು , ಸೈದಪ್ಪ ಚೌಡಾಪುರ, ಮಲ್ಲಿಕಾರ್ಜುನ್ ಬಾಗೇವಾಡಿ ಮಣೂರು , ತೋಟಯ್ಯ ಶಾಸ್ತ್ರಿ ಅಬ್ಬೆತುಮಕೂರು, ಕುಮಾರಿ ಸ್ವರೂಪ ವಾಲಿ , ಕುಮಾರಿ ನಾಗೇಶ್ರಿ ಕೋಣೆ, ನಿರ್ಮಲಾ ಕೋಣೆ, ಸಹನಾ ಕೋಡ್ಲಿ , ಭಾಗ್ಯಶ್ರೀ ಹಿರೇಮಠ ಸಂಗೀತ ನೀಡಿದರು ಜೊತೆಗೆ ರೇವಣಸಿದ್ಧ ದೇಸಾಯಿ ಕಲ್ಲೂರು ,ವೀರಭದ್ರಯ್ಯ ಸ್ಥಾವರಮಠ ,ಸಂತೋಷ್ ಕೋಡ್ಲಿ ತಬಲಾ ಸೇವೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯಾದ ಕಮಲಾ ಪಾಟೀಲ ಅವರು ನಿರೂಪಿಸಿದರು ಈರಯ್ಯ ಕನ್ನೊಳ್ಳಿ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…