ಕಲಬುರಗಿ: ಪರಮಪೂಜ್ಯ ಶ್ರೀ ಹಾನಗಲ್ ಕುಮಾರ ಮಾಹಾ ಸ್ವಾಮಿಗಳು ವೀರಶೈವ ಲಿಂಗಾಯತ ಧರ್ಮ ರಕ್ಷಣೆಗಾಗಿ ಅಭೀವೃದ್ಧಿಗಾಗಿ ಸಂಸ್ಕೃತಿ ಪರಂಪರೆ ರಕ್ಷಣೆಗಾಗಿ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಾಹಾಸಭಾ ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದು, ಕಲಬುರಗಿ ಮಾಹಾಸಭಾ ಇದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ ಎಂದು ಎಂ.ಎಸ್. ಪಾಟೀಲ್ ನರಿಬೋಳ ಅವರು ಅಖಿಲ ಭಾರತ ವೀರಶೈವ ಮಾಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಅವರು ತಮ್ಮ ಪತ್ರದಲ್ಲಿ ಮಹಾಸಭಾಕ್ಕೆ ಹಾಗೂ ಸಮಾಜದ ಗೌರವಕ್ಕೆ ದಕ್ಕೆಯಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ ಜಿಲ್ಲೆಯ ಹಿರಿಯ ಸದಸ್ಯರಿಗೂ ಮಾಹಾಸಭೆಯ ಮಾಜಿ ಅಧ್ಯಕ್ಷರಿಗೂ ಯಾರಿಗೂ ತಿಳಿಸದೇ ರಾಜ್ಯಾಘಟಕ ಚುನಾವಣೆಯನ್ನು ಕದ್ದುಮುಚ್ಚಿ ನಡೆಸುತ್ತಾರೆ. ಮತ್ತು ಮಾಹಾಸಭೆಗೆ ಸದಸ್ಯರಲ್ಲದವರನ್ನು ಉದಾ:- ಸುರೇಶ ಪಾಟೀಲ್ ಜೋಗೂರ, ಮಾಹಾಸಭೆಗೆ ಸದಸ್ಯರೆ ಆಗಿಲ್ಲ. ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಅವರನ್ನು ಬಳಸಿಕೊಂಡು ಸದಸ್ಯರನ್ನ ಉಚ್ಚಾಟಿಸುವ ಬೇದರಿಕೆ ಹಾಕುತ್ತಿದ್ದಾರೆಂದು ಅವರು ದೂರಿದ್ದಾರೆ.
ಇದರಿಂದ ಮಾಹಾಸಭೆ ಸದಸ್ಯರಾದವರಿಗೆ ಗೌರವ ಇಲ್ಲದಂತಾಗಿದೆ. ಆದ್ದರಿಂದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ ಅವರನ್ನು ಕೂಡಲೇ ಉಚ್ಚಾಟಿಸಬೇಕು. ಸದಸ್ಯರಾಗದೆ , ಅದ್ಯಕ್ಷರಾದವರನ್ನು, ಮಾಹಾಸಭೆಗೆ ಸದಸ್ಯರನ್ನಾಗಿ ಮಾಡಿಕೊಳ್ಳಬಾರದು ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳ ನೂತನ ಪದಾಧಿಕಾರಿಗಳಾದವರಲ್ಲಿ ಯಾರಾದವರು ಸದಸ್ಯರಾಗದವರು ಯಾರಾದರೂ ಇದ್ದರೆಯೆ ಎಂಬುದನ್ನು ಪರಿಶೀಲಿಸಬೇಕು. ಕಲಬುರಗಿ ಜಿಲ್ಲಾ ಘಟಕಕ್ಕೆ ಒಂದು ತಿಂಗಳೊಳಗಾಗಿ ಚುನಾವಣೆ ನಡೆಸಬೇಕೆಂದು ತಮ್ಮ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಿವ್ಯಾ ಆರ್. ಹಾಗರಗಿ, ಸದಸ್ಯರು, ರಾಜೇಶ ಹಾಗರಗಿ ಸೇರಿದಂತೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…